My Blog List

Thursday, July 2, 2020

ಚೇತರಿಕೆ ಪ್ರಮಾಣ ಶೇಕಡಾ ೬೦ರ ಸಮೀಪಕ್ಕೆ

ಚೇತರಿಕೆ ಪ್ರಮಾಣ ಶೇಕಡಾ ೬೦ರ ಸಮೀಪಕ್ಕೆ
 ಬಂಗಾಳದ ೯೯ ವರ್ಷದ ವ್ಯಕ್ತಿ ಗುಣಮುಖ

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಅಟ್ಟಹಾಸ ಅಗಾಧವಾಗಿ ಏರಿದ್ದರೂ, ಚೇತರಿಕೆಯ ಪ್ರಮಾಣ ಕೂಡಾ ಗಮನಾರ್ಹವಾಗಿ ಹೆಚ್ಚಿದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣ  2020 ಜುಲೈ 02ರ ಗುರುವಾರ ಶೇಕಡಾ ೬೦ರ ಸಮೀಪಕ್ಕೆ ಬಂದಿದ್ದು, ಪಶ್ಚಿಮ ಬಂಗಾಳದ ೯೯ರ ಹರೆಯದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ೪೩೪ ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಸೋಂಕಿನ ಪ್ರಕರಣಗಳ ಸಂಖ್ಯೆ ,೦೪,೬೪೧ಕ್ಕೆ ಏರಿಕೆಯಾಗಿದೆ. ಇದೇ ವೇಳೆಗೆ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರ ಸಂಖ್ಯೆ ,೫೯,೮೫೯ಕ್ಕೆ ಏರಿದೆ.

ಪಶ್ಚಿಮ ಬಂಗಾಳದ ದಕ್ಷಿಣ ೨೪ ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ನಿವಾಸಿ ಶ್ರೀಪತಿ ನ್ಯಾಯಬನ್ ಎಂಬ ೯೯ ವರ್ಷದ ರೋಗಿಯನ್ನು ಕೋಲ್ಕತ್ತಾದ ಪೂರ್ವ ಭಾಗದಲ್ಲಿರುವ ಖಾಸಗಿ ನರ್ಸಿಂಗ್ ಹೋಂನಿಂದ ಬುಧವಾರ ಬಿಡುಗಡೆ ಮಾಡಲಾಗಿದೆ.

" ವ್ಯಕ್ತಿ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸಮಸ್ಯೆಗಳನ್ನು ಹೊಂದಿಲ್ಲ ಆದರೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರು" ಎಂದು ನರ್ಸಿಂಗ್ ಹೋಂನ ಸಿಬ್ಬಂದಿಯೊಬ್ಬರು ಹೇಳಿದರು.

ನ್ಯಾಯಬನ್ ಅವರಿಗೆ ಜೂನ್ ೨೮ ಕೊರೋನಾವೈರಸ್ ಸೋಂಕು ತಗುಲಿತ್ತು. ಪಾಸಿಟಿವ್ ವರದಿ ಬಂದ ಬಳಿಕ ಅವರು ಒಂದು ವಾರದವರೆಗೆ ಚಿಕಿತ್ಸೆಗೆ ಒಳಗಾದರು. ೭೨ ಮತ್ತು ೫೩ ವರ್ಷದ ಅವರ ಇಬ್ಬರು ಪುತ್ರರಿಗೆ ಕೂಡಾ ಸೋಂಕು ತಗುಲಿದ್ದು ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

"ನನ್ನ ತಂದೆಗೆ ಉತ್ತಮ ಹೋರಾಟದ ಮನೋಭಾವವಿದೆ" ಎಂದು ರೋಗಿಯ ಕಿರಿಯ ಮಗ ಕನಕ್ ಕಾಂತಿ ನ್ಯಾಯಬನ್ ಮಾಧ್ಯಮಕ್ಕೆ ತಿಳಿಸಿದರು.

ಆದಾಗ್ಯೂ ಕೋವಿಡ್-೧೯ ರಲ್ಲಿ ಬದುಕುಳಿದ ೯೯ ವರ್ಷದ ಮೊದಲ ಭಾರತೀಯ ನ್ಯಾಬನ್ ಅಲ್ಲ ಎಂದು ವರದಿ ತಿಳಿಸಿದೆ. ಜೂನ್ ೨೬ ರಂದು, ಮಾರ್ಸೆಲಿನ್ ಸಲ್ಡಾನ್ಹಾ ಎಂಬ ೯೯ ವರ್ಷದ ಮಹಿಳೆ ಬೆಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಕರ್ನಾಟಕzಲ್ಲಿ ಸೋಂಕಿಗೆ ತುತ್ತಾಗಿ ಬದುಕಿ ಉಳಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೂನ್ ೧೭ ರಂದು ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಏಪ್ರಿಲ್‌ನಲ್ಲಿ ರಾಜಸ್ಥಾನದ ಜೈಪುರ ನಿವಾಸಿ ೯೦ ವರ್ಷದ ಭವಾನಿ ಶಂಕರ್ ಶರ್ಮಾ ಅವರು ಕೋವಿಡ್-೧೯ ಅನ್ನು ಸೋಲಿಸಿದ್ದರು. ಅವರನ್ನು ಏಪ್ರಿಲ್ ೧೪ ರಂದು ಐಡಿಎಚ್‌ಗೆ (ಸಾಂಕ್ರಾಮಿಕ ರೋಗ ಆಸ್ಪತ್ರೆ) ದಾಖಲಿಸಲಾಗಿತ್ತು. .

