My Blog List

Thursday, July 9, 2020

ಆರ್ಥಿಕತೆ ಚೇತರಿಕೆಯ ಹಸಿರು ಚಿಗುರು: ಪ್ರಧಾನಿ ಮೋದಿ

ಆರ್ಥಿಕತೆ ಚೇತರಿಕೆಯ ಹಸಿರು ಚಿಗುರುಪ್ರಧಾನಿ ಮೋದಿ

ನವದೆಹಲಿಭಾರತದ ಆರ್ಥಿಕತೆಯು ಚೇತರಿಕೆಯ "ಹಸಿರು ಚಿಗುರುಗಳನ್ನುನೋಡಲಾರಂಭಿಸಿದೆ ಮತ್ತು ದೇಶವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಜುಲೈ 09ರ ಗುರುವಾರ ಹೇಳಿದರು.

೨೦೨೦ರ ಇಂಡಿಯಾ ಗ್ಲೋಬಲ್ ವೀಕ್ ಸಮಾವೇಶದ ಉದ್ಘಾಟನಾ ಸಮಾರಂವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ’ವಿಶ್ವವು ಕೋವಿಡ್-೧೯ ಸಾಂಕ್ರಾಮಿಕ ರೋಗದ ಜೊತೆಗೆ ಹೋರಾಡುತ್ತಿರುವ  ಹೊತ್ತಿನಲ್ಲಿ ಪುನರುಜ್ಜೀವನದ ಬಗ್ಗೆ ಮಾತನಾಡುವುದು ಅತ್ಯಂತ ಪ್ರಸ್ತುತವಾಗುತ್ತದೆಸಹಜ ಮತ್ತು ಜಾಗತಿಕ ಪುನರುಜ್ಜೀವನದ ಕಥೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

"ಅಸಾಧ್ಯವೆಂದು ನಂಬಿದ್ದನ್ನು ಸಾಧಿಸುವ ಮನೋಭಾವ ಭಾರತೀಯರಿಗೆ ಇದೆಆರ್ಥಿಕ ಚೇತರಿಕೆಯ ವಿಚಾರಕ್ಕೆ  ಬಂದಾಗ ಭಾರತದಲ್ಲಿ ನಾವು ಈಗಾಗಲೇ ಹಸಿರು ಚಿಗುರುಗಳನ್ನು ನೋಡುತ್ತಿದ್ದೇವೆ ಎಂಬುದರಲ್ಲಿ ಆಶ್ಚರ್ಯವಿಲ್ಲ’ ಎಂದು ಮೋದಿ ನುಡಿದರು.

ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದರು.

"ಎಲ್ಲ್ಲ ಜಾಗತಿಕ ಕಂಪೆನಿಗಳು ಭಾರತದಲ್ಲಿ ಬಂದು ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಾವು ಕೆಂಪುಹಾಸನ್ನು ಹೊದಿಸುತ್ತಿದ್ದೇವೆಭಾರತವು ಇಂದು ನೀಡುತ್ತಿರುವಂತಹ ಅವಕಾಶಗಳನ್ನು ಕೆಲವೇ ಕೆಲವು ದೇಶಗಳು ನೀಡುತ್ತವೆಎಂದು ಅವರು ಹೇಳಿದರು.

ಭಾರತದ ವಿವಿಧ ಸೂರ್ಯೋದಯ ಕ್ಷೇತ್ರಗಳಲ್ಲಿ ಹಲವು ಸಾಧ್ಯತೆಗಳು ಮತ್ತು ಅವಕಾಶಗಳಿವೆ ಎಂದು ಮೋದಿ ಹೇಳಿದರು. "ಕೃಷಿಯಲ್ಲಿನ ನಮ್ಮ ಸುಧಾರಣೆಗಳು ಶೇಖರಣಾ ಮತ್ತು ಸಾಗಣೆಯಲ್ಲಿ ಹೂಡಿಕೆ ಮಾಡಲು ಬಹಳ ಆಕರ್ಷಕ  ಅವಕಾಶವನ್ನು ಒದಗಿಸುತ್ತದೆಎಂದು ಮೋದಿ ನುಡಿದರು.

ಕೊರೊನಾವೈರಸ್ ಉಲ್ಬಣದ ಮಧ್ಯೆ ಜನರ ಆರೋಗ್ಯವನ್ನು ಸುಧಾರಿಸುವತ್ತ ಮಾತ್ರವೇ ಅಲ್ಲಆರ್ಥಿಕತೆಯ ಆರೋಗ್ಯದ ಬಗ್ಗೆಯೂ ತಮ್ಮ ಸರ್ಕಾರ ಗಮನ ಹರಿಸುತ್ತಿದೆ’ ಎಂದು ಪ್ರಧಾನಿ ಒತ್ತಿ ಹೇಳಿದರು.

ಕೊರೋನಾವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಜನರ ಆರೋಗ್ಯ ಸುಧಾರಣೆಯತ್ತ ಗಮನ ಕೊಡುತ್ತಲೇಸುದೀರ್ಘವಾದ  ರಾಷ್ಟ್ರವ್ಯಾಪಿ ದಿಗ್ಬಂಧನದ ಪರಿಣಾಮವಾಗಿ ಕುಸಿದ ಆರ್ಥಿಕತೆಯನ್ನು ಮೇಲೆತ್ತಲು ಮತ್ತು  ಭಾವನೆಗಳನ್ನೂ ಬಡಿದೆಬ್ಬಿಸುವ ನಿಟ್ಟಿನಲ್ಲಿ ಕೇಂದ್ರವು ಲಾಕ್ ಡೌನ್ ನಿಯಂತ್ರಣಗಳನ್ನು ಸಡಿಲಗೊಳಿಸಿದೆ ಎಂದು ಪ್ರಧಾನಿ ನುಡಿದರು.

ಒಂದೆಡೆಯಲ್ಲಿ ಭಾರತವು ವಿಶ್ವವ್ಯಾಪಿ ಸಾಂಕ್ರಾಮಿಕದ ವಿರುದ್ಧ ಪ್ರಬಲ ಸಮರ ನಡೆಸುತ್ತಿದೆಜನರ ಆರೋಗ್ಯದ ಹೆಚ್ಚಿನ ಗಮನ ಹರಿಸುವುದರ ಜೊತೆಗೇನಾವು ಆರ್ಥಿಕತೆಯ ಆರೋಗ್ಯ ಸುಧಾರಣೆಗೂ ಅಷ್ಟೇ ಗಮನ ಹರಿಸಿದ್ದೇವೆ’ ಎಂದು ಪ್ರಧಾನಿ ಹೇಳಿದರುಗ್ಲೋಬಲ್ ಇಂಡಿಯಾ ವೀಕ್ ವರ್ಚುವಲ್ ಸಮಾವೇಶವನ್ನು ಇಂಗ್ಲೆಂಡಿನಲ್ಲಿ ಸಂಘಟಿಸಲಾಗಿದೆ.

ಬಿ ದಿ ರಿವೈವಲ್ಇಂಡಿಯಾ ಅಂಡ್  ಬೆಟರ್ ನ್ಯೂ ವರ್ಲ್ಡ್’ ಎಂಬ ವಿಷಯದ  ಕಾರ್ಯಕ್ರಮದಲ್ಲಿ ೩೦ ರಾಷ್ಟ್ರಗಳಿಂದ ,೦೦೦ ಮಂದಿ ಜಾಗತಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದು೭೫ ಸಮಾವೇಶಗಳಲ್ಲಿ ೨೫೦ ಜಾಗತಿಕ ಭಾಷಣಕಾರರು ಮಾತನಾಡಲಿದ್ದಾರೆ.

ಭಾರತಕ್ಕೆ ಆರ್ಥಿಕ ಪುನರುಜ್ಜೀವನ ಎಂದರೆ ಜನರಿಗೆ ಮತ್ತು ಆರ್ಥಿಕತೆಗೆ ಗೆಲುವು-ಗೆಲುವಿನ ಪರಿಸ್ಥಿತಿ ಎಂದು ವಿವರಿಸಿದ ಪ್ರಧಾನಿ ಪ್ರಯತ್ನದ ಫಲಿತಾಂಶಗಳು ಈಗಾಗಲೇ ದೇಶದಲ್ಲಿ ಗೋಚರಿಸುತ್ತಿವೆ ಎಂದು ನುಡಿದರು.

"ಭಾರತ ಪುನರುಜ್ಜೀವನದ ಬಗ್ಗೆ ಮಾತನಾಡುವಾಗ ಅದು ಎಚ್ಚರಿಕೆಯಿಂದಸಹಾನುಭೂತಿಯೊಂದಿಗೆ ಪುನರುಜ್ಜೀವನಗೊಳ್ಳುತ್ತದೆಇದು ಪರಿಸರ ಮತ್ತು ಆರ್ಥಿಕತೆಗೆ ಸಮರ್ಥನೀಯವಾಗಿದೆ’ ಎಂದು ಪ್ರಧಾನಿ ಹೇಳಿದರು.

ಕಳೆದ ಆರು ವರ್ಷಗಳಲ್ಲಿಭಾರತವು "ಒಟ್ಟು ಆರ್ಥಿಕ ಸೇರ್ಪಡೆದಾಖಲೆ ವಸತಿ ಮತ್ತು ಮೂಲಸವಲತ್ತು ನಿರ್ಮಾಣವ್ಯಾಪಾರದ ಸರಳೀಕರಣಜಿಎಸ್ಟಿ ಸೇರಿದಂತೆ ದಿಟ್ಟ ತೆರಿಗೆ ಸುಧಾರಣೆಗಳು, ’ಆಯುಷ್ಮಾನ್ ಭಾರತದಂತಹ ವಿಶ್ವದ ಅತಿದೊಡ್ಡ ಆರೋಗ್ಯ ಸಂರಕ್ಷಣಾ ಉಪಕ್ರಮಗಳ ಮೂಲಕ ಗಮನ ಸೆಳೆದಿದೆ ಎಂದು ಮೋದಿ ವಿವರಿಸಿದರು.

ಕೃಷಿಯಲ್ಲಿನ ಸುಧಾರಣೆಗಳುಶೇಖರಣೆ ಮತ್ತು ಸಾಗಣೆಯಲ್ಲಿ ಬಹಷ್ಟು ಕಾರ್ಯಸಾಧ್ಯವಾದ ಹೂಡಿಕೆಗೆ ಅವಕಾಶ ಒದಗಿಸುತ್ತವೆರೈತರ ಕಠಿಣ ಪರಿಶ್ರಮಕ್ಕೆ ನೆರವಾಗುವಂತೆ ನೇರ ಹೂಡಿಕೆ ಮಾಡಿ ಎಂದು ಕಂಪನಿಗಳನ್ನು ಪ್ರಧಾನಿ ಒತ್ತಾಯಿಸಿದರು.

ಕಂಪೆನಿಗಳಿಗೆ ನಮ್ಮದು ರೆಡ್ ಕಾರ್ಪೆಟ್’ ಎಂದು ನುಡಿದ ಮೋದಿ ’ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತಕ್ಕೆ ಬಂದು ಹೂಡಿಕೆ ಮಾಡಿ’ ಎಂದು ಆಹ್ವಾನಿಸಿದರು.

No comments:

Advertisement