My Blog List

Wednesday, July 29, 2020

ರಾಜಸ್ಥಾನ: ಅಸೆಂಬ್ಲಿ ಅಧಿವೇಶನಕ್ಕೆ ಕಡೆಗೂ ಕಲರಾಜ್ ಮಿಶ್ರ ಅಸ್ತು

ರಾಜಸ್ಥಾನ: ಅಸೆಂಬ್ಲಿ

ಜೈಪುರ: ತುರ್ತು ವಿಧಾನಸಭಾ ಅಧಿವೇಶನ ಕರೆಯುವಂತೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ನೇತೃತ್ವದ ರಾಜ್ಯ ಸರ್ಕಾರವು ಸಲ್ಲಿಸಿದ ಪ್ರಸ್ತಾಪವನ್ನು ರಾಜಸ್ಥಾನ ರಾಜ್ಯಪಾಲ ಕಲರಾಜ್ ಮಿಶ್ರ ಅವರು 2020 ಜುಲೈ 29ರ ಬುಧವಾರ ಮೂರನೇ ಬಾರಿಗೆ ತಿರಸ್ಕರಿಸಿದ ಬಳಿಕ, ಮುಖ್ಯಮಂತ್ರಿ ಕಳುಹಿಸಿದ ನಾಲ್ಕನೇ ಪ್ರಸ್ತಾವವನ್ನು ಒಪ್ಪಿದ್ದು, ಆಗಸ್ಟ್ 14ರಿಂದ ವಿಧಾನಸಭೆ ಅಧಿವೇಶನಕ್ಕೆ ಸಮ್ಮತಿಸಿದರು.

ರಾಜ್ಯಪಾಲರು ಮೂರನೇಬಾರಿಗೆ ಪ್ರಸ್ತಾವ ತಿರಸ್ಕಿಸಿದ ಬೆನ್ನಲ್ಲೇ ಸಚಿವ ಸಂಪುಟದ ಸಭೆ ನಡೆಸಿದ ಗೆಹ್ಲೋಟ್ ಆಗಸ್ಟ್ ೧೪ರಿಂದ ಅಧಿವೇಶನ ಸಮಾವೇಶಗೊಳಿಸುವಂತೆ ಮತ್ತೆ ಪರಿಷ್ಕೃತ ಪ್ರಸ್ತಾಪ ಕಳಿಸಿದ್ದರು.

ಇದೇ ವೇಳೆಗೆ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ೧೮ ಮಂದಿ ಬೆಂಬಲಿಗ ಶಾಸಕರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಅನರ್ಹತೆ ಪ್ರಕ್ತಿಯ ನಡೆಸದಂತೆ ತಮಗೆ ಆಜ್ಞಾಪಿಸಿರುವ ರಾಜಸ್ಥಾನ ಹೈಕೋರ್ಟ್ ಆದೇಶದ ವಿರುದ್ಧ ವಿಧಾನಸಭಾದ್ಯಕ್ಷ ಸಿಪಿ ಜೋಶಿ ಬುಧವಾರ ಮತ್ತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು.

ಕೊರೋನಾವೈರಸ್ ಸಾಂಕ್ರಾಮಿಕವನ್ನು ಉಲ್ಲೇಖಿಸಿದ ರಾಜ್ಯಪಾಲರು ಹಾಲಿ ಸಂಕಷ್ಟ ಸಮಯದಲ್ಲಿ ಕ್ಷಿಪ್ರ ನೋಟಿಸ್ ನೀಡಿ ಅಧಿವೇಶನ ಸಮಾವೇಶಗೊಳಿಸಲು ನಿರ್ದಿಷ್ಟ ಕಾರಣಗಳೇನು ಎಂಬುದಾಗಿ ಸ್ಪಷ್ಟ ಪಡಿಸಿ ಎಂಬುದಾಗಿ ಸೂಚಿಸಿದರು.

 ೨೧ ದಿನಗಳ ನೋಟಿಸ್ ನೀಡಿ ಮಾಮೂಲಿಯಾಗಿ ಮುಂಗಾರು ಅಧಿವೇಶನ ಕರೆಯುವಂತೆಯೂ ರಾಜ್ಯಪಾಲರು ಸಲಹೆ ಮಾಡಿದರು.

ರಾಜ್ಯಪಾಲರು ಮೂರನೇ ಬಾರಿ ಸಚಿವ ಸಂಪುಟದ ಶಿಫಾರಸನ್ನು ತಿರಸ್ಕರಿಸಿದ ಬಳಿಕ ಮುಖ್ಯಮಂತ್ರಿ ಗೆಹ್ಲೋಟ್ ಸಚಿವ ಸಂಪುಟದ ಸಭೆ ಕರೆದರು.

ರಾಜಸ್ಥಾನ ಸರ್ಕಾರವು ಜುಲೈ ೩೧ರಿಂದ ವಿಧಾನಸಭಾ ಅಧಿವೇಶನ ನಡೆಸಲು ಬಯಸಿದೆ. ಹಿಂದೆ ಬಗ್ಗೆ ರಾಜ್ಯಪಾಲರಿಗೆ ಕಳುಹಿಸಲಾಗಿದ್ದ ಸಚಿವ ಸಂಪುಟದ ಟಿಪ್ಪಣಿಯಲ್ಲಿ ಮುಖ್ಯಮಂತ್ರಿಯವರು ಅಧಿವೇಶನಲ್ಲಿ ವಿಶ್ವಾಸಮತ ಕೋರುವರೇ ಎಂಬ ಬಗ್ಗೆ ನಿರ್ದಿಷ್ಟ ಪ್ರಸ್ತಾಪ ಇರಲಿಲ್ಲ.

