Wednesday, July 1, 2020

ಚೀನಾದ ನಿಷೇಧಿತ ‘ಟಿಕ್ ಟಾಕ್’ ಪರ ವಾದಕ್ಕೆ ರೋಹಟ್ಗಿ ನಕಾರ

ಚೀನಾದ ನಿಷೇಧಿತಟಿಕ್ ಟಾಕ್’ ಪರ ವಾದಕ್ಕೆ ರೋಹಟ್ಗಿ ನಕಾರ

ನವದೆಹಲಿ: ಭಾರತದ ಮಾಜಿ ಅಟಾರ್ನಿ ಜನರಲ್ (ಎಜಿ) ಮುಕುಲ್ ರೋಹಟ್ಗಿ ಅವರು ಚೀನಾದ ವಿಡಿಯೋ ಹಂಚಿಕೆ ವೇದಿಕೆ ಟಿಕ್ ಟಾಕ್ ಪರವಾಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಮತ್ತು ಪೂರ್ವ ಲಡಾಖ್ ಗಲ್ವಾನ್ ಕಣಿವೆ ಘರ್ಷಣೆಯ ಬಳಿಕ ಚೀನಾ ಸಂಪರ್ಕ ಹೊಂದಿದ ೫೯ ಮೊಬೈಲ್ ಅಪ್ಲಿಕೇಶನ್ಗಳ ಮೇಲೆ ಕೇಂದ್ರ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಲು 2020 ಜುಲೈ 01ರ ಬುಧವಾರ ನಿರಾಕರಿಸಿದರು.

ಹಾಲಿ ಪ್ರಕ್ಷುಬ್ಧ ಸಮಯದಲ್ಲಿ ಚೀನೀ ಸಂಪರ್ಕದ ಆಪ್ಗಳ ಮೇಲೆ ಭಾರತ ಸರ್ಕಾರವು ವಿಧಿಸಿರುವ ನಿಷೇಧವನ್ನು ತಾವು ಪ್ರಶ್ನಿಸುವುದಿಲ್ಲ  ಮತ್ತು ಚೀನೀ ಕಂಪೆನಿಯನ್ನು ಪ್ರತಿನಿಧಿಸುವುದಿಲ್ಲ ಎಂಬುದಾಗಿ ರೋಟ್ಗಿ ಹೇಳಿರುವುದಾಗಿ ವರದಿಗಳು ಹೇಳಿದವು.

ಸುಪ್ರೀಂ ಕೋರ್ಟಿನ ಮಾಜಿ ಹಿರಿಯ ವಕೀಲರು ನ್ಯಾಯಾಲಯದಲ್ಲಿ ಟಿಕ್ ಟಾಕ್ನ್ನು ಪ್ರತಿನಿಧಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ, ಏಕೆಂದರೆ ಅವರು ಇಂತಹ ಪ್ರಕ್ಷುಬ್ಧ ಸಮಯದಲ್ಲಿ ಚೀನಾ ಕಂಪೆನಿಯೊಂದರ ಪರ ಹಾಜರಾಗಲು ಮತ್ತು ಸರ್ಕಾರದ ವಿರುದ್ಧ ವಾದಿಸಲು ಸಿದ್ಧರಿಲ್ಲ ಎಂದು ರೋಹಟ್ಗಿ ಸಮೀಪವರ್ತಿಗಳೂ ತಿಳಿಸಿದರು.

ವ್ಯಾಪಕವಾಗಿ ಜನಪ್ರಿಯತೆ ಗಳಿಸಿದ ಟಿಕ್ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ ಚೀನಾದ ಲಿಂಕ್ ಹೊಂದಿದ  ಅಪ್ಲಿಕೇಶನ್ಗಳನ್ನು ಭಾರತವು ಜೂನ್ ೨೯ ರಂದು ನಿಷೇಧಿಸಿತ್ತು, "ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ವಿರುದ್ಧವಾದ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳಲ್ಲಿ ನಿರvವಾಗಿವೆ ಮತ್ತು ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ನಿಯಮಾವಳಿಗಳನ್ನು ಉಲ್ಲಂಘಿಸುತ್ತವೆ ಎಂಬ ಕಾರಣಕ್ಕಾಗಿ ಸರ್ಕಾರ ಕ್ರಮ ಕೈಗೊಂಡಿತ್ತು.

ನಿಷೇಧಿಸಲಾದ ಅಪ್ಲಿಕೇಶನ್ಗಳ ಪಟ್ಟಿಯಲ್ಲಿ ಹೆಲೋ, ಲೈಕ್, ಕ್ಯಾಮ್ ಸ್ಕ್ಯಾನರ್, ಶೇರ್ ಇಟ್, ವಿಚಾಟ್, ವೀಗೋ ವಿಡಿಯೋ, ಮಿ ವಿಡಿಯೋ ಕಾಲ್ ಕ್ಷಿಯೋಮಿ, ಕ್ಲಾಶ್ ಆಫ್ ಕಿಂಗ್ಸ್, ಮತ್ತು -ಕಾಮರ್ಸ್ ಪ್ಲಾಟ್ಫಾರ್ಮ್ಗಳಾದ ಕ್ಲಬ್ ಫ್ಯಾಕ್ಟರಿ ಮತ್ತು ಶೀನ್ ಕೂಡ ಸೇರಿವೆ.

No comments:

Advertisement