Saturday, July 25, 2020

ಏಮ್ಸ್ ಅಧ್ಯಯನ: ಜ್ವರ ಕೋರೋನಾದ ಮುಖ್ಯ ಲಕ್ಷಣವಲ್ಲ

ಏಮ್ಸ್ ಅಧ್ಯಯನ: ಜ್ವರ ಕೋರೋನಾದ ಮುಖ್ಯ ಲಕ್ಷಣವಲ್ಲ

ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ರೋಗದ ಪ್ರಮುಖ ಲಕ್ಷಣ ಜ್ವರ ಎಂಬುದಾಗಿ ಆರಂಭದ ದಿನಗಳಲ್ಲಿ ತಪ್ಪು ಅಂದಾಜು ಮಾಡಲಾಗಿತ್ತು. ವಾಸ್ತವವಾಗಿ ಜ್ವರವು ಕೊರೋನಾ ಸೋಂಕಿನ ಪ್ರಮುಖ ಲಕ್ಷಣವಲ್ಲ ಎಂಬ ವಿಚಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಜ್ವರವನ್ನು ರೋಗಲಕ್ಷಣವಾಗಿ ಅತಿಯಾಗಿ ಅಂದಾಜು ಮಾಡಿದ್ದು ಆರಂಭಿಕ ದಿನಗಳಲ್ಲಿ ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರಿದ್ದು ಹೌದು ಎಂದು ಏಮ್ಸ್ ಅಧ್ಯಯನ 2020 ಜುಲೈ 25ರ ಶನಿವಾರ ಹೇಳಿತು.

ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಬಹುಶಃ ನಾವು ಕೋವಿಡ್ -೧೯ ರೋಗಿಗಳನ್ನು ತಪ್ಪರ್ಥ ಮಾಡಿಕೊಂಡೆವು. ಜ್ವರವು ಎಂದಿಗೂ ಕೊರೋನಾವೈರಸ್‌ನಿಂದ ಉಂಟಾಗುವ ರೋಗದ ಪ್ರಮುಖ ಲಕ್ಷಣವಾಗಿರಲಿಲ್ಲ ಎಂಬುದು ಶ್ರುತಪಟ್ಟಿದೆ ಎಂದು ಏಮ್ಸ್ ಅಧ್ಯಯನ ಹೇಳಿತು.

ಐಸಿಎಂಆರ್‌ನ ಸಂಶೋಧನಾ ವಿಭಾಗವಾದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (ಐಜೆಎಂಆರ್) ನಲ್ಲಿ ಪ್ರಕಟವಾದ ಅಧ್ಯಯನವು ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ಕೇವಲ ಶೇಕಡಾ ೧೭ರಷ್ಟು ರೋಗಿಗಳಿಗೆ ಮಾತ್ರ ಜ್ವರ ಬಂದಿದ್ದುದನ್ನು ತೋರಿಸಿದೆ.

ದೆಹಲಿ ಮೂಲದ ಏಮ್ಸ್‌ನಲ್ಲಿ ಮಾರ್ಚ್ ೨೩ ರಿಂದ ಏಪ್ರಿಲ್ ೧೫ ರವರೆಗೆ ಆಸ್ಪತ್ರೆಗೆ ದಾಖಲಾದ ೧೪೪ ರೋಗಿಗಳ ಅಧ್ಯಯನವನ್ನು ನಡೆಸಲಾಯಿತು. ‘ಉತ್ತರ ಭಾರತದ ತೃತೀಯ ಆರೈಕೆ ಕೇಂದ್ರದಲ್ಲಿ ದಾಖಲಾದ ಕೋವಿಡ್ -೧೯ ರೋಗಿಗಳ ಕ್ಲಿನಿಕೊ-ಡೆಮೊಗ್ರಾಫಿಕ್ ಪ್ರೊಫೈಲ್ ಮತ್ತು ಆಸ್ಪತ್ರೆಯ ಫಲಿತಾಂಶಗಳುಎಂಬ ಶೀರ್ಷಿಕೆಯ ಸಂಶೋಧನಾ ಪ್ರಬಂಧವನ್ನು ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು ಇತರ ೨೮ ಮಂದಿಯ ಸಹಯೋಗದೊಂದಿಗೆ ಬರೆದಿದ್ದಾರೆ.

"ನಮ್ಮ ರೋಗಿಗಳಲ್ಲಿ ಕೇವಲ ಶೇಕಡಾ ೧೭ ಮಂದಿಗೆ ಮಾತ್ರ ಜ್ವರ ಇತ್ತು, ಇದು ವಿಶ್ವಾದ್ಯಂತದ ಇತರ ವರದಿಗಳಿಗೆ ಹೋಲಿಸಿದರೆ ತೀರಾ ಕಡಿಮೆ, ವಿಶ್ವಾದ್ಯಂತ ಚೀನೀ ಸಮೂಹ ಸೇರಿದಂತೆ ಶೇಕಡಾ ೪೪gಷ್ಟು ಜನರಿಗೆ ದಾಖಲಾತಿಯ ಸಮಯದಲ್ಲಿ ಜ್ವರ ಇತ್ತು. ಶೇಕಡಾ ೮೮ರಷ್ಟು ಮಂದಿಗೆ ಆಸ್ಪತ್ರೆವಾಸ ಕಾಲದಲ್ಲಿ ಜ್ವರ ಬಂದಿತು ಎಂದು ಪ್ರಬಂಧ ಹೇಳಿದೆ.

