Friday, July 24, 2020

ಪಿವಿ ನರಸಿಂಹರಾವ್ ಗೆ ಸೋನಿಯಾ, ರಾಹುಲ್ ಹೊಗಳಿಕೆ

ಪಿವಿ ನರಸಿಂಹರಾವ್ ಗೆ  ಸೋನಿಯಾ, ರಾಹುಲ್ ಹೊಗಳಿಕೆ

ವರ್ಷಪೂರ್ತಿ ಜನ್ಮಶತಮಾನೋತ್ಸವ ಆಚರಣೆಗೆ ಶ್ಲಾಘನೆ

ನವದೆಹಲಿ: ವರ್ಷ ಪೂರ್ತಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಜನ್ಮ ಶತಮಾನೋತ್ಸವ ಆಚರಣೆಯನ್ನು ಹಮ್ಮಿಕೊಂಡದ್ದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಪಕ್ಷದ ತೆಲಂಗಾಣ ಘಟಕಕ್ಕೆ 2020 ಜುಲೈ 24ರ ಶುಕ್ರವಾರ ಅಭಿನಂದನಾ ಪತ್ರಗಳನ್ನು ಬರೆದಿದ್ದಾರೆ.

"ನರಸಿಂಹ ರಾವ್ ಅವರ ಜನ್ಮ ಶತಮಾನೋತ್ಸವವು ವಿದ್ವತ್ಪೂರ್ಣ ಮತ್ತು ಪ್ರಬುದ್ಧ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವ ಮತ್ತು ಗೌರವಿಸುವ ಸಂದರ್ಭವಾಗಿದೆ ಎಂದು ಸೋನಿಯಾ ಗಾಂಧಿ ಅವರ ಸಂದೇಶ ತಿಳಿಸಿದೆ.

"ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಸುದೀರ್ಘ ವೃತ್ತಿಜೀವನದ ನಂತರ, ಗಂಭೀರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅವರು ಭಾರತದ ಪ್ರಧಾನಿಯಾದರು. ಅವರ ದಿಟ್ಟ ನಾಯಕತ್ವದ ಮೂಲಕ ನಮ್ಮ ದೇಶವು ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಜಯಿಸಲು ಸಾಧ್ಯವಾಯಿತು. ೧೯೯೧ರ ಜುಲೈ ೨೪ರ ಕೇಂದ್ರ ಮುಂಗಡಪತ್ರವು  ನಮ್ಮ ದೇಶದ ಆರ್ಥಿಕ ಪರಿವರ್ತನೆಗೆ ದಾರಿಮಾಡಿಕೊಟ್ಟಿತು ಎಂದು ಸೋನಿಯಾ ಗಾಂಧಿ ಅವರ ಪತ್ರ ಹೇಳಿತು.

ರಾವ್ ಅವರ ಅಧಿಕಾರಾವಧಿಯನ್ನು ಹಲವಾರು ರಾಜಕೀಯ, ಸಾಮಾಜಿಕ ಮತ್ತು ವಿದೇಶಿ ನೀತಿಯ ಸಾಧನೆಗಳಿಂದ ಗುರುತಿಸಲಾಗಿದೆ ಮತ್ತು ಅವರು ಸಮರ್ಪಿತ ಕಾಂಗ್ರೆಸ್ಸಿಗರಾಗಿದ್ದರು ಎಂದು ಸೋನಿಯಾ ಬೊಟ್ಟು ಮಾಡಿದ್ದಾರೆ.

ವರ್ಷಪೂರ್ತಿ ಪಿವಿಎನ್ ಜನ್ಮ ಶತಮಾನೋತ್ಸವ ಆಯೋಜಿಸಿದ್ದಕ್ಕಾಗಿ ನಾನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಅಭಿನಂದಿಸುತ್ತೇನೆ. ಪಿ.ವಿ.ನರಸಿಂಹ ರಾವ್ ಅವರು ಅತ್ಯಂತ ಗೌರವಾನ್ವಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಕ್ತಿ. ಅವರ ಅನೇಕ ಸಾಧನೆಗಳು ಮತ್ತು ಕೊಡುಗೆಗಳಲ್ಲಿ ಕಾಂಗ್ರೆಸ್ ಪಕ್ಷ ಹೆಮ್ಮೆ ಪಡುತ್ತದೆ ಎಂದು ಅವರು ಹೇಳಿದರು.

ರಾವ್ ಅವರ ಅನೇಕ ಸಾಧನೆಗಳ ನೆನಪಿಗಾಗಿ ವರ್ಷಪೂರ್ತಿ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರೂ ತೆಲಂಗಾಣ ಘಟಕವನ್ನು ಅಭಿನಂದಿಸಿದರು.

" ಸಂದರ್ಭದಲ್ಲಿ, ಆಧುನಿಕ ಭಾರತವನ್ನು ರೂಪಿಸುವಲ್ಲಿ ಮನುಷ್ಯನ ಪರಂಪರೆಯನ್ನು ನಾವು ಆಚರಿಸುತ್ತೇವೆ. ತನ್ನ ಹದಿಹರೆಯದ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಂದಿನಿಂದ ಹಿಡಿದು ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯಾಗುವವರೆಗೂ ಅವರ ಗಮನಾರ್ಹ ರಾಜಕೀಯ ಪ್ರಯಾಣವು ಅವರ ಮನೋಭಾವ ಮತ್ತು ದೃಢ ನಿಶ್ಚಯವನ್ನು ಪ್ರತಿಬಿಂಬಿಸುತ್ತದೆಎಂದು ರಾಹುಲ್ ಹೇಳಿಕೆಯಲ್ಲಿ ತಿಳಿಸಿದರು.

