My Blog List

Tuesday, June 9, 2020

ಮಮತಾಗೆ ಶಾ ಎದಿರೇಟು: ‘ಕೊರೋನಾ ಎಕ್ಸ್ ಪ್ರೆಸ್’ ಅಪಹಾಸ್ಯಕ್ಕೆ ಚಾಟಿ

ಮಮತಾಗೆ ಶಾ ಎದಿರೇಟು: ‘ಕೊರೋನಾ ಎಕ್ಸ್ ಪ್ರೆಸ್ಅಪಹಾಸ್ಯಕ್ಕೆ ಚಾಟಿ

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಲಸೆ ಕಾರ್ಮಿಕರ ಸಲುವಾಗಿ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದ ರೈಲುಗಳನ್ನುಕೊರೋನಾ ಎಕ್ಸ್ಪ್ರೆಸ್ಎಂಬುದಾಗಿ ಅಪಹಾಸ್ಯ ಮಾಡಿದ್ದಕ್ಕೆ 2020 ಜೂನ್ 09ರ ಮಂಗಳವಾರ ಎದಿರೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಕೊರೋನಾ ಎಕ್ಸ್ಪ್ರೆಸ್ ರೈಲುಗಳು ತೃಣಮೂಲ ಕಾಂಗೆಸ್ ಪಾಲಿಗೆಎಕ್ಸಿಟ್ ಎಕ್ಸ್ಪ್ರೆಸ್ (ನಿರ್ಗಮನ ) ಆಗಲಿವೆ ಎಂದು ಚುಚ್ಚಿದರು.

ವರ್ಚುವಲ್ ರ್ಯಾಲಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ವಿರುದ್ಧ ಹರಿತವಾದ ವಾಗ್ಬಾಣಗಳನ್ನು ಎಸೆದ ಶಾ, ’ಮಮತಾ ದೀದಿಯವರೇ ನೀವು ಹೆಸರು ಇಟ್ಟಿರುವಕೋರೋನಾ ಎಕ್ಸ್ಪ್ರೆಸ್ನಿಮ್ಮ ಪಾಲಿನ ನಿರ್ಗಮನ ಮಾರ್ಗವಾಗಲಿದೆ. ನೀವು ವಲಸೆ ಕಾರ್ಮಿಕರ ಗಾಯಗಳಿಗೆ ಉಪ್ಪು ಸವರಿದ್ದೀರಿ. ಅವರು ಇದನ್ನು ಎಂದಿಗೂ ಮರೆಯುವುದಿಲ್ಲಎಂದು ನುಡಿದರು.

ಪಶ್ಚಿಮ ಬಂಗಾಳ ಜನ ಸಂವಾದರಾಲಿಯಲ್ಲಿ ಪಶ್ಚಿಮ ಬಂಗಾಳದ ಕಾರ್ಯಕರ್ತರನ್ನು ಉದ್ದೇಶಿಸಿ ಗೃಹ ಸಚಿವರು ಮಾತನಾಡಿದರು.

ಪಕ್ಷ ಮತ್ತು ಸರ್ಕಾರದ ಸಂದೇಶಗಳನ್ನು ಹರಡುವ ಮತ್ತು ರಾಜಕೀಯ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಬಿಜೆಪಿಯು ವರ್ಚುವಲ್ ರ್ಯಾಲಿಗಳನ್ನು ನಡೆಸುತ್ತಿದೆ.

ವಲಸೆ ಕಾರ್ಮಿಕರನ್ನು ಒಯ್ಯುವ ಸಲುವಾಗಿ ಸರ್ಕಾರವು ವ್ಯವಸ್ಥೆ ಮಾಡಿದ ರೈಲುಸೇವೆಯನ್ನು ಅಪಹಾಸ್ಯ ಮಾಡಿದ ಮಮತಾ ಬ್ಯಾನರ್ಜಿ ಟೀಕೆಯತ್ತ ಶಾ ಬೊಟ್ಟು ಮಾಡಿದರು. ರೈಲ್ವೇಯು ಹಲವಾರು ರೈಲುಗಳನ್ನು ಓಡಿಸುವ ಬದಲಿಗೆ ಒಂದು ರೈಲಿನಲ್ಲಿ ಎಲ್ಲರನ್ನೂ ತುಂಬಿಕೊಂಡು ಹೋಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಟೀಕಿಸಿದ್ದರು.

ಶ್ರಮಿಕ ವಿಶೇಷ ರೈಲುಗಳ ಹೆಸರಿನಲ್ಲಿ ರೈಲ್ವೇಯುಕೊರೋನಾ ಎಕ್ಸ್ಪ್ರೆಸ್ರೈಲುಗಳನ್ನು ಓಡಿಸುತ್ತಿದೆ. ರೈಲ್ವೇಯು ವಲಸಿಗರನ್ನು ಕಿಕ್ಕಿರಿದ ಬೋಗಿಗಳ ಮೂಲಕ ಕಳಿಸುತ್ತಿದೆ. ಇದರಿಂದಾಗಿ ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿವೆ. ರೈಲ್ವೇಗೆ ಸಾಮಾಜಿಕ ಬಾಧ್ಯತೆ ಇದೆ. ಅವರು ಕೇವಲ ಲಾಭ-ನಷ್ಟದ ಆಧಾರದಲ್ಲಿ ರೈಲುಗಳನ್ನು ಓಡಿಸುವುದಲ್ಲಎಂದು ಮಮತಾ ಹೇಳಿದ್ದರು.

ರಾಜ್ಯವು ಸಮಯದಲ್ಲಿ ಕೊರೋನಾವೈರಸ್ ಪ್ರಕರಣಗಳನ್ನು ನಿಗ್ರಹಿಸಲು ಸಮರ್ಥವಾಗಿತ್ತು. ಆದರೆ ಶ್ರಮಿಕ ವಿಶೇಷ ರೈಲುಗಳ ಮೂಲಕ ಜನರು ತಂಡೋಪತಂಡವಾಗಿ ಬಂದ ಬಳಿಕ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿತುಎಂದೂ ಮುಖ್ಯಮಂತ್ರಿ ಹೇಳಿದ್ದರು.

ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ದಿಗ್ಬಂಧನ ವೇಳೆಯಲ್ಲಿ ವಿವಿಧ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರಿಗೆ ಮನೆಗಳಿಗೆ ತಲುಪುವ ನಿಟ್ಟಿನಲ್ಲಿ ಅನುಕೂಲಕ್ಕಾಗಿ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

No comments:

Advertisement