ನಿವೃತ್ತ
ಸೇನಾಧಿಕಾರಿ ಲೆ.ಜ.ವೋಹ್ರಾ ಕೊರೊನಾಕ್ಕೆ
ಬಲಿ
ನವದೆಹಲಿ: ಮಹಾವೀರ ಚಕ್ರ ಪ್ರಶಸ್ತಿ ವಿಜೇತ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜ್ ಮೋಹನ್ ವೋಹ್ರಾ (೮೮) ಅವರು ಕೊರೋನಾವೈರಸ್ಸಿಗೆ ಬಲಿಯಾಗಿದ್ದಾರೆ.
ಶಿಮ್ಲಾ
ಮೂಲದ ಅವರು ೧೯೩೨ರಲ್ಲಿ ಜನಿಸಿದ್ದರು. ‘ಹೃದಯ ಸಂಬಂಧಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತಪಾಸಣೆ
ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಜೂನ್ ೧೪ ರಂದು ಅವರು
ಸಾವನ್ನಪ್ಪಿದ್ದಾರೆ. ಅಂದೇ ಮೃತರ ಅಂತ್ಯಕ್ರಿಯೆ ನಡೆಸಲಾಯಿತು’ ಎಂದು
ಅಧಿಕಾರಿಗಳು ತಿಳಿಸಿದ್ದಾರೆ.
೧೯೭೧ರಲ್ಲಿ
ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದ ಹಿನ್ನೆಲೆಯಲ್ಲಿ ವೋಹ್ರಾ ಅವರಿಗೆ ೧೯೭೨ರಲ್ಲಿ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಗಿತ್ತು.
ವೋಹ್ರಾ
ಅವರು ಸೇನೆಯ ಪೂರ್ವ ಕಮಾಂಡ್ನ ಜನರಲ್ ಕಮಾಂಡಿಂಗ್
ಆಫೀಸರ್ ಆಗಿದ್ದರು. ಅಲ್ಲದೆ, ಶಸ್ತ್ರಸಜ್ಜಿತ ಸೇನಾ ವಿಭಾಗದ ಮುಖ್ಯ ಕಮಾಂಡಿಂಗ್ ಅಧಿಕಾರಿಯೂ ಆಗಿದ್ದರು.
ಭಾರತದಲ್ಲಿ
ಪ್ರಕರಣ ಸಂಖ್ಯೆ ೩,೪೩,೦೯೧
ಚೇತರಿಕೆ
ಪ್ರಮಾಣ ಶೇಕಡಾ ೫೨.೪೬
ಭಾರತವು ಸತತ ಐದನೇ ದಿನ ೧೦,೦೦೦ ಹೊಸ
ಕೊರೋನಾವೈರಸ್ ಪ್ರಕರಣಗಳನ್ನು ಮಂಗಳವಾರ ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೩,೪೩,೦೯೧
ಕ್ಕೆ ಏರಿದೆ. ೩೮೦ ಹೊಸ ಸಾವಿನೊಂದಿದೆ ಸಾವಿನ ಸಂಖ್ಯೆ ೯,೯೦೦ ಕ್ಕೆ
ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕಳೆದ
೨೪ ಗಂಟೆಗಳಲ್ಲಿ ದೇಶವು ೧೦,೬೬೭ ಕರೋನವೈರಸ್
ಸೋಂಕುಗಳನ್ನು ದಾಖಲಿಸಿದೆ.
ಒಟ್ಟು
ಸೋಂಕಿತರ ಪೈಕಿ ೧,೮೦,೦೧೨
ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ೧,೫೩,೧೭೮
ಆಗಿದೆ. ಎಂದು ಅಧಿಕೃತವಾಗಿ ನವೀಕರಿಸಿದ ಅಂಕಿ ಅಂ ಬೆಳಗ್ಗೆ ೮
ಗಂಟೆಗೆ ತಿಳಿಸಿದೆ.
"ಹೀಗಾಗಿ,
ಚೇತರಿಕೆಯ ಪ್ರಮಾಣ ಶೇಕಡಾ ೫೨.೪೬ಕ್ಕೆ ಏರಿದೆ’ ಎಂದು
ಅಧಿಕಾರಿಯೊಬ್ಬರು ತಿಳಿಸಿದರು.
ಅಮೆರಿಕ,
ಬ್ರೆಜಿಲ್ ಮತ್ತು ರಷ್ಯಾ ನಂತರ ಸಾಂಕ್ರಾಮಿಕ ರೋಗದಿಂದ ಅತಿಬಾಧಿತವಾದ ದೇಶಗಳ ಸಾಲಿಲ್ಲಿ ಭಾರತವು ನಾಲ್ಕನೇ ಸ್ಥಾನಕ್ಕೆ ಏರಿದೆ.
ಪ್ರಪಂಚದಾದ್ಯಂತದ
ಕೋವಿಡ್-೧೯ ಮಾಹಿತಿಯನ್ನು ಕ್ರೋಡೀಕರಿಸುತ್ತಿರುವ
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಸಾವಿನ ಸಂಖ್ಯೆಯ ವಿಷಯದಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆ.
ವಿಶ್ವಾದ್ಯಂತ
ಕೊರೋನಾವೈರಸ್ ಸೋಂಕಿvರು ೮೧,೫೫,೯೨೨, ಸಾವು ೪,೪೦,೨೨೪
ಚೇತರಿಸಿಕೊಂಡವರು- ೪೨,೫೯,೦೮೮
ಅಮೆರಿಕ
ಸೋಂಕಿತರು ೨೧,೮೬,೯೨೩,
ಸಾವು ೧,೧೮,೪೩೧
ಸ್ಪೇನ್
ಸೋಂಕಿತರು ೨,೯೧,೧೮೯,
ಸಾವು ೨೭,೧೩೬
ಇಟಲಿ
ಸೋಂಕಿತರು ೨,೩೭,೨೯೦,
ಸಾವು ೩೪,೩೭೧
ಜರ್ಮನಿ
ಸೋಂಕಿತರು ೧,೮೮,೦೮೬,
ಸಾವು ೮,೮೮೭
ಚೀನಾ
ಸೋಂಕಿತರು ೮೩,೨೨೧, ಸಾವು
೪,೬೩೪
ಇಂಗ್ಲೆಂಡ್
ಸೋಂಕಿತರು ೨,೯೮,೧೩೬,
ಸಾವು ೪೧,೯೬೯
ಭಾರತ
ಸೋಂಕಿತರು ೩,೪೪,೭೮೮,
ಸಾವು ೯,೯೨೬
No comments:
Post a Comment