"೧೯೯೧ರ ಜುಲೈ ೨೪ರ ಮುಂಗಡಪತ್ರದ ಇಪ್ಪತ್ತೊಂಬತ್ತನೇ ವಾರ್ಷಿಕೋತ್ಸವ ದಿನವನ್ನು ವರ್ಷದ ಜುಲೈ ೨೪ ಸೂಚಿಸುತ್ತದೆ. ದಿನ, ಭಾರತವು ಆರ್ಥಿಕ ಪರಿವರ್ತನೆಯ ದಿಟ್ಟ ಹೊಸ ಹಾದಿಯನ್ನು ಪ್ರಾರಂಭಿಸಿತು. ರಾವ್ ಮತ್ತು ಡಾ. ಮನಮೋಹನ್ ಸಿಂಗ್ ಉದಾರೀಕರಣದ ಯುಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಹುಲ್ ನುಡಿದರು.

ಕಾಂಗ್ರೆಸ್ ಹಿಂದೆ ಮಾಜಿ ಪ್ರಧಾನ ಮಂತ್ರಿ ಪಿವಿ ನರಸಿಂಹರಾವ್ ಅವರಿಂದ ದೂರ ಉಳಿದಿದೆ ಎಂಬ ಆರೋಪವಿದೆ. ೨೦೦೪ ರಲ್ಲಿ ರಾವ್ ನಿಧನರಾದಾಗ, ಇತರ ಪ್ರಧಾನ ಮಂತ್ರಿಗಳು ಮತ್ತು ಪಕ್ಷದ ಮುಖ್ಯಸ್ಥರಿಗೆ ಕೊಟ್ಟಿದ್ದ ಗೌರವಕ್ಕೆ ಭಿನ್ನವಾಗಿ, ರಾವ್ ಚಿತಾಭಸ್ಮವನ್ನು ಎಐಸಿಸಿ ಕಚೇರಿಯ ಹೊರಗೆ ಇಡಲಾಗಿತ್ತು. ರಾವ್ ಅವರ ಮೊಮ್ಮಗ, ಎನ್.ವಿ. ಸುಭಾಷ್ ಅವರು ಸಮಾರಂಭದಲ್ಲಿ ತಮ್ಮನ್ನು ಮೂಲೆಪಾಲು ಮಾಡಲಾಯಿತು ಎಂದು ಆಪಾದಿಸಿದ್ದರು. ’ ಅನ್ಯಾಯಕ್ಕಾಗಿ ಸೋನಿಯಾ ಮತ್ತು ರಾಹುಲ್ ಕ್ಷಮೆಯಾಚಿಸಬೇಕು ಎಂದು ಸುಬಾಶ್ ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ಪಕ್ಷದ ಯುವ ಕಾರ್ಯಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಾವ್, ೧೯೫೭ ರಿಂದ ೧೯೭೭ ರವರೆಗೆ ಹಿಂದಿನ ಅವಿಭಜಿತ ಆಂಧ್ರಪ್ರದೇಶದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕ್ಯಾಬಿನೆಟ್ ಮಂತ್ರಿಯಾಗಿ (೧೯೬೨ ರಿಂದ ೧೯೭೦) ಅವರು ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ನಂತರ ೧೯೭೧ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

೧೯೭೨ ರಲ್ಲಿ, ರಾವ್ ಸಂಸತ್ತಿನ ಸದಸ್ಯರಾದರು ಮತ್ತು ಅಂತಿಮವಾಗಿ ೧೯೯೧ ರಲ್ಲಿ ಪ್ರಧಾನ ಮಂತ್ರಿಯಾದರು. ರಾವ್ ಅವರನ್ನು ಭಾರತದಲ್ಲಿ ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ನೀತಿಗಳ ವಾಸ್ತುಶಿಲ್ಪಿ ಎಂಬುದಾಗಿ ಪರಿಗಣಿಸಲಾಗಿದೆ.

ಪಿವಿ ನರಸಿಂಹರಾವ್ ಅವರು ಭಾರತದ ಪರಮಾಣು ಕಾರ್‍ಯಕ್ರಮನೈಜ ಪಿತಾಮಹ ಕೂಡಾ. ಇದನ್ನು ಪಿವಿ ನರಸಿಂಹರಾವ್ ಅವರು ೨೦೦೪ರಲ್ಲಿ ನಿಧನರಾದಾಗ ಅವರ ಉತ್ತರಾಧಿಕಾರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಸ್ವತಃ ಬಹಿರಂಗ ಪಡಿಸಿದ್ದರು. ’೧೯೯೬ರ ಮೇ ತಿಂಗಳಲ್ಲಿ ಪಿವಿ ನರಸಿಂಹರಾವ್ ಅವರ ಉತ್ತರಾಧಿಕಾರಿಯಾಗಿ ತಾವು ಪ್ರಧಾನಿಪದ ವಹಿಸಿಕೊಂಡ ಕೆಲವು ದಿನಗಳ ಬಳಿಕರಾವ್ ಅವರು ನನಗೆ ಬಾಂಬ್ ಸಿದ್ಧವಾಗಿದೆ ಎಂದು ಹೇಳಿದ್ದರು. ನಾನು ಅದನ್ನು ಸ್ಫೋಟಿಸುವ ಕೆಲಸವನ್ನಷ್ಟೇ ಮಾಡಿದೆ ಎಂದು ಹೇಳುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರು ರಾವ್ ಅವರಿಗೆವಿಶಿಷ್ಠ ಶ್ರದ್ಧಾಂಜಲಿ ಸಲ್ಲಿಸಿದ್ದರು

No comments:

Advertisement