ಗ್ರಾಹಕರ ಸುಖ-ದುಃಖ

My Blog List

Friday, June 19, 2020

ದಕ್ಷಿಣ ಚೀನಾ ಸಮುದ್ರವಲ್ಲ, ಇದು ಲಡಾಖ್ ನೆನಪಿರಲಿ

ದಕ್ಷಿಣ ಚೀನಾ ಸಮುದ್ರವಲ್ಲ, ಇದು ಲಡಾಖ್ ನೆನಪಿರಲಿ

ಚೀನಾಕ್ಕೆ ಭಾರತದ ಖಡಖ್ ಎಚ್ಚರಿಕೆ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲಾಗಿದ್ದ ಪಿಎಲ್‌ಎ ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿ ಮತ್ತು ಅವರ ಎರಡನೇ ಕಮಾಂಡ್ ಸೋಮವಾರ ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಚೀನೀ ಮತ್ತು ಭಾರತೀಯ ಸೈನಿಕರ ನಡುವಣ ಹಿಂಸಾತ್ಮಕ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನಂಬಲರ್ಹ ಸುದ್ದಿ ಮೂಲಗಳು 2020 ಜೂನ್ 19ರ ಶುಕ್ರವಾರ ತಿಳಿಸಿದವು.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸಾಕಷು ಸಾವುನೋವುಗಳನ್ನು ಅನುಭವಿಸಿದೆ ಎಂದು ಚೀನಾ ದೃಢ ಪಡಿಸಿದೆ, ಆದರೆ ಘರ್ಷಣೆಯ ವಿವರಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗ ಪುನರಪಿ ಪ್ರಶ್ನೆಗಳಿಗೆ ಉತ್ತರಿಸಿಲು ನಿರಾಕರಿಸಿದೆ.

ಹಿಂಸಾತ್ಮಕ ಘರ್ಷಣೆಯಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ ಇಪ್ಪತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ೪೫ ವರ್ಷಗಳಲ್ಲಿ ಪಿಎಲ್‌ಎ ಜೊತೆಗಿನ ಘರ್ಷಣೆಯಲ್ಲಿ ಮೊದಲಬಾರಿ ಭಾರತದ ಕಡೆಯಲ್ಲಿ  ಸಾವುನೋವು ಸಂಭವಿಸಿದೆ.

"ಇದು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಮಾದರಿ ಮೊದಲ ಘರ್ಷಣೆಯಾಗಿದೆ. ಏಕೆಂದರೆ ಭಾರತವು ಆಕ್ರಮಣಕಾರಿ ಚೀನಾಕ್ಕೆ ಎದುರು ನಿಲ್ಲುವ ಸಾಮರ್ಥ್ಯ ಮತ್ತು ಇಚ್ಛೆಯನ್ನು ಪ್ರಕಟಿಸಿದೆ ಎಂದು ಉನ್ನತ ಸೇನಾ ಕಮಾಂಡರ್ ತಿಳಿಸಿದರು.

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸೈನಿಕರನ್ನು ಸಜ್ಜುಗೊಳಿಸಿದ ಮತ್ತು ಸುಮಾರು ಆರು ವಾರಗಳ ಕಾಲ ಭಾರತದೊಂದಿಗೆ ಬಿಕ್ಕಟ್ಟು ಸೃಷ್ಟಿಸಿದ ಚೀನಾ ಪಡೆಗಳು, ಜೂನ್ ರಂದು ಉಭಯ ಸೇನೆಗಳ ಉನ್ನತ ಕಮಾಂಡರ್‌ಗಳ ನಡುವೆ ತಲುಪಿದ ತಿಳುವಳಿಕೆಗೆ ಅನುಗುಣವಾಗಿ ಹಿಂದೆ ಸರಿಯಲು ನಿರಾಕರಿಸಿದವು.

ಉದ್ವಿಗ್ನತೆ ಉಲ್ಬಣಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಪಿಎಲ್‌ಎ ಭಾರತದ ಕಡೆಯಲ್ಲಿ ಸ್ಥಾಪಿಸಿದ ಡೇರೆಯನ್ನು ಕಿತ್ತು ಹಾಕಲು ನಿರಾಕರಿಸಿದ ಬಳಿಕ ಜೂನ್ ೧೫ ರಂದು ಸಂಜೆ ಉಭಯ ಕಡೆಯ ಸ್ಥಳೀಯ ಕಮಾಂಡರ್‌ಗಳ ನಡುವಿನ ವಾದ, ಮುಖಾಮುಖಿ ಘರ್ಷಣೆಯೊಂದಿಗೆ ಪರ್‍ಯವಸಾನಗೊಂಡಿತು.

ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಪಿಎಲ್‌ಎ ತನ್ನಸಿದಾ ನಡೆದು ಬರುವ (‘ವಾಕ್ ಇನ್) ನೀತಿಯನ್ನು ಗಲ್ವಾನ್‌ನಲ್ಲಿ ಕಾರ್ಯಗತಗೊಳಿಸಲು ಸ್ಪಷ್ಟವಾಗಿ ಪ್ರಯತ್ನಿಸಿತ ಎಂದು ಹೇಳಿದರು. ಆದರೆ ಇದು ಪ್ರಶ್ನಿಸಲ್ಪಟ್ಟಿತು ಮತ್ತು ಚೀನಾವು ತಕ್ಕ ಬೆಲೆಯನ್ನು ತೆರಬೇಕಾಗಿ ಬಂತು. ಸೌತ್ ಬ್ಲಾಕಿಗೆ ಬಂದಿರುವ ಮಾಹಿತಿಯ ಪ್ರಕಾರ ಘರ್ಷಣೆಯಲ್ಲಿ ಗಾಯಗೊಂಡ ಅಥವಾ ಸಾವನ್ನಪ್ಪಿದ ಸುಮಾರು ೩೫ ಸೈನಿಕರು ಮತ್ತು ಅಧಿಕಾರಿಗಳನ್ನು ಪಿಎಲ್‌ಎ ಘಟನಾ ಸ್ಥಳದಿಂದ ಸ್ಥಳಾಂತರಿಸಬೇಕಾಯಿತು.

