My Blog List

Thursday, July 9, 2020

ಕೋವಿಡ್ ಚೇತರಿಕೆ: ಶೇಕಡಾ 62.09ಕ್ಕೆ ಜಿಗಿತ

ಕೋವಿಡ್ ಚೇತರಿಕೆ: ಶೇಕಡಾ 62.09ಕ್ಕೆ ಜಿಗಿತ

ನವದೆಹಲಿ: ಭಾರತದ ಕೋವಿಡ್-೧೯ ಚೇತರಿಕೆ ಪ್ರಮಾಣವು ಭರವಸೆದಾಯಕ ಶೇಕಡಾ ೬೨.೦೯ಕ್ಕೆ ಜಿಗಿದಿದೆ. ವೈರಲ್ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಸಂಖ್ಯೆ ದೇಶದ ಕೊರೋನವೈರಸ್ ರೋಗಿಗಳ ಸಂಖ್ಯೆಯನ್ನು ಮೀರಿಸಿದೆ ಎಂದು ಕೇಂದ್ರ ಸರ್ಕಾರವು 2020 ಜುಲೈ 09ರ ಗುರುವಾರ ತಿಳಿಸಿತು.

ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆಯು ಕೋವಿಡ್-೧೯ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ,೦೬,೫೮೮ರಷ್ಟು ಸಂಖ್ಯೆಯಿಂದ ಹಿಂದಕ್ಕೆ ತಳ್ಳಿದೆ. ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ ಪ್ರಸ್ತುತ ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಿಂದ .೭೫ ಪಟ್ಟು (ಸುಮಾರು ಎರಡು ಪಟ್ಟು) ಹೆಚ್ಚು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು.

ದೇಶದ ಕೋವಿಡ್-೧೯ ಪ್ರಕರಣಗಳು ಮತ್ತು ಸಾವುಗಳು ಪ್ರತಿ ದಶಲಕ್ಷ (ಮಿಲಿಯನ್) ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ತಿಳಿಸಿತು.

ಸುಧಾರಿತ ಚೇತರಿಕೆ ಪ್ರಮಾಣವು ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ರಾಷ್ಟ್ರಕ್ಕೆ ಒಳ್ಳೆಯ ಸುದ್ದಿಯಾಗಿದ್ದರೂ, ವೈರಲ್ ಕಾಯಿಲೆಯ ದೈನಂದಿನ ಪ್ರಕರಣಗಳ ಸಂಖ್ಯೆಯು ಪ್ರತಿದಿನ ೨೪,೦೦೦ ಹೊಸ ಕೋವಿಡ್ -೧೯ ಪ್ರಕರಣಗಳೊಂದಿಗೆ ಅಪಾಯಕಾರಿ ಪ್ರವೃತ್ತಿಯನ್ನು ದಾಖಲಿಸಿದೆ.

ಕಳೆದ ಕೆಲವು ವಾರಗಳಲ್ಲಿ ಹಲವಾರು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಲು ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಿದ್ದು ಕಾರಣವಾಗಿದೆ.

"ಕೋವಿಡ್-೧೯ ಪರೀಕ್ಷೆಗಳ ಸಂಖ್ಯೆ ಸರಾಸರಿ ಹೆಚ್ಚಾಗಿದೆ; ನಾವು ದಿನಕ್ಕೆ . ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸುತ್ತಿದ್ದೇವೆ. ಆಂಟಿಜೆನ್ ಪರೀಕ್ಷೆಯ ಬಳಕೆಯಿಂದ ಮತ್ತಷ್ಟು ಏರಿಕೆ ಕಾಣಲಿದೆ ಎಂದು ನಾವು ಭಾವಿಸುತ್ತೇವೆಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಹಿರಿಯ ವಿಜ್ಞಾನಿ ನಿವೇದಿತಾ ಗುಪ್ತಾ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ೨೪,೮೭೯ ಹೊಸ ಪ್ರಕರಣಗಳೊಂದಿಗೆ ಕೊರೋನಾ ಪ್ರಕರಣಗಳ ಸಂಖ್ಯೆ ,೬೭,೨೯೬ಕ್ಕೆ ಏರಿದೆ. ಒಟ್ಟು . ಲಕ್ಷ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ,೬೯,೭೮೯ ಆಗಿದೆ. ಕಾಯಿಲೆಯಿಂದ ಈವರೆಗೆ ೨೧,೧೨೯ ಜನರು ಸಾವನ್ನಪ್ಪಿದ್ದಾರೆ (ಕಳೆದ ೨೪ ಗಂಟೆಗಳಲ್ಲಿ ೪೮೭) ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ,೨೨,೧೨,೯೯೧, ಸಾವು ,೫೩,೧೯೫

ಚೇತರಿಸಿಕೊಂಡವರು- ೭೧,೦೫,೬೩೭

ಅಮೆರಿಕ ಸೋಂಕಿತರು ೩೧,೬೧,೦೦೭, ಸಾವು ,೩೪,೯೪೦

ಸ್ಪೇನ್ ಸೋಂಕಿತರು ,೯೯,೫೯೩, ಸಾವು ೨೮,೩೯೬

ಇಟಲಿ ಸೋಂಕಿತರು ,೪೨,೧೪೯, ಸಾವು ೩೪,೯೧೪

ಜರ್ಮನಿ ಸೋಂಕಿತರು ,೯೮,೮೧೨, ಸಾವು ,೧೧೫

ಚೀನಾ ಸೋಂಕಿತರು ೮೩,೫೮೧, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೮೭,೬೨೧, ಸಾವು ೪೪,೬೦೨

ಭಾರತ ಸೋಂಕಿತರು ,೮೦,೦೫೪, ಸಾವು ೨೧,೪೧೭

ಅಮೆರಿಕದಲ್ಲಿ ೭೮, ಇರಾನಿನಲ್ಲಿ ೨೨೧, ಬ್ರೆಜಿಲ್ನಲ್ಲಿ ೩೪, ಇಂಡೋನೇಷ್ಯ ೫೮, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೭೬, ಪಾಕಿಸ್ತಾನದಲ್ಲಿ ೬೧, ಮೆಕ್ಸಿಕೋದಲ್ಲಿ ೭೮೨, ಭಾರತದಲ್ಲಿ ೩೦, ಒಟ್ಟಾರೆ ವಿಶ್ವಾದ್ಯಂತ ,೦೦೩ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೮೩,೩೪೮ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement