My Blog List

Friday, June 12, 2020

ನೇಪಾಳ ಪೊಲೀಸರ ಗುಂಡೇಟು: ಭಾರತೀಯನ ಸಾವು

ನೇಪಾಳ ಪೊಲೀಸರ ಗುಂಡೇಟು: ಭಾರತೀಯನ ಸಾವು

ನವದೆಹಲಿ: ಬಿಹಾರದ ಸೀತಾಮಡಿ ಜಿಲ್ಲೆಯ ಗಡಿಯಲ್ಲಿ ನೇಪಾಳ ಪೊಲೀಸರು ಗುಂಪಿನ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ ಪರಿಣಾಮವಾಗಿ ಕನಿಷ್ಠ ಒಬ್ಬ ಭಾರತೀಯ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು 2020 ಜೂನ್ 12ರ ಶುಕ್ರವಾರ ತಿಳಿಸಿದರು.

ಜಿಲ್ಲೆಯ ಸೋನೆಬರ್ಶ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾ ಪಾರ್ಸೇನ್ ಪಂಚಾಯಿತಿಯ ಲಾಲ್ಬಂಡಿ-ಜಂಕಿ ನಗರ ಗಡಿಯಲ್ಲಿ ಭಾರತೀಯರು ಮತ್ತು ನೇಪಾಳ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿದವು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಪ್ರಧಾನ ಕಚೇರಿ) ಜಿತೇಂದ್ರ ಕುಮಾರ್ ಅವರು ಒಬ್ಬನ ಸಾವು ಮತ್ತು ಇತರ ನಾಲ್ವರು ಗಾಯಗೊಂಡಿರುವುದನ್ನು ದೃಢಪಡಿಸಿದ್ದಾರೆ. ಗುಂಡು ಹಾರಾಟ ನಡೆದ ಸ್ಥಳವು ನೇಪಾಳದ ವ್ಯಾಪ್ತಿಗೆ ಬರುತ್ತದೆ.

ವಿಕೇಶ್ ಕುಮಾರ್ ರಾಯ್ (೨೫) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಉಮೇಶ್ ರಾಮ್ ಮತ್ತು ಉದಯ್ ಠಾಕೂರ್ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಗುಂಡೇಟು ತಗುಲಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಗಾನ್ ರೈ ಎಂಬ ಇನ್ನೊಬ್ಬ ವ್ಯಕ್ತಿಯನ್ನು ನೇಪಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಗಾಯಗೊಂಡವರನ್ನು ಉತ್ತಮ ಚಿಕಿತ್ಸೆಗಾಗಿ ಸೀತಾಮಡಿ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ವಿಕೇಶ್ ಕುಮಾರ್ ರಾಯ್ ಅವರ ತಂದೆ ನಾಗೇಶ್ವರ ರಾಯ್ ಅವರು ತನ್ನ ಮಗ ಕೆಲಸ ಮಾಡುತ್ತಿದ್ದ ಕೃಷಿ ಭೂಮಿಯು ನೇಪಾಳದ ನಾರಾಯಣಪುg ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿದರು.

ಗಡಿ ದಾಟಲು ಯತ್ನಿಸುತ್ತಿದ್ದ ಡಜನುಗಟ್ಟಲೆ ಭಾರತೀಯರನ್ನು ಚದುರಿಸಲು ಮೇ ೧೭ ರಂದು ನೇಪಾಳ ಪೊಲೀಸರು ಗುಂಡುಹಾರಿಸಿದ್ದರು. ಆದಿನ ಗಡಿದಾಟಲು ಯತ್ನಿಸುತ್ತಿದ್ದವರು ಕೂಡಾ ರೈತರೇ ಎಂಬುದು ಸ್ಪಷ್ಟವಾಗಿಲ್ಲ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಸೀತಾಮಡಿ ಪೊಲೀಸ್ ವರಿಷ್ಠಾಧಿಕಾರಿ ಧಾವಿಸಿದ್ದಾರೆ.

ನೇಪಾಳವು ಭಾರತದೊಂದಿಗೆ ,೮೫೦ ಕಿಲೋಮೀಟರ್ (,೧೫೦ ಮೈಲಿ) ಮುಕ್ತ ಗಡಿಯನ್ನು ಹಂಚಿಕೊಂಡಿದೆ ಮತ್ತು ಜನರು ಕೆಲಸಕ್ಕಾಗಿ ಮತ್ತು ಕುಟುಂಬವನ್ನು ಭೇಟಿ ಮಾಡಲು ಉಭಯ ಕಡೆಗಳಿಗೂ ಪ್ರಯಾಣಿಸುತ್ತಾರೆ. ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನೇಪಾಳವು ಮಾರ್ಚ್ ೨೨ ರಂದು ತನ್ನ ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚಿತ್ತು.

No comments:

Advertisement