ಗ್ರಾಹಕರ ಸುಖ-ದುಃಖ

My Blog List

Monday, June 29, 2020

ಭಾರತ- ಚೀನಾ ಇನ್ನೊಂದು ಸುತ್ತಿನ ಸೇನಾ ಮಾತುಕತೆ

ಭಾರತ- ಚೀನಾ ಇನ್ನೊಂದು ಸುತ್ತಿನ ಸೇನಾ ಮಾತುಕತೆ

ನವದೆಹಲಿ: ಕೋರ್ ಕಮಾಂಡರ್ಗಳ ನೇತೃತ್ವದಲ್ಲಿ ಭಾರತ ಮತ್ತು ಚೀನೀ ಸೇನಾ ನಿಯೋಗಗಳು ನೈಜ ನಿಯಂತ್ರಣ ರೇಖೆಯ (ಎಲ್ ಎಸಿ) ಉಭಯ ಕಡೆಗಳಲ್ಲೂ ಉದ್ವಿಗ್ನತೆ ಶಮನ ಮತ್ತು ಸೇನಾ ಬಲ ಇಳಿಕೆಯ ಸಲುವಾಗಿ  2020 ಜೂನ್ 30ರ ಮಂಗಳವಾರ ಲಡಾಖ್ ಚುಶುಲ್ನಲ್ಲಿ ಮಾತುಕತೆ ನಡೆಸಲಿವೆ ಎಂದು ಸುದ್ದಿ ಮೂಲಗಳು 2020 ಜೂನ್ 29ರ ಸೋಮವಾರ ತಿಳಿಸಿದವು.

ಹಿರಿಯ ಸೇನಾ ಅಧಿಕಾರಿಗಳ ನೇತೃತ್ವದ ನಿಯೋಗಗಳು ಮೇ ಆದಿಯಲ್ಲಿ ಉಭಯ ಪರಮಾಣು ಸಜ್ಜಿತ ರಾಷ್ಟ್ರಗಳ ಮಧ್ಯೆ ಗಡಿ ಬಿಕ್ಕಟ್ಟು ಉದ್ಭವಿಸಿದ ಬಳಿಕ ಮೂರನೇ ಸುತ್ತಿನ ಮಾತುಕತೆ ನಡೆಸಲಿವೆ.

ಭಾರತದ ೨೦ ಮಂದಿ ಯೋಧರು ಹುತಾತ್ಮರಾದ ಹಿಂಸಾತ್ಮಕ ಗಲ್ವಾನ್ ಕಣಿವೆ ಘರ್ಷಣೆ ನಡೆದ ಸರಿಯಾಗಿ ಒಂದು ವಾರದ ಬಳಿಕ ಜೂನ್ ೨೨ರಂದು ಸೇನಾ ಅಧಿಕಾರಿಗಳ ಮಟ್ಟದ ಹಿಂದಿನ ಸಭೆ ನಡೆದಿತ್ತು. ಲೆಹ್ ಮೂಲದ ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ದಕ್ಷಿಣ ಕ್ಷಿನ್ಜಿಯಾಂಗ್ ಸೇನಾ ಪ್ರದೇಶದ ಪಿಎಲ್ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ನೇತೃತ್ವದ ನಿಯೋಗ ಮಟ್ಟದ ಮಾತುಕತೆಗಳಲ್ಲಿ ಎಲ್ಎಸಿಯಾದ್ಯಂತ ಘರ್ಷಣಾ ಸ್ಥಳಗಳಿಂದ ಸೇನೆ ವಾಪಸ್ ಮಾಡುವ ಬಗ್ಗೆ ಸಹಮತಕ್ಕೆ ಬರಲಾಗಿತ್ತು.

ಆದಾಗ್ಯೂ, ಚೀನಾವು ಗಲ್ವಾನ್ ಕಣಿವೆ, ಡೆಸ್ಪಾಂಗ್ ಬಯಲು ಪ್ರದೇಶ ಮತ್ತು ಪ್ಯಾಂಗೊಂಗ್ ತ್ಸೊ ಸಮೀಪದ ಫಿಂಗರ್ ಪ್ರದೇಶದಲ್ಲಿ ತನ್ನ ಸೇನಾ ಚಟುವಟಿಕೆಯನ್ನು ಸ್ಥಗಿತಗೊಳಿಸಲಿಲ್ಲ. ಉಭಯ ಸೇನೆಗಳ ಹಿರಿಯ ಅಧಿಕಾರಿಗಳು ಮೊತ್ತ ಮೊದಲಿಗೆ ಜೂನ್ ೬ರಂದು ಮಾತುಕತೆ ನಡೆಸಿದ್ದರು.

ಚೀನೀ ಪಡೆಗಳು ಹಲವಾರು ಘರ್ಷಣಾ  ಸ್ಥಳಗಳಿಂದ ಹಿಂದಕ್ಕೆ ಹೋಗಬೇಕು ಎಂಬ ಬೇಡಿಕೆಯನ್ನು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಯಥಾಸ್ಥಿತಿ ಪು:ಸ್ಥಾಪನೆಯಾಗಬೇಕು ಎಂಬುದಾಗಿ ಮಂಗಳವಾರದ ಸಭೆಯಲ್ಲಿ ಭಾರತವು ಒತ್ತಿ ಹೇಳುವ ನಿರೀಕ್ಷೆಯಿದೆ.

ಜೂನ್ ೩೦ರ ಸಭೆಯು ಬೆಳಗ್ಗೆ ೧೦.೩೦ ಗಂಟೆಗೆ ನೈಜ ನಿಯಂತ್ರಣ ರೇಖೆಯ ಭಾರತೀಯ ಕಡೆಯಲ್ಲಿ ನಡೆಯುವ ಸಾಧ್ಯತೆ ಇದೆ.

ಕೋರ್ ಕಮಾಂಡರ್ ಮಟ್ಟದ ಅಧಿಕಾರಿಗಳ ಹಿಂದಿನ ಎರಡು ಸಭೆಗಳು ಎಲ್ಎಸಿಯ ಚೀನೀ ಕಡೆಯಲ್ಲಿರುವ ಮೋಲ್ಡೋದಲ್ಲಿ ನಡೆದಿದ್ದವು.

ಭಾರತ ಮತ್ತು ಚೀನಾ ಜೂನ್ ೧೫ರ ಹಿಂಸಾತ್ಮಕ ಗಲ್ವಾನ್ ಕಣಿವೆ ಘರ್ಷಣೆಯ ಬಳಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕಳೆದ ಕೆಲವು ವಾರಗಳಿಂದ ಯುದ್ಧ ವಿಮಾನಗಳು, ಹೆಲಿಕಾಪ್ಟರುಗಳು, ಟ್ಯಾಂಕ್ಗಳು, ಭಾರೀ ಫಿರಂಗಿಗಳು ಮತ್ತು ಕ್ಷಿಪಣಿಗಳ ಜಮಾವಣೆ ಮಾಡಿದ್ದು ಬೆಳವಣಿಗೆ ಜಾಗತಿಕ ಗಮನ ಸೆಳೆದಿದೆ.

No comments:

Advertisement