My Blog List

Thursday, July 2, 2020

ಮ್ಯಾನ್ಮಾರ್ ಆರೋಪ: ಭಯೋತ್ಪಾದಕ ಗುಂಪುಗಳಿಗೆ ಚೀನಾ ಶಸ್ತ್ರಾಸ್ತ್ರ

ಮ್ಯಾನ್ಮಾರ್ ಆರೋಪ: ಭಯೋತ್ಪಾದಕ
ಗುಂಪುಗಳಿಗೆ ಚೀನಾ ಶಸ್ತ್ರಾಸ್ತ್ರ

ನವದೆಹಲಿ: ಆಗ್ನೇಯ ಏಷ್ಯಾದ ಚೀನಾದ ನಿಕಟ ಮಿತ್ರ ಮ್ಯಾನ್ಮಾರ್, ದಂಗೆಕೋರ ಗುಂಪುಗಳನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತಗೊಳಿಸಲು ಬೀಜಿಂಗ್ ನೆರವು ನೀಡುತ್ತಿದೆ ಎಂದು ಆಪಾದಿಸಿದ್ದು, ಬಂಡುಕೋರ ಗುಂಪುಗಳ ನಿಗ್ರಹಕ್ಕಾಗಿ ಅಂತಾರಾಷ್ಟ್ರೀಯ ಸಹಕಾರಕ್ಕೆ 2020  ಜುಲೈ 02ರ ಗುರುವಾರ ಮನವಿ ಮಾಡಿತು.

ರಷ್ಯಾದ ಸರ್ಕಾರಿ-ಟಿವಿ ಚಾನೆಲ್ ಜ್ವೆಜ್ಡಾಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಮ್ಯಾನ್ಮಾರ್‌ನ ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್ ಅವರು, ಮ್ಯಾನ್ಮಾರ್‌ನಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳನ್ನುಪ್ರಬಲವಾದ ಶಕ್ತಿಗಳುಬೆಂಬಲಿಸುತ್ತಿವೆ ಎಂದು ಹೇಳಿದ್ದಲ್ಲದೆ, ಬಂಡಾಯ ಗುಂಪುಗಳನ್ನು ನಿಗ್ರಹಿಸಲು ಮ್ಯಾನ್ಮಾರ್ ಅಂತಾರಾಷ್ಟ್ರೀಯ ಸಹಕಾರವನ್ನು ಬಯಸುತ್ತದೆ ಎಂದು ಹೇಳಿದರು.

ಪ್ರಬಲ ಶಕ್ತಿಎಂಬ ಉಲ್ಲೇಖವು ಉತ್ತರದಲ್ಲಿ ಮ್ಯಾನ್ಮಾರಿನ ನೆರೆಯ ದೇಶವಾದ ಚೀನಾಕ್ಕೆ ಸಂಬಂಧಿಸಿದ್ದು ಎಂದು ಭಾವಿಸಲಾಗಿದೆ.

ಮ್ಯಾನ್ಮಾರಿನ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಝಾವ್ ಮಿನ್ ತುನ್ ಅವರು ಬಳಿಕ ಮ್ಯಾನ್ಮಾರ್ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್-ಇನ್-ಚೀಫ್) ವ್ಯಕ್ತ ಪಡಿಸಿದ ಅಭಿಪ್ರಾಯವನ್ನು ವಿಸ್ತಾರವಾಗಿ ವಿವರಿಸಿದರು. ಚೀನಾದ ಗಡಿಯ ಪಶ್ಚಿಮ ಮ್ಯಾನ್ಮಾರಿನ ರಾಖೈನ್ ರಾಜ್ಯದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳಾದ ಅರಾಕನ್ ಆರ್ಮಿ (ಎಎ) ಮತ್ತು ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್‌ಎಸ್‌ಎ) ಯನ್ನು ಸೇನಾ ಮುಖ್ಯಸ್ಥರು ಉಲ್ಲೇಖಿಸಿದ್ದಾರೆ ಎಂದು ವಕ್ತಾರರು ತಿಳಿಸಿದರು.

