ಗ್ರಾಹಕರ ಸುಖ-ದುಃಖ

My Blog List

Monday, June 29, 2020

ಭಾರತ: ಸೋಂಕು ೫,೪೮,೩೧೮, ಚೇತರಿಕೆ ಶೇಕಡಾ ೫೮.೬೭

ಭಾರತ: ಸೋಂಕು ,೪೮,೩೧೮, ಚೇತರಿಕೆ ಶೇಕಡಾ ೫೮.೬೭

ನವದೆಹಲಿ/ ಮುಂಬೈ: ದೇಶದಲ್ಲಿ ೧೬,೪೭೫ ಏಕದಿನ ಸಾವುನೋವುಗಳೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ 2020 ಜೂನ್ 29ರ ಸೋಮವಾರ ,೪೮,೩೧೮ಕ್ಕೆ ಏರಿತು. ಸೋಮವಾರ ಒಂದೇ ದಿನದಲ್ಲಿ ೩೮೦ ಹೊಸ ಸಾವುಗಳು ವರದಿಯಾಗಿದ್ದು, ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ಅನುಸರಿಸಿ ಮಹಾರಾಷ್ಟ್ರ ಸರ್ಕಾರವು ದಿಗ್ಬಂಧನವನ್ನು (ಲಾಕ್ ಡೌನ್) ಜುಲೈ ೩೧ರವರೆಗೆ ವಿಸ್ತರಿಸಿತು.

ಕೊರೋನವೈರಸ್ ಸೋಂಕು ದೇಶದಲ್ಲಿ ಸತತ ಆರನೇ ದಿನ ೧೫,೦೦೦ಕ್ಕಿಂತ ಹೆಚ್ಚಾಗಿದೆ. ದೇಶವು ಜೂನ್ ರಿಂದ ಇಲ್ಲಿಯವರೆಗೆ ,೫೭,೭೮೩ ಸೋಂಕುಗಳ ಉಲ್ಬಣವನ್ನು ಕಂಡಿದೆ

ದೇಶದಲ್ಲಿ ಈವರೆಗೆ ಒಟ್ಟು ,೪೮,೩೧೮ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೃತರ ಸಂಖ್ಯೆಯು ೧೬,೪೭೫ಕ್ಕೆ ಏರಿಕೆಯಾಯಿತು.

ದಿನದಿಂದ ದಿನಕ್ಕೆ ಕೋವಿಡ್-೧೯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದಾದ್ಯಂತ ಕಳೆದ ೨೪ ಗಂಟೆಗಳಲ್ಲಿ ೧೯,೪೫೯ ಹೊಸ ಕೋವಿಡ್ -೧೯ ಪ್ರಕರಣಗಳು ದೃಢಪಟ್ಟಿದ್ದು, ೩೮೦ ಜನರು ಮೃತರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತು.

ಸದ್ಯ ,೧೦,೧೨೦ ಪ್ರಕರಣಗಳು ಸಕ್ರಿಯವಾಗಿದ್ದು, ,೨೧,೭೨೩ ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

"ಹೀಗಾಗಿ, ಇದುವರೆಗೆ ಸುಮಾರು ೫೮.೬೭ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸದ ಮತ್ತು ಅಗತ್ಯವಲ್ಲದ ಚಟುವಟಿಕೆಗಳ ಮೇಲೆ ಸ್ಥಳೀಯವಾಗಿ ನಿರ್ಬಂಧ ವಿಧಿಸಲು ಜಿಲ್ಲಾಧಿಕಾರಿಗಳಿಗೆ ಮತ್ತು ಮಹಾನಗರಪಾಲಿಕೆಗಳ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಸೋಮವಾರ ಹೇಳಿತು.

ಇದಕ್ಕೂ ಮುನ್ನವೇ, ಥಾಣೆಯಲ್ಲಿ ೧೦ ದಿನಗಳ ಕಾಲ ದಿಗ್ಬಂಧನ ವಿಸ್ತರಿಸಲಾಗಿತ್ತು.

ಕೊರೊನಾದಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಸೋಮವಾರ ಬೆಳಗಿನವರೆಗೆ ಒಟ್ಟು ,೬೪,೬೨೬ ಪ್ರಕರಣಗಳು ಬೆಳಕಿಗೆ ಬಂದಿದ್ದು, ೭೦,೬೨೨ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. ಈವರೆಗೆ ೮೬,೫೭೫ ಮಂದಿ ಗುಣಮುಖರಾಗಿದ್ದು, ,೪೨೯ ಜನರು ಸಾವನ್ನಪ್ಪಿದ್ದಾರೆ.

ಗುಜರಾತಿನಲ್ಲಿ ಒಟ್ಟಾರೆ ೩೧,೩೨೦ ಜನರಿಗೆ ಸೋಂಕು ತಗುಲಿದೆ. ,೭೧೨ ಸಕ್ರಿಯ ಪ್ರಕರಣಗಳಿದ್ದು, ೨೨,೮೦೦ ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ ,೮೦೮ ಜನರು ಸಾವನ್ನಪ್ಪಿದ್ದಾರೆ.

ದೆಹಲಿಯಲ್ಲಿ ಒಟ್ಟಾರೆ ೮೩,೦೭೭ ಮಂದಿಗೆ ಸೋಂಕು ತಗುಲಿದೆ. ೨೭,೮೪೭ ಸಕ್ರಿಯ ಪ್ರಕರಣಗಳಿದ್ದು, ೫೨,೬೦೭ ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ,೬೨೩ ಮಂದಿ ಮೃತರಾಗಿದ್ದಾರೆ. ತಮಿಳುನಾಡಿನಲ್ಲಿ ಒಟ್ಟಾರೆ ೮೨,೨೭೫ ಮಂದಿಗೆ ಸೋಂಕು ತಗುಲಿದ್ದು, ೩೫,೬೫೯ ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ೪೫,೫೩೭ ಮಂದಿ ಗುಣಮುಖರಾಗಿದ್ದು, ,೦೭೯ ಮಂದಿ ಸಾವನ್ನಪ್ಪಿದ್ದಾರೆ.

ಇನ್ನುಳಿದಂತೆ ಮಧ್ಯಪ್ರದೇಶದಲ್ಲಿ ೫೫೭, ಪಶ್ಚಿಮ ಬಂಗಾಳದಲ್ಲಿ ೬೩೯, ಉತ್ತರ ಪ್ರದೇಶದಲ್ಲಿ ೬೬೦ ಜನರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ,೦೨,೯೩,೮೬೦, ಸಾವು ,೦೫,೪೫೬ ಚೇತರಿಸಿಕೊಂಡವರು- ೫೫,೮೬,೪೩೯

ಅಮೆರಿಕ ಸೋಂಕಿತರು ೨೬,೪೦,೦೮೦, ಸಾವು ,೨೮,೪೬೧

ಸ್ಪೇನ್ ಸೋಂಕಿತರು ,೯೫,೮೫೦, ಸಾವು ೨೮,೩೪೩

ಇಟಲಿ ಸೋಂಕಿತರು ,೪೦,೯೬೧, ಸಾವು ೩೪,೭೩೮

ಜರ್ಮನಿ ಸೋಂಕಿತರು ,೯೪,೯೦೦, ಸಾವು ,೦೨೯

ಚೀನಾ ಸೋಂಕಿತರು ೮೩,೫೧೨, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೧೧,೯೬೫, ಸಾವು ೪೩,೫೭೫

ಭಾರತ ಸೋಂಕಿತರು ,೫೯,೯೧೦, ಸಾವು ೧೬,೭೫೭

ಅಮೆರಿಕದಲ್ಲಿ ೨೪, ಇರಾನಿನಲ್ಲಿ ೧೬೨, ಬ್ರೆಜಿಲ್ನಲ್ಲಿ , ಇಂಡೋನೇಷ್ಯ ೫೧, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೯೩, ಪಾಕಿಸ್ತಾನದಲ್ಲಿ ೪೯, ಮೆಕ್ಸಿಕೋದಲ್ಲಿ ೨೬೭, ಭಾರತದಲ್ಲಿ ೨೭೦, ಒಟ್ಟಾರೆ ವಿಶ್ವಾದ್ಯಂತ ,೩೭೮ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೨೭,೫೬೧ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement