Monday, July 27, 2020

ಫ್ರಾನ್ಸಿನಿಂದ ಹೊರಟಿತು ರಫೇಲ್ ಜೆಟ್

ಫ್ರಾನ್ಸಿನಿಂದ ಹೊರಟಿತು ರಫೇಲ್ ಜೆಟ್

ನವದೆಹಲಿ: ರಫೇಲ್ ಜೆಟ್ ವಿಮಾನಗಳ ಮೊದಲ ಕಂತು ಫ್ರಾನ್ಸಿನಿಂದ 2020 ಜುಲೈ 27ರ ಸೋಮವಾರ ಹೊರಟಿದ್ದು, ಜುಲೈ ೨೯ರ ಬುಧವಾರ ಭಾರತಕ್ಕೆ ಆಗಮಿಸಲಿದೆ. ಭಾರತಕ್ಕೆ ಬಂದಿಳಿದ ಬಳಿಕ ರಫೇಲ್ ಜೆಟ್‌ಗಳು ಅಧಿಕೃತವಾಗಿ ಹರಿಯಾಣದ ಅಂಬಾಲಾದಲ್ಲಿನ ಭಾರತೀಯ ವಾಯುಪಡೆಯ ನೌಕಾಪಡೆಗೆ ಸೇರ್ಪಡೆಯಾಗಲಿವೆ.

ಫ್ರಾನ್ಸ್ ಮೂಲದ ಡಸಾಲ್ಟ್ ಏವಿಯೇಷನ್ ಸಂಸ್ಥೆಯು ತಯಾರಿಸಿದ ಫೈಟರ್ ಜೆಟ್‌ಗಳು ಅವಳಿ-ಎಂಜಿನ್‌ಗಳ ಬಹುಪಾತ್ರ ಯುದ್ಧ ವಿಮಾನಗಳಾಗಿವೆ. ಇವು ಅಣ್ವಸ್ತ್ರ ಸಾಮರ್ಥ್ಯ ಹೊಂದಿದ್ದು, ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ದಾಳಿಗಳಲ್ಲಿ ತೊಡಗಬಲ್ಲುದು.

ವಿಮಾನವು ಭಾರತವನ್ನು ತಲುಪಲು ,೦೦೦ ಕಿ.ಮೀ ಪ್ರಯಾಣಿಸಬೇಕಾಗಿದ್ದು,ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಲ್ ದಫ್ರಾ ವಾಯುನೆಲೆಯಲ್ಲಿ ಮಧ್ಯಂತರ ವಿಶ್ರಾಂತಿ ಪಡೆಯಲಿವೆ.

ದಾರಿಯಲ್ಲಿ ಆಗಸದಲ್ಲೇ ಇಂಧನ ತುಂಬಲಾಗುವುದು ಎಂದು ಮೂಲಗಳು ತಿಳಿಸಿವೆ.

ಚೀನಾ ಜೊತೆಗಿನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಲಡಾಖ್ ವಲಯದಲ್ಲಿ ನಿಯೋಜಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೩೬ ರಫೇಲ್ ಯುದ್ಧ ವಿಮಾನಗಳ ಪೈಕಿ ಮೊದಲನೆಯದನ್ನು ಪಡೆದಿದ್ದರು ಮತ್ತು ಪ್ಯಾರಿಸ್‌ನ ಫ್ರೆಂಚ್ ವಾಯುನೆಲೆವೊಂದರಿಂದ ಎಂಎಂಆರ್‌ಸಿಎ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಿದ್ದರು.

ಭಾರತೀಯ ವಾಯುಪಡೆಯ ಸ್ಥಾಪನಾ ದಿನದಂದು ರಫೇಲ್ ಯುದ್ಧ ವಿಮಾನವನ್ನು ಸಿಂಗ್ ಅವರಿಗೆ ಹಸ್ತಾಂತರಿಸಲಾಗಿತ್ತು. ಮೊದಲ ರಫೇಲ್ ವಿಮಾನವು ಆರ್ಬಿ ೦೧ ಬಾಲ ಸಂಖ್ಯೆಯನ್ನು ಹೊಂದಿದೆ. ಆರ್ಬಿ ಎಂದರೆ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ .ಭದೌರಿಯಾ ಎಂದು ಅರ್ಥ. ಭದೌರಿಯಾ ಅವರು ಹಾರಾಟ ಸ್ಥಿತಿಯ ೩೬ ರಫೇಲ್ ಜೆಟ್ ಖರೀದಿ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಳೆದ ವರ್ಷ ಅಕ್ಟೋಬರಿನಲ್ಲಿ ಮೊದಲ ರಫೇಲ್ ಯುದ್ಧ ವಿಮಾನವನ್ನು ಹಸ್ತಾಂತರಿಸಲಾಗಿತ್ತು ಎಂದು ರಕ್ಷಣಾ ಉತ್ಪಾದನಾ ವಿಭಾಗದ ಕಾರ್ಯದರ್ಶಿ ಅಜಯ್ ಕುಮಾರ್ ತಿಳಿಸಿದ್ದಾರೆ. ಮುಂದಿನ ಎರಡು ವರ್ಷಗಳ ಒಳಗಾಗಿ  ಎಲ್ಲ ೩೬ ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗುವುದು ಎಂದು ಭಾರತzಲ್ಲಿನ ಫ್ರೆಂಚ್ ರಾಯಭಾರಿ ಅಲೆಕ್ಸಾಂಡ್ರೆ ಝೀಗ್ಲರ್ ಹೇಳಿದ್ದಾರೆ.

No comments:

Advertisement