ರಾಜಸ್ಥಾನ:
ಸೋಮವಾರ ಸುಪ್ರೀಂಕೋರ್ಟ್ ವಿಚಾರಣೆ
ನವದೆಹಲಿ: ಸಚಿನ್ ಪೈಲಟ್ ನೇತೃತ್ವದ ೧೯ ಶಾಸಕರ ವಿರುದ್ಧದ ಅನರ್ಹತೆ ಪ್ರಕ್ರಿಯೆಯನ್ನು ತಡೆ ಹಿಡಿದ ರಾಜಸ್ಥಾನ ಹೈಕೋರ್ಟ್ ಆದೇಶದ ವಿರುದ್ಧ ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರು ಸಲ್ಲಿಸಿದ ವಿಶೇಷ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಮೂವರು ನ್ಯಾಯಮೂರ್ತಿಗಳ ಪೀಠವು ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಡೆಸಲಿದೆ ಎಂದು 2020 ಜುಲೈ 25ರ ಶನಿವಾರ ಸಂಜೆ ಬಿಡುಗಡೆ ಮಾಡಲಾಗಿರುವ ಸುಪ್ರೀಂಕೋರ್ಟಿನ ಪ್ರಕರಣಗಳ ಪಟ್ಟಿಯಲ್ಲಿ ತಿಳಿಸಲಾಯಿತು.
ವಿಧಾನಸಭಾಧ್ಯಕ್ಷ
ಸಿಪಿ ಜೋಶಿ ಅವರು ಬಂಡಾಯ ಶಾಸಕರ ಗುಂಪಿಗೆ ನೀಡಿದ ಅನರ್ಹತೆ ನೋಟಿಸ್‌ಗಳ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸುವುದರೊಂದಿಗೆ ಶುಕ್ರವಾರ ಸಚಿನ್ ಪೈಲಟ್ ಶಿಬಿರಕ್ಕೆ ಭಾಗಶಃ ಪರಿಹಾರ ದೊರಕಿತ್ತು.
ಇದಕ್ಕೆ
ಮುನ್ನ ಜುಲೈ ೨೪ರವರೆಗೆ ಅನರ್ಹತೆ ಪ್ರಕ್ರಿಯೆ ಮುಂದೂಡುವಂತೆ ನ್ಯಾಯಾಲಯವು ವಿಧಾನಸಭಾಧ್ಯಕ್ಷರಿಗೆ ನಿರ್ದೇಶನ ನೀಡಿತ್ತು. ಅದರ ನಂತರ, ಅನರ್ಹತೆ ಪ್ರಕ್ರಿಯೆಯನ್ನು ಮುಂದೂಡುವಂತೆ ಕೇಳಲು ರಾಜ್ಯ ನ್ಯಾಯಾಲಯಕ್ಕೆ ಯಾವುದೇ ನ್ಯಾಯವ್ಯಾಪ್ತಿಯಿಲ್ಲ ಎಂಬ ನೆಲೆಯಲ್ಲಿ ಸಭಾಧ್ಯಕ್ಷರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ
ಅರ್ಜಿಯಲ್ಲಿ, ಜೋಶಿ ಅವರು ನ್ಯಾಯಾಲಯದ ಆದೇಶವನ್ನು ‘ಕಾನೂನುಬಾಹಿರ, ವಿಕೃತ ಮತ್ತು ಸಭಾಧ್ಯಕ್ಷರ ಅಧಿಕಾರವನ್ನು ಅವಹೇಳನ’ ಎಂದು ಪ್ರತಿಪಾದಿಸಿದ್ದಾರೆ.
ಕಿಹೋಟೋ
ಹೊಲೊಹನ್ ಪ್ರಕರಣಕ್ಕೆ ಸಂಬಂಧಿಸಿದಂತೆ ೧೯೯೨ರಲ್ಲಿ ನೀಡಲಾದ ತೀರ್ಪಿನಲ್ಲಿ, ಸಭಾಧ್ಯಕ್ಷ / ಸಭಾಪತಿ ನಿರ್ಧಾರ ಕೈಗೊಳ್ಳುವ ಮುನ್ನ ನ್ಯಾಯಾಂಗ ಪರಿಶೀಲನೆಯು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.
ಸಭಾಧ್ಯಕ್ಷ/ ಸಭಾಪತಿಯವರ ವಿಚಾರಣಾ ಪ್ರಕ್ರಿಯೆಯ ಮಧ್ಯಂತರದ ಹಂತದಲ್ಲಿ ಯಾವುದೇ ಹಸ್ತಕ್ಷೇಕ್ಕೆ ಅನುಮತಿ ನೀಡಲಾಗದು ಎಂದೂ ನ್ಯಾಯಾಲಯ ಹೇಳಿತ್ತು. ಈ ಕಾನೂನು ತತ್ವವನ್ನು
ಮರುಪರಿಶೀಲಿಸಲು ನ್ಯಾಯಾಲಯವು ಪ್ರಸ್ತಾಪಿಸುತ್ತಿದೆ.
ಎಲ್ಲ್ಲ
ಸಾಂವಿಧಾನಿಕ ಪ್ರಾಧಿಕಾರಿಗಳು ತಮಗೆ ಎಳೆಯಲಾದ ‘ಲಕ್ಷ್ಮಣ ರೇಖೆ’ಯ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುವಂತೆ
ನೋಡಿಕೊಳ್ಳುವುದು ಸುಪ್ರೀಂ ಕೋರ್ಟ್‌ನ ಕರ್ತವ್ಯ ಎಂದು ಸಭಾಧ್ಯಕ್ಷರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಕಳೆದ
ವಾರ ವಿಚಾರಣೆಯ ಸಮಯದಲ್ಲಿ, ಸುಪ್ರೀಂಕೋರ್ಟ್ ಪೀಠವು ’ಅನರ್ಹತೆಯ ಬೆದರಿಕೆ ಮೂಲಕ ಶಾಸಕರ
ಭಿನ್ನಮತದ ಧ್ವನಿಯನ್ನು ಅಡಗಿಸಬಹುದೇ ಎಂಬುದು ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಭಿನ್ನಮತ ವ್ಯಕ್ತ ಪಡಿಸುವುದು ಪಕ್ಷಾಂತರ ವಿರೋಧಿ ಪ್ರಕ್ರಿಯೆಗಳ ಅಡಿಯಲ್ಲಿ ಅನರ್ಹತೆಗೆ ಕಾರಣವಾಗುವುದೇ?’ ಎಂದು ಪೀಠವು ಪ್ರಶ್ನಿಸಿತ್ತು.
‘ಜನರಿಂದ ಚುನಾಯಿತನಾದ ವ್ಯಕ್ತಿಯು ತನ್ನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲವೇ? ಭಿನ್ನಾಭಿಪ್ರಾಯದ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ, ಈ ರೀತಿ ಯಾರ ಧ್ವನಿಯನ್ನಾದರೂ ಹೀಗ ಅಡಗಿಸಬಹುದೇ?’ ಎಂದು ನ್ಯಾಯಾಲಯ ಕೇಳಿತ್ತು.
No comments:
Post a Comment