My Blog List

Wednesday, July 1, 2020

ಚೀನೀ ಟೆಲಿಕಾಂ ಗೇರ್‌ಗೆ ನಿಷೇಧ: 4 ಜಿ ಟೆಂಡರ್ ರದ್ದು

ಚೀನೀ ಟೆಲಿಕಾಂ ಗೇರ್ಗೆ ನಿಷೇಧ: 4 ಜಿ ಟೆಂಡರ್ ರದ್ದು

ನವದೆಹಲಿ: ಚೀನಾದ ಗೇರ್ ಬಳಸದಂತೆ ಟೆಲಿಕಾಂ ಇಲಾಖೆ ಸೂಚಿಸಿದ್ದನ್ನು ಅನುಸರಿಸಿ, ಜಿ ಜಾಲವನ್ನು ಮೇಲ್ದರ್ಜೆಗೆ ಏರಿಸುವ (ನೆಟ್ವರ್ಕ್ ಅಪ್ಗ್ರೇಡ್) ಟೆಂಡರ್ಗಳನ್ನು ಸರ್ಕಾರಿ ಸಂಸ್ಥೆಗಳಾದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಕಾಂ ನಿಗಮ ಲಿಮಿಟೆಡ್ (ಎಂಟಿಎನ್ಎಲ್) 2020 ಜುಲೈ 01ರ ಬುಧವಾರ ರದ್ದು ಪಡಿಸಿದವು.

ಮುಂದಿನ ಎರಡು ವಾರಗಳಲ್ಲಿ ಹೊಸ ಟೆಂಡರ್ಗಳನ್ನು ಕರೆಯಲಾಗುತ್ತದೆ ಮತ್ತು ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆ ನೀಡಲಾಗುವುದು. ಸಂದರ್ಭದಲ್ಲಿ ಚೀನಾದ ಕಂಪೆನಿಗಳನ್ನು ಹೊರಗಿಡುವ ಸಾಧ್ಯತೆಯಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿದವು.

ಚೀನಾದ ಮೂಲದ ಟೆಲಿಕಾಂ ಸಲಕರಣೆಗಳ ತಯಾರಕರಲ್ಲಿ ಹುವಾವೀ ಮತ್ತು ಝಡ್ಟಿಇ ಸೇರಿವೆ.

ಜಿ ಮೇಲ್ದರ್ಜೆಗೆ ಏರಿಸುವಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಸರ್ಕಾರ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ಗೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ನೈಜ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಚೀನಾ ಸೈನಿಕರ ಜೊತೆಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಣ ಪರಿಸ್ಥಿತಿ ಬಿಗಡಾಯಿಸುತ್ತಿರುವುದರ ಮಧ್ಯೆ ಬೆಳವಣಿಗೆ ಆಗಿದೆ.

ನಿರ್ದೇಶನದ ಅನುಷ್ಠಾನವೆಂದರೆ ಕಂಪೆನಿಗಳು ಹೊಸ ಟೆಂಡರ್ ನೀಡಬೇಕಾಗುತ್ತದೆ ಎಂದೇ ಅರ್ಥ. ಬಿಎಸ್ಎನ್ಎಲ್ ಟೆಂಡರ್ ಮೌಲ್ಯ ಸುಮಾರು ,೦೦೦-,೦೦೦ ಕೋಟಿ ರೂ.ಗಳಷ್ಟು ಇದೆ.

ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಾಮರ್ಥ್ಯ ಮತ್ತು ಆಂತರಿಕ ತಂತ್ರಜ್ಞಾನವನ್ನು ಗಮನದಲ್ಲಿಟ್ಟುಕೊಂಡು, ಹೊಸ ಟೆಂಡರ್ಗಳನ್ನು ಕರೆಯಲಾಗುತ್ತದೆ. ಸಂದರ್ಭದಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆ ನೀqಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ಸಲಕರಣೆಗಳ ಮೇಲೆ ಭಾರತದ ಟೆಲಿಕಾಂ ಕ್ಷೇತ್ರದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಒತ್ತು ನೀಡುತ್ತಿದೆ. ಸುಮಾರು ಶೇಕಡಾ ೭೫ರಷ್ಟು ಟೆಲಿಕಾಂ ಉಪಕರಣಗಳನ್ನು ಝಡ್ಟಿಇ ಮತ್ತು ಹುವಾವೀ ಎಂಬ ಎರಡು ಪ್ರಮುಖ ಕಂಪೆನಿಗಳು ಒದಗಿಸುತ್ತಿವೆ.

ಮೂಲಗಳ ಪ್ರಕಾರ, ಹುವಾವೀ ಪಾಲ್ಗೊಳ್ಳುವ ಜಿ ಟೆಂಡರ್ಗಾಗಿ ಸರ್ಕಾರವು ತನ್ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತಂತ್ರವನ್ನು ಪುನರ್ವಿಮರ್ಶಿಸಬಹುದು.

ಭದ್ರತೆ ಮತ್ತು ದತ್ತಾಂಶ ಉಲ್ಲಂಘನೆಯ ಕಾರಣಕ್ಕಾಗಿ ಟಿಕ್ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ ೫೯ ಚೀನೀ ಆಪ್ಗಳನ್ನು ಸೋಮವಾರ ಭಾರತ ನಿಷೇಧಿಸಿದ ಹಿನ್ನೆಲೆಯಲ್ಲಿ ಬೆಳವಣಿಗೆ ನಡೆದಿದೆ.

No comments:

Advertisement