ಅಂದರೆ ಆಸ್ಪತ್ರೆಗೆ ದಾಖಲಾಗುವ ವೇಳೆಯಲ್ಲಿ ಶೇಕಡಾ ೪೪ರಷ್ಟು ರೋಗಿಗಳು ಲಕ್ಷಣರಹಿತರಾಗಿದ್ದರು ಎಂದು ಇದು ಹೇಳುತ್ತದೆ. ಲಕ್ಷಣರಹಿತ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಒಳ್ಳೆಯ ಸುದ್ದಿಯೂ ಹೌದು, ಕೆಟ್ಟ ಸುದ್ದಿಯೂ ಹೌದು. ಒಂದೆಡೆ ಇದು ಅನೇಕ ರೋಗಿಗಳು ಸೋಂಕಿಗೆ ಪ್ರತಿರಕ್ಷೆಯನ್ನು ಬೆಳೆಸಿಕೊಂಡದ್ದನ್ನು  ತೋರಿಸುತ್ತದೆ, ಆದರೆ ಮಾರ್ಚ್-ಏಪ್ರಿಲ್ ನಷ್ಟು ಹಿಂದೆಯೇ, ಸದ್ದಿಲ್ಲದೆ ರೋಗ ಹರಡಿದ್ದೂ ಇದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಬಂಧ ಹೇಳಿದೆ.

ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಜನರ ಚಲನೆಯನ್ನು ನಿಯಂತ್ರಿಸಲು ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು ಮತ್ತು ಶಾಪಿಂಗ್ ಕೇಂದ್ರಗಳು ಸೇರಿದಂತೆ ಸಾರ್ವಜನಿಕ ಮತ್ತು ವಾಣಿಜ್ಯ ಸಂಸ್ಥೆಗಳು ದೇಹದ ಉಷ್ನಾಂಶ ಅಳೆಯುವ ಬಾಡಿ ಸ್ಕ್ಯಾನ್‌ಗಳು ಮತ್ತು ಕೈಯಲ್ಲಿ ಹಿಡಿಯುವ ಥರ್ಮಾಮೀಟರ್‌ಗಳನ್ನು ಹೆಚ್ಚಾಗಿ ಅವಲಂಬಿಸಿದ್ದವು. ಜ್ವರ ಸೋಂಕಿನ ಪ್ರಮುಖ ಲಕ್ಷಣ ಅಲ್ಲದೇ ಇರುವಾಗಿ ಇಂತಹ ಕ್ರಮದ  ಪರಿಣಾಮಕಾರಿತ್ವ ಎಷ್ಟು ಎಂಬ ಪ್ರಶ್ನೆ ಏಳುತ್ತದೆ ಎಂದು ವರದಿ ಹೇಳಿದೆ.

ಉತ್ತರ ಭಾರತದ ಕೋವಿಡ್ -೧೯ ರೋಗಿಗಳ ಗುಂಪಿನ ವೈದ್ಯಕೀಯ ಜನಸಂಖ್ಯಾ ಗುಣಲಕ್ಷಣಗಳು ಮತ್ತು ಆಸ್ಪತ್ರೆಯ ಫಲಿತಾಂಶಗಳನ್ನು ವಿವರಿಸುವ ಉದ್ದೇಶದಿಂದ ಅಧ್ಯಯನ ನಡೆಸಲಾಗಿದೆ.

ಅಧ್ಯಯನ ಮಾಡಿದ ೧೪೪ ರೋಗಿಗಳ ಸರಾಸರಿ ವಯಸ್ಸು ಸುಮಾರು ೪೦ ವರ್ಷಗಳಾಗಿದ್ದು ಅವರ ಪೈಕಿ ಶೇಕಡಾ ೯೩. ರಷ್ಟು ಪುರುಷರು, ಮತ್ತು ೧೦ ವಿದೇಶಿ ಪ್ರಜೆಗಳು ಸೇರಿದ್ದಾರೆ.

ಶೇಕಡಾ ೭೭.೧ರಷ್ಟು ಸೋಂಕುಗಳು ದೇಶೀಯ ಪಯಣದಿಂದ ಅಥವಾ ಪೀಡಿತ ರಾಜ್ಯಗಳಿಂದ ಬಂದಿದ್ದರೆ, ಕೋವಿಡ್ ೧೯ ರೋಗಿಗಳ ನಿಕಟ ಸಂಪರ್ಕದಿಂದ ಶೇಕಡಾ ೮೨. ಮಂದಿಗೆ ರೋಗ ಸೋಂಕಿದೆ.