ಗಣಿ ದಾಳಿಯಲ್ಲಿ ಭಯೋತ್ಪಾದಕ ಗುಂಪು ಬಳಸಿದ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಉಲ್ಲೇಖಿಸಿ.ಅರಾಕನ್ ಆರ್ಮಿಯ (ಎಎ) ಹಿಂದೆವಿದೇಶಇದೆ ಎಂದು ಅವರು ಹೇಳಿದರು, ೨೦೧೯ ರಲ್ಲಿ ಮಿಲಿಟರಿಯ ಮೇಲೆ

ಮ್ಯಾನ್ಮಾರ್ ನಾಯಕತ್ವವು ಚೀನಾದತ್ತ ಬೆರಳು ತೋರಿಸಿದ್ದು ಒಂದು ಅಸಾಮಾನ್ಯ ಸಂಗತಿಯಾಗಿತ್ತು. ಆದರೆ ಚೀನಾದ ಸಂಪರ್ಕವನ್ನು ನಾಯ್ಪಿಟಾವ್ ಸೂಚಿಸಿದ್ದು ಇದೇ ಮೊದಲೇನಲ್ಲ.

೨೦೧೯ರ ನವೆಂಬರಿನಲ್ಲಿ ನಿಷೇಧಿತ ತಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿಯಿಂದ ಮ್ಯಾನ್ಮಾರ್ ಸೇನೆಯು  ಮೇಲ್ಮೈಯಿಂದ ಬಾನಿಗೆ ಎಸೆಯುವ ಕ್ಷಿಪಣಿಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದಾಗ, ಸೇನಾ ಶಸ್ತ್ರಾಸ್ತ್ರಗಳಿಗೆ ಚೀನೀ ಸಂಪರ್ಕ ಇರುವ ಬಗ್ಗೆ ಮ್ಯಾನ್ಮಾರ್ ಹೇಳಿತ್ತು. ಶಸ್ತ್ರಾಸ್ತ್ರಗಳ ವೆಚ್ಚ ಪ್ರತಿಯೊಂದಕ್ಕೂ ೭೦,೦೦೦ದಿಂದ ೯೦,೦೦೦ ಡಾಲರುಗಳಷ್ಟಾಗುತ್ತದೆ. ನಿಷೇಧಿತ ಸಂಘಟನೆಯಿಂದ  ವಶಪಡಿಸಿಕೊಂಡ ಹೆಚ್ಚಿನ ಶಸ್ತ್ರಾಸ್ತ್ರಗಳು "ಚೀನೀ ಶಸ್ತ್ರಾಸ್ತ್ರಗಳು" ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ತುನ್ ತುನ್ ನೈ ಘೋಷಿಸಿದ್ದರು.

ಚೀನಾದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮ್ಯಾನ್ಮಾರೆಸ್ ಜನಾಂಗೀಯ ಬಂಡಾಯ ಗುಂಪುಗಳು ಹೆಚ್ಚಾಗಿ ಚೀನೀ ಶಸ್ತ್ರಾಸ್ತ್ರಗಳನ್ನು ಬಳಸುತ್ತವೆ, ಮ್ಯಾನ್ಮಾರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಬೀಜಿಂಗ್ ಪಾತ್ರ ವಹಿಸುತ್ತಿದೆ ಎಂಬು ಅನುಮಾನಗಳನ್ನು ಬೆಳವಣಿಗೆ ಹುಟ್ಟು ಹಾಕಿದೆ.

ಮ್ಯಾನ್ಮಾರ್‌ನಲ್ಲಿನ ಸಶಸ್ತ್ರ ಬಂಡಾಯ ಗುಂಪುಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ ಎಂಬುದಾಗಿ ತನ್ನ ಮೇಲೆ ಬಂದಿರುವ ಆರೋಪವನ್ನು ಚೀನಾ ನಿರಾಕರಿಸಿದೆ. ಆದರೆ ಅಂತಹ ನಿರಾಕರಣೆಗಳನ್ನು ಮ್ಯಾನ್ಮಾರ್ ಗುಮಾನಿಯಿಂದಲೇ ನೋಡುತ್ತಿದೆ.

