My Blog List

Tuesday, July 28, 2020

ಎನ್‌ಎಫ್‌ಬಿಸಿ, ಬ್ಯಾಂಕುಗಳ ಜೊತೆ ಪ್ರಧಾನಿ ಚರ್ಚೆ

ಎನ್‌ಎಫ್‌ಬಿಸಿ, ಬ್ಯಾಂಕುಗಳ ಜೊತೆ ಪ್ರಧಾನಿ ಚರ್ಚೆ

ನವದೆಹಲಿ: ಹಣಕಾಸು ಕ್ಷೇತ್ರದ ಭವಿಷ್ಯದ ದೃಷ್ಟಿ ಮತ್ತು ಮಾರ್ಗಸೂಚಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು 2020 ಜುಲೈ 28ರ ಬುಧವಾರ (ನಾಳೆ) ಸಂಜೆ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಜೊತೆ ಚರ್ಚಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಯವರ ಕಚೇರಿ 2020 ಜುಲೈ 28ರ ಮಂಗಳವಾರ ಟ್ವೀಟ್ ಮಾಡಿತು..

"ಸಾಲ ಉತ್ಪನ್ನಗಳು ಮತ್ತು ವಿತರಣೆಗೆ ಸಮರ್ಥ ಮಾದರಿಗಳು, ತಂತ್ರಜ್ಞಾನದ ಮೂಲಕ ಆರ್ಥಿಕ ಸಬಲೀಕರಣ, ಹಣಕಾಸು ಕ್ಷೇತ್ರದ ಸ್ಥಿgತೆಗಾಗಿ ವಿವೇಕಯುತ ಅಭ್ಯಾಸಗಳು ಇವು ಚರ್ಚೆಯ ಕಾರ್‍ಯಸೂಚಿಯ ವಿಷಯಗಳು  ಎಂದು ಪ್ರಧಾನ ಮಂತ್ರಿ ಕಚೇರಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿತು.

ಕೊರೋನವೈರಸ್-ಪ್ರೇರಿತ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಕುಸಿತದ ಮಧ್ಯೆ ಸಾಲದ ಬೆಳವಣಿಗೆಯು ಕುಸಿದಿರುವ ಹಿನ್ನೆಲೆಯಲ್ಲಿ ಸಭೆ ಮಹತ್ವವನ್ನು ಪಡೆದುಕೊಂಡಿದೆ. ವ್ಯವಹಾರಗಳು ಇಷ್ಟು ದಿನ ಸ್ಥಗಿತಗೊಂಡಿರುವುದರಿಂದ, ಕೆಟ್ಟ ಸಾಲಗಳು ರಾಶಿ ಬೀಳುವ ಸಂಭವ ಇದೆ.

ಆರ್ಥಿಕತೆಯ ಒತ್ತಡಕ್ಕೆ ಅನುಗುಣವಾಗಿ ಒಟ್ಟು ನಿಷ್ಕ್ರಿಯ ಆಸ್ತಿಗಳು ಮಾರ್ಚ್ ೨೦೨೧ ವೇಳೆಗೆ ಶೇಕಡಾ .೫ರಿಂದ ಶೇಕಡಾ ೧೨.-೧೪. ಕ್ಕೆ ಏರಿಕೆಯಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಇತ್ತೀಚಿನ ಹಣಕಾಸು ಸ್ಥಿರತೆ ವರದಿಯಲ್ಲಿ ಅಂದಾಜಿಸಿದೆ.