ಒಂಬತ್ತು ರೋಗಿಗಳು ಧೂಮಪಾನಿಗಳಾಗಿದ್ದರೆ, ೨೩ ರೋಗಿಗಳಲ್ಲಿ ಸಹ ಆರೋಗ್ಯ ಸಮಸ್ಯೆಗಳು ಇದ್ದವು, ಅದರಲ್ಲಿ ಮಧುಮೇಹವು ಪ್ರಮುಖವಾಗಿತ್ತು.

ಗಮನಾರ್ಹ ಪ್ರಮಾಣದ (ಸುಮಾರು ಶೇಕಡಾ ೪೪) ರೋಗಿಗಳು ಯಾವುದೇ ರೋಗಲಕ್ಷಣಗಳನ್ನು ಹೊಂದಿರಲಿಲ್ಲ. ರೋಗಲಕ್ಷಣಗಳನ್ನು ಹೊಂದಿರುವವರು ಕೆಮ್ಮನ್ನು ಸಾಮಾನ್ಯ ಲಕ್ಷಣವೆಂದು ದೂರಿದರು, ಆದರೆ ಜ್ವರವು ಸಾಮಾನ್ಯವಾಗಿರಲಿಲ್ಲ. ಶೇಕಡಾ ರೋಗಿಗಳಲ್ಲಿ ಮೂಗಿನ ಸೊಂಕು ಲಕ್ಷಣಗಳು ಕಂಡುಬಂದವು. ಬಹುಪಾಲು ರೋಗಿಗಳನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಔಷzsದೊಂದಿಗೆ ಮತ್ತು ಪ್ರಕರಣಗಳನ್ನು ಆಧರಿಸಿ ಸೂಕ್ತ ಚಿಕಿತ್ಸೆಯೊಂದಿಗೆ ನಿರ್ವಹಿಸಲಾಯಿತು. ಕೇವಲ ಐವರು ರೋಗಿಗಳಿಗೆ ಆಮ್ಲಜನಕದ ಬೆಂಬಲ, ನಾಲ್ಕು ಮಂದಿಗೆ ತೀವ್ರ ನಿಗಾ, ಒಬ್ಬರಿಗೆ ವೆಂಟಿಲೇಟರ್ ಬೇಕಾಯಿತು. ಇಬ್ಬರು ರೋಗಿಗಳು ಮೃತರಾಗಿದ್ದಾರೆ, ಸಾಮಾನ್ಯವಾಗಿ ೧೬-೧೮ ದಿನಗಳಲ್ಲಿ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಕೋವಿಡ್ -೧೯ ರೋಗಲಕ್ಷಣಗಳನ್ನು ಅಧ್ಯಯನ ಮಾಡಲು ವಿಶಾಲವಾದ ಮಸೂರ ಅಗತ್ಯವಿರುತ್ತದೆ. ಸೋಂಕು ಮೊದಲೇ ನಂಬಿದ್ದಕ್ಕಿಂತ ಹೆಚ್ಚು ವ್ಯವಸ್ಥಿತವಾಗಿದೆ. ಇದರ ಅಧ್ಯಯನವು ಪ್ರತಿದಿನ ಕಲಿಕೆಯ ಪ್ರಕ್ರಿಯೆಯಾಗಿದೆ ಎಂದು ಡಾ. ರಣದೀಪ್ ಗುಲೇರಿಯಾ ಹೇಳಿದರು.

"ನಮ್ಮಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ದಾಖಲಾದ ಯುವಕರು ನಂತರ ಕೋವಿಡ್ -೧೯ ರೋಗಿಗಳಾಗಿ ಪರಿವರ್ತಿತರಾದರು. ಹೃದಯಾಘಾತದ ರೋಗಿಗಳು ಇದ್ದರು, ಅವರೂ ಬಳಿಕ ಕೋವಿಡ್ -೧೯ ರೋಗಿಗಳಾದರು. ನಾನು ಅತಿಸಾರದ ದೂರಿನೊಂದಿಗೆ ಒಬ್ಬ ರೋಗಿ ಬಂದಿದ್ದರು. ಅವರಿಗೆ ಉಸಿರಾಟದ ಲಕ್ಷಣಗಳಿರಲಿಲ್ಲ. ಲಾಕ್ ಡೌನ್ ಕಾರಣ ತಾಜಾ ನೀರು ಸಿಗದೆ ಅವರಿಗೆ ಅತಿಸಾರ ಆಗಿತ್ತು. ಆತನಿಗೆ ಐದರಿಂದ ಏಳು ದಿನಗಳವರೆಗೆ ಅವನಿಗೆ ಅತಿಸಾರವಿತ್ತು. ಕಣ್ಣಿನ ಸಮಸ್ಯೆಗಳಿದ್ದ ರೋಗಿಗಳು ಕೋವಿಡ್ ರೋಗಿಗಳಾದುದನ್ನು ನಾವು ಕಂಡಿದ್ದೇವೆಎಂದು ಅವರು ನುಡಿದರು.

No comments:

Advertisement