ಪ್ರಸ್ತುತ ವರ್ಷದ ಜನವರಿಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಆತಿಥ್ಯ ನೀಡಿದಾಗ, ಹಿರಿಯ ಜನರಲ್ ಹೇಲಿಂಗ್ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ಮ್ಯಾನ್ಮಾರ್ ಕಳವಳಗಳನ್ನು ವ್ಯಕ್ತ ಪಡಿಸಿದ್ದರು. ಚೀನಾದ ಶಸ್ತ್ರಾಸ್ತ್ರಗಳನ್ನು ಪಡೆಯಲು ಬಂಡುಕೋರರಿಗೆ ಇತರ ಮಾರ್ಗಗಳಿವೆ ಎಂದು ಸೂಚಿಸಿ, ಚೀನಾ ವಿಷಯಗಳನ್ನು "ಎಚ್ಚರಿಕೆಯಿಂದ ಪರಿಶೀಲಿಸುತ್ತದೆ" ಮತ್ತು "ಸಮಸ್ಯೆಯನ್ನು ಪರಿಹರಿಸುತ್ತದೆ" ಎಂದು ಕ್ಸಿ ನಂತರ ಭರವಸೆ ನೀಡಿದ್ದರು.

ಕ್ಸಿ ಸಲಹೆಯನ್ನು ಮ್ಯಾನ್ಮಾರಿನಲ್ಲಿ ಚೀನಾ ತನ್ನ ಸಣ್ಣ ನೆರೆಯವರನ್ನುಅಸ್ಥಿರಸ್ಥಿತಿಯಲ್ಲಿ ಇಡುವ ಇಡುವ ಕಸರತ್ತಿನ ಭಾಗವಾಗಿ ನೋಡಿದೆ. ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಯೋಜನೆಗಳನ್ನು ಸುಗಮವಾಗಿ ಅನುಷ್ಠಾನಗೊಳಿಸಲು ಚೀನಾ ಭಯೋತ್ಪಾದಕ ಗುಂಪುಗಳೊಂದಿಗೆ ತನ್ನ ಪ್ರಭಾವವನ್ನು ಚೌಕಾಶಿ ಚಿಪ್ ಆಗಿ ಬಳಸುತ್ತಿದೆ ಎಂದು ನಾಯ್ಪಿಟಾವ್ನಲ್ಲಿ ಒಂದು ಅಭಿಪ್ರಾಯವಿದೆ.

ಚೀನಾ-ಮ್ಯಾನ್ಮಾರ್ ಆರ್ಥಿಕ ಕಾರಿಡಾರನ್ನು ಮುಂದಕ್ಕೆ ಒಯ್ಯಲು ಬೀಜಿಂಗ್ ಸರ್ವ ಯತ್ನಗಳನ್ನು ಮಾಡುತ್ತಿದೆ.  ಎಂದು ಅಧಿಕಾರಿಗಳು ಹೇಳುತ್ತಾರೆ, ಇದು ಚೀನಾವನ್ನು ಬಂಗಾಳಕೊಲ್ಲಿಯ  ಮತ್ತು ಹಿಂದೂ ಮಹಾಸಾಗರ ಪ್ರದೇಶದ ಪೂರ್ವ ಭಾಗಕ್ಕೆ ನಿರಾಳವಾಗಿ ತಲುಪಿಸುವ ಕಾರ್ಯತಂತ್ರದ ಭಾಗವಾಗಿದೆ. ಯೋಜನೆಗಳನ್ನು ಕಾರ್ಯಗತಗೊಳಿಸಲು ನೀಡಲಾದ ಚೀನಾದ ಸಾಲಗಳ ಬಗ್ಗೆ ಸ್ವಲ್ಪ ಗುಮಾನಿ ಇದೆ. ಮ್ಯಾನ್ಮಾರ್ ಚೀನಾದ ಸಾಲದ ಬಲೆಗೆ ಬೀಳಬಾರದು ಎಂಬ ವ್ಯಾಪಕ ಅಭಿಪ್ರಾಯ ಮ್ಯಾನ್ಮಾರಿನಲ್ಲಿ ವ್ಯಕ್ತವಾಗಿದೆ.

No comments:

Advertisement