ವಿರೋಧಿ ಬಿಜೆಪಿ ಅಥವಾ ಬಂಡಾಯ ನಾಯಕ ಸಚಿನ್ ಪೈಲಟ್ ಅಥವಾ ಅವರನ್ನು ಬೆಂಬಲಿಸುತ್ತಿರುವ ಶಾಸಕರು ಕೂಡಾ ವಿಶ್ವಾಸಮತ ಯಾಚನೆಗೆ ಆಗ್ರಹಿಸಿಲ್ಲ. ರಾಜ್ಯದಲ್ಲಿನ ರಾಜಕೀಯ ಅನಿಶ್ಚಿತತೆಗಳಿಗೆ ತೆರೆ ಎಳೆಯಲು ವಿಶ್ವಾಸಮತಯಾಚನೆ ಮಾಡಲು ತಾವು ಬಯಸಿರುವುದಾಗಿ ಗೆಹ್ಲೋಟ್ ಇದಕ್ಕೂ ಮುನ್ನ ಹೇಳಿದ್ದರು.

ಸೋಮವಾರ ಕಳುಹಿಸಿದ ತಮ್ಮ ಕೊನೆಯ ಸಂದೇಶದಲ್ಲಿ ರಾಜ್ಯಪಾಲರು ಅಧಿವೇಶನದ ಕಾರ್ಯಸೂಚಿಯಾಗಿ ವಿಶ್ವಾಸ ಮತಯಾಚನೆಯ ಲಿಖಿತ ಕೋರಿಕೆ ಮಾತ್ರವೇ  ಅಲ್ಪಾವಧಿಯ ನೋಟಿಸ್ ನೀಡಿ ಸದನದ ಸಮಾವೇಶ ಕರೆಯಲು ಆಧಾರವಾಗಬಲ್ಲುದು ಎಂದು ತಿಳಿಸಿದ್ದರು.

ಇದಕ್ಕೂ ಮುನ್ನ ರಾಜ್ಯಪಾಲರು ೨೧ ದಿನಗಳ ಸೂಚನೆ ನೀಡಿ ಅಧಿವೇಶನ ಕರೆಯಲು ಸಲಹೆ ಮಾಡಿದ್ದರು ಮತ್ತು ಅಧಿವೇಶನದ ಕಾರ್ಯಸೂಚಿ ಬಗ್ಗೆ ಸ್ಪಷ್ಟತೆ ಕೋರಿದ್ದರು. ಸದನದಲ್ಲಿ ಬಲಾಬಲ ಪರೀಕ್ಷೆ ನಡೆದಲ್ಲಿ ಅದರ ನೇರ ಪ್ರಸಾರಕ್ಕೆ ಸಲಹೆ ಮಾಡಿದ್ದರು. ವಿಧಾನಸಭೆಯಲ್ಲಿ ಕೋವಿಡ್-೧೯ ಸಂಬಂಧಿತ ಮುನ್ನೆಚ್ಚರಿಕೆ ಕ್ರಮ, ಹೇಗೆ ಸಾಮಾಜಿಕ ಅಂತರ ಪಾಲನೆಯ ಬಗ್ಗೆ ಖಾತರಿ ನೀಡಲಾಗುವುದು ಎಂದೂ ಅವರು ಪ್ರಶ್ನಿಸಿದ್ದರು.

ಮಂಗಳವಾರ ಸಭೆ ಸೇರಿದ್ದ ಮುಖ್ಯಮಂತ್ರಿ ಗೆಹ್ಲೋಟ್ ನೇತೃತ್ವದ ಸಚಿವ ಸಂಪುಟ ಸಭೆಯು ಸಮಾವೇಶ ಕರೆಯಲು ಯಾವುದೇ ಷರತ್ತುಗಳನ್ನು ವಿಧಿಸುವ ಸ್ಥಾನಾಧಿಕಾರ ರಾಜ್ಯಪಾಲ ಮಿಶ್ರ ಅವರಿಗೆ ಇಲ್ಲ ಎಂದು ಪ್ರತಿಪಾದಿಸಿತ್ತು. ತನ್ನ ಪ್ರಸ್ತಾಪವನ್ನು ಒಪ್ಪುವಂತೆ ಮಿಶ್ರ ಅವರಿಗೆ ಸೂಚಿಸಿದ್ದ ಸಚಿವ ಸಂಪುಟವು ರಾಜ್ಯಪಾಲರು ವಿಷಯದಲ್ಲಿ ವಿಫಲರಾದರೆ ಅದು ಸಂವಿಧಾನಬಾಹಿರವಾಗುತ್ತದೆ ಎಂದು ಹೇಳಿತ್ತು.

ಸಮಾವೇಶದ ಕಾರ್ಯಸೂಚಿಯನ್ನು ಸದನದ ಕಲಾಪ ಸಲಹಾ ಸಮಿತಿಯ ನಿರ್ಧರಿಸುತ್ತದೆ. ವಿಧಾನಸಭೆಯಲ್ಲಿ ಸಾಮಾಜಿಕ ಅಂತರ ಪಾಲನೆ ಬಗಗೆ ನಿರ್ಧರಿಸುವುದು ವಿಧಾನಸಭಾಧ್ಯಕ್ಷರ ಅಧಿಕಾರ ವ್ಯಾಪ್ತಿಗೆ ಸೇರಿದ ವಿಷಯ ಎಂದೂ ಸಚಿವ ಸಂಪುಟ ತಿಳಿಸಿತ್ತು.

No comments:

Advertisement