Thursday, June 18, 2020

ಚೀನೀ ಕಂಪೆನಿಗೆ ರೈಲ್ವೇ ಪಿಎಸ್‌ಯು ನೀಡಿದ್ದ ೪೭೧ ಕೋಟಿ ರೂ. ಗುತ್ತಿಗೆ ರದ್ದು

ಚೀನೀ ಕಂಪೆನಿಗೆ ರೈಲ್ವೇ ಪಿಎಸ್ಯು ನೀಡಿದ್ದ
೪೭೧ ಕೋಟಿ ರೂ. ಗುತ್ತಿಗೆ ರದ್ದು

ನವದೆಹಲಿ: ಸಿಗ್ನಲಿಂಗ್ಗೆ ಸಂಬಂಧಿಸಿದ ಚೀನಾ ಸಂಸ್ಥೆಯೊಂದರ ಜೊತೆಗಿನ ೪೭೧ ಕೋಟಿ ರೂಪಾಯಿ ವ್ಯವಹಾರದ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಲು ಭಾರತೀಯ ರೈಲ್ವೆಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿಎಫ್ಸಿಸಿಐಎಲ್) 2020 ಜೂನ್ 18ರ ಗುರುವಾರ ನಿರ್ಧರಿಸಿತು.

ಸಿಗ್ನಲಿಂಗ್ ಗುತ್ತಿಗೆಯನ್ನು ಬೀಜಿಂಗ್ ರಾಷ್ಟ್ರೀಯ ರೈಲ್ವೆ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಗೆ ಸಿಗ್ನಲ್ ಮತ್ತು ಸಂವಹನ ಸಂಸ್ಥೆಗೆ ೨೦೧೬ ರಲ್ಲಿ ನೀಡಲಾಗಿತ್ತು.

ಚೀನಾದ ಕಂಪನಿಯು ೪೧೭ ಕಿ.ಮೀ ಉದ್ದದ ಕಾನ್ಪುರ-ದೀನ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿತ್ತು. ಯೋಜನೆಯ ವೆಚ್ಚ ೪೭೧ ಕೋಟಿ ರೂ ಎಂಬುದಾಗಿ ನಿಗದಿ ಪಡಿಸಲಾಗಿತ್ತು.

ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸುವುದಾಗಿ ಪ್ರಕಟಣೆಯಲ್ಲಿ ಪ್ರಕಟಿಸಿರುವ ಡಿಎಫ್ಸಿಸಿಐಎಲ್, ಚೀನೀ ಕಂಪನಿಯು ನಾಲ್ಕು ವರ್ಷಗಳಲ್ಲಿ ಕೇವಲ ಶೇಕಡಾ ೨೦ರಷ್ಟು ಮಾತ್ರ ಕೆಲಸವನ್ನು ಪೂರ್ಣಗೊಳಿಸಿದೆ ಎಂದು ಹೇಳಿತು.

ಒಪ್ಪಂದದ ಪ್ರಕಾರ ತಾಂತ್ರಿಕ ದಾಖಲೆಗಳನ್ನು ನೀಡಲು ಚೀನಾ ಕಂಪನಿ ಹಿಂಜರಿಯುತ್ತಿದೆ ಎಂದು ಡಿಎಫ್ಸಿಸಿಐಎಲ್ ಹೇಳಿತು.

ಚೀನಾದ ಸಂಸ್ಥೆಯು ಎಂಜಿನಿಯರ್ಗಳು / ಅಧಿಕೃತ ಸಿಬ್ಬಂದಿಯನ್ನು ನಿವೇಶನದಲ್ಲಿ ಒದಗಿಸಲು ನಿರಾಕರಿಸಿದೆ. ಇದು ಗಂಭೀರ ಲೋಪವಾಗಿದೆ ಎಂದು ಡಿಎಫ್ಸಿಸಿಐಎಲ್ ಹೇಳಿದೆ.

"ಪ್ರತಿ ಹಂತದಲ್ಲೂ ಸಭೆಗಳು ನಡೆದಿವೆ, ಆದರೆ ಪ್ರಗತಿಯಲ್ಲಿ ಯಾವುದೇ ಸುಧಾರಣೆಯಿಲ್ಲ" ಎಂದು ಡಿಎಫ್ಸಿಸಿಐಎಲ್ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.

ಲಡಾಖ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆ ಮುಖಾಮುಖಿಯಾದ ನಂತರ ೨೦ ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾವನ್ನು ಎದುರಿಸಲು ಆರ್ಥಿಕ ಕ್ರಮಗಳ ಬಗ್ಗೆ ಕೂಡಾ ಭಾರತವು ಪರ್ಯಾಲೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಜಿ ಮಾರುಕಟ್ಟೆಯಂತಹ ದೊಡ್ಡ ಮತ್ತು ಪ್ರಮುಖ ಯೋಜನೆಗಳಲ್ಲಿ ಭವಿಷ್ಯ ಹೂಡಿಕೆಗಾಗಿ ಎದುರುನೋಡುತ್ತಿರುವ ಸಂಸ್ಥೆಗಳ ಭಾಗವಹಿಸುವಿಕೆ ಸೇರಿದಂತೆ, ಕನಿಷ್ಠ ೧೦೦ ಚೀನೀ ಉತ್ಪನ್ನಗಳು ಡಂಪಿಂಗ್ ವಿರೋಧಿ ಕ್ರಮಗಳಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಹೆಸರು ಹೇಳಲು ಇಚ್ಛಿಸದ ನಾಲ್ವರು ಅಧಿಕಾರಿಗಳು ಹೇಳಿದರು.

ಆದಾಗ್ಯೂ, ಭಾರತವು ಯಾವುದೇ ತೋಳು ತಿರುಚುವ ಕೆಲಸಕ್ಕೆ ಇಳಿಯುವುದಿಲ್ಲ. ಅದು ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವ ಮತ್ತು ಅದರ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯವಾದ ಕ್ರಮಗಳನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳುತ್ತದೆಎಂದು ಅಧಿಕಾರಿಗಳು ತಿಳಿಸಿದರು.

ಚೀನಾಕ್ಕೆ ವಿವೇಚನೆ ಉದಿಸಲಿ ಎಂದು ನಾವು ಹಾರೈಸುತ್ತೇವೆ. ನಮ್ಮ ಮುಂದೆ ಹಲವಾರು ಆಯ್ಕೆಗಳಿವೆ ಮತ್ತು ಪರಿಸ್ಥಿತಿಯನ್ನು ಅನುಸರಿಸಿ ಅವುಗಳನ್ನು ಚಲಾಯಿಸಲು ನಾವು ಹಿಂಜರಿಯುವುದಿಲ್ಲಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದರು.

ವ್ಯಾಪಾರಿಗಳು ಕೂಡಾ ಚೀನಾಕ್ಕೆ ವಿರುದ್ಧವಾಗಿದ್ದಾರೆ. ಕೋಟಿ (೭೦ ದಶಲಕ್ಷ) ಸ್ಥಳೀಯ ವ್ಯಾಪಾರಿಗಳ ಪ್ರಬಲ ಸಂಘಟನೆಯಾಗಿರುವ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಚೀನಾದ ಸರಕುಗಳನ್ನು  ಬಹಿಷ್ಕರಿಸುವ ರಾಷ್ಟ್ರವ್ಯಾಪಿ ಆಂದೋಲನ ಕೈಗೊಳ್ಳಲು ನಿರ್ಧರಿಸಿದೆ ಎಂದು ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.

ದೇಶೀಯ ಉದ್ಯಮವನ್ನು ಹಾನಿಗೊಳಿಸುತ್ತಿರುವ ಚೀನಾದ ಸರಕುಗಳ ಒಳಹರಿವಿನ ವಿರುದ್ಧ ಹಣಕಾಸು ಮತ್ತು ವಾಣಿಜ್ಯ ಎರಡೂ ಸಚಿವಾಲಯಗಳು ಈಗಾಗಲೇ ಕ್ರಮ ಕೈಗೊಳ್ಳುತ್ತಿವೆ.

No comments:

Advertisement