ಬ್ರೆಜಿಲ್‌ನಲ್ಲಿ ೯೯ ವರ್ಷದ, ಎರಡನೇ ಮಹಾಯುದ್ಧದ ಅನುಭವಿ ವರ್ಷದ ಏಪ್ರಿಲ್ ತಿಂಗಳಲ್ಲಿ ಸೋಂಕಿನಿಂದ ಬದುಕಿ ಉಳಿದಿದ್ದರು. ಎರಡನೇ ಲೆಫ್ಟಿನೆಂಟ್ (ನಿವೃತ್ತ) ಎರ್ಮಂಡೊ ಪಿವೆಟಾ, ಯುದ್ಧದ ಸಮಯದಲ್ಲಿ ಆಫ್ರಿಕಾದ ಬ್ರೆಜಿಲಿಯನ್ ಫಿರಂಗಿ ವಿಭಾಗದಲ್ಲಿ ಸೇವೆ ಸಲ್ಲಿಸಿದರು.

ಭಾರತದಲ್ಲಿ ಗುರುವಾರ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ,೦೪,೬೪೧ ಕ್ಕೆ ಏರಿಕೆಯಾಗಿದ್ದು, ಕಳೆದ ೨೪ ಗಂಟೆಗಳಲ್ಲಿ ೪೩೪ ಜನರು ಸಾವನ್ನಪ್ಪಿದ್ದಾರೆ ಎಂದು ಬೆಳಗ್ಗೆ ಗಂಟೆಗೆ ನವೀಕರಿಸಲಾದ ಮಾಹಿತಿ ತಿಳಿಸಿದೆ.

ಸೋಂಕಿನಿಂದ ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ,೫೯,೮೫೯ಕ್ಕೇ ಏರುವುದರೊಂದಿಗೆ, ಚೇತರಿಕೆಯ ಪ್ರಮಾಣ ಶೇಕಡಾ ೫೯.೫೨ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ ,೨೬,೯೪೭ ಕೊರೊನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ.

ಕಳೆದ ೨೪ ಗಂಟೆಗಳಲ್ಲಿ ವರದಿಯಾದ ೪೩೪ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೧೯೮, ತಮಿಳುನಾಡಿನಿಂದ ೬೩ ದೆಹಲಿಯಿಂದ ೬೧, ಉತ್ತರ ಪ್ರದೇಶ ಮತ್ತು ಗುಜರಾತಿನಿಂದ ತಲಾ ೨೧, ಪಶ್ಚಿಮ ಬಂಗಾಳದಿಂದ ೧೫, ಮಧ್ಯಪ್ರದೇಶದಿಂದ , ರಾಜಸ್ಥಾನದಿಂದ , ತೆಲಂಗಾಣ ಮತ್ತು ಕರ್ನಾಟಕದಿಂದ ತಲಾ , ಆಂಧ್ರಪ್ರದೇಶದಿಂದ , ಪಂಜಾಬ್‌ನಿಂದ , ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ತಲಾ , ಬಿಹಾರದಿಂದ ಮತ್ತು ಛತ್ತೀಸ್‌ಗಢ ಮತ್ತು ಗೋವಾದಿಂದ ತಲಾ ಪ್ರಕರಣಗಳು ದಾಖಲಾಗಿವೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ,೦೮,೪೯,೨೪೪, ಸಾವು ,೧೯,೯೬೩ ಚೇತರಿಸಿಕೊಂಡವರು- ೬೦,೬೭,೨೨೩

ಅಮೆರಿಕ ಸೋಂಕಿತರು ೨೭,೮೨,೩೨೧, ಸಾವು ,೩೦,೮೫೦

ಸ್ಪೇನ್ ಸೋಂಕಿತರು ,೯೬,೭೩೯, ಸಾವು ೨೮,೩೬೩

ಇಟಲಿ ಸೋಂಕಿತರು ,೪೦,೭೬೦, ಸಾವು ೩೪,೭೮೮

ಜರ್ಮನಿ ಸೋಂಕಿತರು ,೯೬,೩೭೨, ಸಾವು ,೦೬೧

ಚೀನಾ ಸೋಂಕಿತರು ೮೩,೫೩೭, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೧೩,೪೮೩, ಸಾವು ೪೩,೯೦೬

ಭಾರತ ಸೋಂಕಿತರು ,೦೭,೩೪೪, ಸಾವು ೧೭,೮೭೩

ಅಮೆರಿಕದಲ್ಲಿ ೫೨, ಇರಾನಿನಲ್ಲಿ ೧೪೮, ಬ್ರೆಜಿಲ್‌ನಲ್ಲಿ ೧೦೦, ಇಂಡೋನೇಷ್ಯ ೫೩, ನೆದರ್ ಲ್ಯಾಂಡ್ಸ್‌ನಲ್ಲಿ , ರಶ್ಯಾದಲ್ಲಿ ೧೪೭, ಪಾಕಿಸ್ತಾನದಲ್ಲಿ ೭೮, ಮೆಕ್ಸಿಕೋದಲ್ಲಿ ೭೪೧, ಭಾರತದಲ್ಲಿ ೨೫, ಒಟ್ಟಾರೆ ವಿಶ್ವಾದ್ಯಂತ ,೯೦೫ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೬೧,೧೦೮ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement