Thursday, July 9, 2020

ಗಡಿಸ್ಥಿತಿ ಸುಧಾರಣೆ,ಮುಂದಿನ ಸುತ್ತಿನ ಸಭೆ ಶೀಘ್ರ:ಚೀನಾ

ಗಡಿಸ್ಥಿತಿ ಸುಧಾರಣೆ,ಮುಂದಿನ ಸುತ್ತಿನ ಸಭೆ  ಶೀಘ್ರ:ಚೀನಾ

ಬೀಜಿಂಗ್: ನೈಜ ನಿಯಂತ್ರಣ ರೇಖೆಯಿಂದ (ಎಲ್ಎಸಿ) ಹಿಂದೆ ಸರಿಯುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಭದ್ರತಾಪಡೆಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದು, ಪರಿಸ್ಥಿತಿ ಸುಧಾರಿಸುತ್ತಿದೆ, ಹಿನ್ನೆಲೆಯಲ್ಲಿ ಮುಂದಿನ ಸುತ್ತಿನ ಸಭೆ ಶೀಘ್ರವೇ ನಡೆಯಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ 2020 ಜುಲೈ 09ರ ಗುರುವಾರ ಹೇಳಿದರು.

ಎಲ್ಎಸಿಯಿಂದ ತ್ವರಿತವಾಗಿ ಹಿಂದೆ ಸರಿಯಲು ಎರಡೂ ದೇಶಗಳ ಭದ್ರತಾಪಡೆಗಳು ಸಮ್ಮತಿಸಿದ ನಂತರ ಪೂರ್ವ ಲಡಾಖ್ ಗಡಿಯಲ್ಲಿನ ಉದ್ಭವಿಸಿದ್ದ ಪ್ರಕ್ಷುಬ್ಧ ಸ್ಥಿತಿ ತಿಳಿಯಾಗುತ್ತಿದೆಎಂದು ಅವರು ಹೇಳಿದರು.

ಉಭಯ ದೇಶಗಳ ನಡುವೆ ಮಾತುಕತೆ ಮುಂದುವರಿಯುವುದು. ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ, ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಯಲಿದೆಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

"ಕಮಾಂಡರ್ ಮಟ್ಟದ ಮಾತುಕತೆಯು, ಚೀನಾ, ಭಾರತದ ಗಡಿ ಪಡೆಗಳು ಗಲ್ವಾನ್ ಕಣಿವೆ ಮತ್ತು ಇತರ ಪ್ರದೇಶಗಳಲ್ಲಿ ವಾಪಸಾಗಲು ಸಹಾಯಕವಾಗುವ ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಂಡಿವೆಎಂದು ಲಿಜಿಯಾನ್ ಹೇಳಿದರು.

ಗಡಿಯುದ್ದಕ್ಕೂ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ಸುಧಾರಿಸುತ್ತಿದೆ. ಗಡಿ ವ್ಯವಹಾರಗಳ ಕುರಿತು ಡಬ್ಲ್ಯುಎಂಎಂಸಿಯ () ಸಭೆ ನಡೆಸುವುದು ಸೇರಿದಂತೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಉಭಯ ಪಕ್ಷಗಳು ಸಂವಾದ ಮತ್ತು ಸಂವಹನವನ್ನು ಮುಂದುವರೆಸಲಿವೆಎಂದು ಅವರು ಹೇಳಿದರು.

ಸೇನೆ ಮತ್ತು ಯುದ್ಧೋಪಕರಣಗಳನ್ನು ಹಿಂತೆಗೆದುಕೊಳ್ಳಲು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಅನುಸರಿಸುತ್ತಿರುವ ಪಡೆಗಳ ವಾಪಸಾತಿ ಅಥವಾ ಶಿಷ್ಟಾಚಾರಗಳ ವಿವರಗಳನ್ನು ವಕ್ತಾರರು ಹಂಚಿಕೊಂಡಿಲ್ಲ.

"ಭಾರತವು ನಮ್ಮೊಂದಿಗೆ ಒಟ್ಟಾಗಿ ಕ್ರಮ ಕೈಗೊಳ್ಳಲು ಮತ್ತು ಒಮ್ಮತವನ್ನು ಕಾರ್ಯಗತಗೊಳಿಸಲು ಮತ್ತು ಗಡಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಜಂಟಿಯಾಗಿ ಕೆಲಸ ಮಾಡುತ್ತದೆ ಎಂದು ಭಾವಿಸುತ್ತೇವೆಎಂದು ಅವರು ನುಡಿದರು.

ಮಂಗಳವಾರ, ಚೀನಾದ ವಿದೇಶಾಂಗ ಸಚಿವಾಲಯವು ತನ್ನ ಸೇನೆಯು ಗಲ್ವಾನ್ ಕಣಿವೆಯಿಂದ ವಾಪಸಾಗಲು  ಪ್ರಾರಂಭಿಸಿದೆ ಎಂದು ಹೇಳಿತ್ತು. ನವದೆಹಲಿ ಮತ್ತು ಬೀಜಿಂಗ್ ಏಕಕಾಲದಲ್ಲಿ ಪ್ರದೇಶದಲ್ಲಿನ ಎರಡು ತಿಂಗಳ ಸುದೀರ್ಘ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕಡಿಮೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದವು.

ಒಟ್ಟಾರೆಯಾಗಿ, ಉಭಯ ಕಡೆಯವರು ಜೂನ್ , ೨೨ ಮತ್ತು ೩೦ ರಂದು ಸೇನಾ ಕೋರ್ ಕಮಾಂಡರ್ಗಳ ಮಟ್ಟದಲ್ಲಿ ಮೂರು ಸಭೆಗಳನ್ನು ಮತ್ತು ಜೂನ್ ಮತ್ತು ೨೪ ರಂದು ಡಬ್ಲ್ಯುಎಂಸಿಸಿಯ ಎರಡು ಸಭೆಗಳನ್ನು ನಡೆಸಿದ್ದರು.

ಎಲ್ಎಸಿಯ ಲಡಾಖ್ ಸೆಕ್ಟರ್ ಪ್ರಮುಖ ಘರ್ಷಣೆ ಕೇಂದ್ರಗಳಲ್ಲಿ ಉದ್ವಿಗ್ನತೆ ಶಮನ ಮತ್ತು ಸೇನಾಪಡೆಗಳ ತೆರವು ಪ್ರಕ್ರಿಯೆಯು ಜುಲೈ ರಂದು ಭಾರತದ ಭದ್ರತಾ ಸಲಹೆಗಾರ ದೋವಲ್ ಮತ್ತು ವಾಂಗ್ ಅವರ ಫೋನ್ ಸಂಭಾಷಣೆಯ ಬಳಿಕ ಆರಂಭವಾಗಿತ್ತು.

ಸೇನಾ ಪಡೆಗಳ ತೆರವು ಪ್ರಕ್ರಿಯೆಯನ್ನು ಕ್ಷಿಪ್ರವಾಗಿ ಪ್ರಾರಂಭಿಸಲು ದೋವಲ್ ಮತ್ತು ವಾಂಗ್ ಒಪ್ಪಿದ ಬಳಿಕ, ಉಭಯ ದೇಶಗಳ ಗಡಿ ಪಡೆಗಳು ಹಿಂದೆ ಸರಿಯಲು ಪ್ರಾರಂಭಿಸಿದ್ದವು.

No comments:

Advertisement