ದೇಶದ ಕೆಟ್ಟ ಸಾಲ ಅನುಪಾತವು ಈಗಾಗಲೇ ೨೦೨೦ ಮಾರ್ಚ್ ಅಂತ್ಯದ ವೇಳೆಗೆ ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ಶೇಕಡಾ .೫ರಷ್ಟಿದೆ. ಸ್ಥೂಲ-ಆರ್ಥಿಕ ವಾತಾವರಣವು ವರ್ಷದ ನಂತರ ವಿಷಮಿಸಿದರೆ, ಅನುಪಾತವು ಶೇಕಡಾ ೧೪.೭ಕ್ಕೆ ಏರಿಕೆಯಾಗಬಹುದು ಎಂದು ಆರ್‌ಬಿಐ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರಸ್ತುತ, ವ್ಯವಹಾರಗಳು ಮತ್ತು ವ್ಯಕ್ತಿಗಳಿಗೆ ಸಾಲ ಮರುಪಾವತಿಯನ್ನು ಸ್ಥಗಿತಗೊಳಿಸುವ ಅವಕಾಶ ಒದಗಿಸಲಾಗಿದ್ದು, ಸಂಕಷ್ಟದಲ್ಲಿರುವ ವ್ಯವಹಾರಗಳಿಗೆ ಸ್ವಲ್ಪ ನಿರಾಳತೆ ಲಭಿಸಿದೆ. ಆದರೆ ಸಾಲದಾತರು ಆಗಸ್ಟ್‌ನಲ್ಲಿ ಪರಿಹಾರವು ಮುಗಿದ ನಂತರ ಸಂಕಷ್ಟದಲ್ಲಿ ಸಿಲುಕಿ ಮರುಪಾವತಿ ಸಾಧ್ಯವಾಗದೇ ಸಾಲ ವಸೂಲಿಯಾಗದ ಸಾಲವಾಗಿ ಪರಿವರ್ತನೆಗೊಳ್ಳಲೂ ಬಹುದು ಎಂದೂ ಆರ್‌ಬಿಐ ಎಚ್ಚರಿಸಿದೆ.

ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಇದೀಗ ಮೊದಲ ಆದ್ಯತೆ ಬಂಡವಾಳದ ಮಟ್ಟವನ್ನು ಹೆಚ್ಚಿಸುವುದು ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವುದು ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಕೋವಿಡ್ -೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದ್ರವ್ಯತೆ ಸೀಮಿತವಾಗುತ್ತಿದ್ದಂತೆ, ಸಣ್ಣ ಮತ್ತು ಮಧ್ಯಮ ಗಾತ್ರದ ಬ್ಯಾಂಕೇತರ ಹಣಕಾಸುದಾರರು ಹೊಸ ಸಾಲಗಳ ವಿಚಾರದಲ್ಲಿ ನಿಧಾನಗತಿ ಅನುಸರಿಸುತ್ತಿದ್ದಾರೆ.

ಉದಾಹರಣೆಗೆ, ಐಐಎಫ್‌ಎಲ್ ಫೈನಾನ್ಸ್ ಮತ್ತು ಎಡೆಲ್‌ವೀಸ್ ಫೈನಾನ್ಷಿಯಲ್ ಸರ್ವೀಸಸ್ ಸ್ವತ್ತುಗಳನ್ನು ಕಡಿಮೆ ಮಾರಾಟ ಮಾಡುವ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಸಗಟು ಸಾಲ ವ್ಯವಹಾರದಿಂದ ಸಂಪೂರ್ಣವಾಗಿ ನಿರ್ಗಮಿಸಲು ಬಯಸಿವೆ. ಎನ್‌ಬಿಎಫ್‌ಸಿ ಉದ್ಯಮವು ತನ್ನನ್ನು ತಾನು ಮರುಸಂಘಟಿಸುತ್ತಿದೆ ಎಂದು ಐಐಎಫ್‌ಎಲ್ ಫೈನಾನ್ಸ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ನಿರ್ಮಲ್ ಜೈನ್ ಸಂದರ್ಶನವೊಂದರಲ್ಲಿ ತಿಳಿಸಿದರು.

"ವಿಷಯಗಳು ತುಂಬಾ ಸರಳವಲ್ಲಎಂದು ಜೈನ್ ಹೇಳಿದರು.

No comments:

Advertisement