"ನಮ್ಮ ಮಾಹಿತಿಯ ಪ್ರಕಾರ ಉಭಯ ಸೇನೆಗಳು ಘರ್ಷಣೆ ನಡೆದ ಗಲ್ವಾನ್ ಪ್ರದೇಶದ ಗಸ್ತು ಪಾಯಿಂಟ್ ೧೪ರ ಬಳಿ ನಿಯೋಜಿಸಲಾದ ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿಯನ್ನು ಚೀನಾ ಕಳೆದುಕೊಂಡಿದೆ. ಘಟನೆಯಲ್ಲಿ ಬೆಟಾಲಿಯನ್‌ನ ಎರಡನೇ ದಂಡನಾಯಕನೂ ಸಾವನ್ನಪ್ಪಿದ್ದಾನೆ ಎಂದು ಸೌತ್ ಬ್ಲಾಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಘರ್ಷಣೆಗೆ ಭಾರತವು ಚೀನಾವನ್ನು ದೂಷಿಸಿದೆ. ಚೀನಾದ ಕಡೆಯವರು "ಗಲ್ವಾನ್ನ ಯಥಾಸ್ಥಿತಿಯನ್ನು ಬದಲಾಯಿಸಲು ಏಕಪಕ್ಷೀಯವಾಗಿ ಪ್ರಯತ್ನಿಸಿದ್ದಾರೆ ಮತ್ತು "ಪೂರ್ವಭಾವಿ ಮತ್ತು ಯೋಜಿತ ಕ್ರಮವನ್ನು ಕೈಗೊಂಡಿದ್ದಾರೆ, ಇದರ ಪರಿಣಾಮವಾಗಿ ಸಂಭವಿಸಿದ ಘರ್ಷಣೆಯಲ್ಲಿ ಉಭಯ ಕಡೆಯವರು  ಸಾವುನೋವುಗಳು ಸಂಭವಿಸಿವೆ ಎಂದು ಭಾರತ ಹೇಳಿದೆ.

ಕೇವಲ ಎರಡು ದೈತ್ಯರ ನಡುವಿನ ಸಂಬಂಧದಲ್ಲಿ ಹರಿದಾಡುವ ಕಹಿ ಕಾರಣದಿಂದಲ್ಲ, ಆದರೆ ಅದು ಕಳುಹಿಸಿದ ಸಂದೇಶದಿಂದಾಗಿ, ಗಲ್ವಾನ್‌ನಲ್ಲಿ ಸಂಭವಿಸಿದ ರಕ್ತಸಿಕ್ತ ಮುಖಾಮುಖಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಒಂದು ಮಹತ್ವದ ತಿರುವು ಎಂದು ಅಧಿಕಾರಿಗಳು ಹೇಳಿದರು.

" ಮುಖಾಮುಖಿ ಲಡಾಖ್ ದಕ್ಷಿಣ ಚೀನಾ ಸಮುದ್ರವಲ್ಲ ಎಂದು ತೋರಿಸಿಕೊಟ್ಟಿದೆ, ಅಲ್ಲಿ ಚೀನಿಯರು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಸಾಧ್ಯವಾಗುತ್ತದೆ" ಎಂದು ಅವರಲ್ಲಿ ಒಬ್ಬರು ಹೇಳಿದರು.

ಗಡಿ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಭಾರತ ನಿಭಾಯಿಸುವ ವಿಧಾನದಲ್ಲಿ ಇದು ಗ್ರಹಿಸಬಹುದಾದ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

"ಇಲ್ಲಿಯವರೆಗೆ, ಸೇನಾ ಕ್ರಮಗಳನ್ನು ಬಳಸದಿರುವ ಶಿಷ್ಟಾಚಾರಗಳು ಮತ್ತು ಒಪ್ಪಂದಗಳ ಮೂಲಕ ಗುರುತಿಸಲಾಗದ ಗಡಿಗಳನ್ನು ನಿರ್ವಹಿಸಲಾಗುತ್ತಿದೆ. ಘಟನೆಯು ಬೀಜಿಂಗ್ ಒಪ್ಪಂದಗಳನ್ನು ಕಡೆಗಣಿಸಿದರೆ ಮತ್ತು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ ಮಾಡಿದರೆ, ಪರಿಸ್ಥಿತಿಯನ್ನು ದೃಢವಾಗಿ ಎದುರಿಸಲು ಭಾರತೀಯ ಸೇನೆಯು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅಧಿಕಾರಿಯೊಬ್ಬರು ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಂದೇಶ ಕೂಡಾ ಇದೇ ಆಗಿದೆ. ಭಾರತವು ಶಾಂತಿಯನ್ನು ಬಯಸಿದೆ, ಆದರೆ ಪ್ರಚೋದಿಸಿದರೆ, "ಸೂಕ್ತವಾದ ಉತ್ತರವನ್ನು" ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದ್ದಾರೆ.

No comments:

Advertisement