ಸಿಬಿಎಸ್‌ಇ ಪಠ್ಯ ಹೊರೆ ಶೇಕಡಾ ೩೦ರಷ್ಟು ಕಡಿತ
ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ಶೈಕ್ಷಣಿಕ ನಷ್ಟವನ್ನು ಸರಿದೂಗಿಸುವ ಸಲುವಾಗಿ ೨೦೨೦-೨೦೨೧ರ ಶೈಕ್ಷಣಿಕ ವರ್ಷದಲ್ಲಿ ೯ ರಿಂದ ೧೨ ನೇ ತರಗತಿವರೆಗಿನ ಪಠ್ಯಕ್ರಮವನ್ನು ಶೇಕಡಾ ೩೦ರಷ್ಟು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2020 ಜುಲೈ 07ರ ಮಂಗಳವಾರ ಪ್ರಕಟಿಸಿತು.
"ದೇಶ ಮತ್ತು ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಅಸಾಮಾನ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಿಬಿಎಸ್‌ಇ ಪಠ್ಯಕ್ರಮವನ್ನು ಪರಿಷ್ಕರಿಸಲು ಮತ್ತು ೯ರಿಂದ ೧೨ರವರೆಗಿನ ತರಗತಿಯ ವಿದ್ಯಾರ್ಥಿಗಳಿಗೆ ಕೋರ್ಸ್ ಹೊರೆಯನ್ನು ಕಡಿಮೆ ಮಾಡಲು ಸೂಚಿಸಲಾಗಿದೆ" ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೋಖ್ರಿಯಾಲ್ ಹೇಳಿದರು.
ಪಠ್ಯಸೂಚಿ ಕಡಿತವು ಪ್ರಮುಖ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಇರುತ್ತದೆ ಎಂದು ಮಾನವ ಸಂಪನ್ಮೂಲ ಸಚಿವರು ಹೇಳಿದರು.
"ಕಲಿಕೆಯ ಮಟ್ಟವನ್ನು ಸಾಧಿಸುವ ಪ್ರಾಮುಖ್ಯತೆಯನ್ನು ಪರಿಗಣಿಸಿ, ಪಠ್ಯಕ್ರಮವನ್ನು ಪ್ರಮುಖ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವುದರೊಂದಿಗೆ ಸಾಧ್ಯವಾದಷ್ಟು ಮಟ್ಟಿಗೆ ತರ್ಕಬದ್ಧಗೊಳಿಸಲಾಗಿದೆ" ಎಂದು ಸಿಬಿಎಸ್‌ಇ ಹೇಳಿಕೆಯಲ್ಲಿ ತಿಳಿಸಿತು.
ಶಾಲೆಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಕಡಿತಗೊಳಿಸಿದ ವಿಷಯಗಳನ್ನು ಸಹ ವಿದ್ಯಾರ್ಥಿಗಳಿಗೆ ವಿವರಿಸಬಹುದು. ಆದಾಗ್ಯೂ ಆದಾಗ್ಯೂ ಕಡಿತಗೊಳಿಸಲಾದ ಪಠ್ಯಕ್ರಮವು ಆಂತರಿಕ ಮೌಲ್ಯಮಾಪನ ಮತ್ತು ವರ್ಷಾಂತ್ಯದ ಮಂಡಳಿಯ ಪರೀಕ್ಷೆಯ ವಿಷಯಗಳ ಭಾಗವಾಗಿರುವುದಿಲ್ಲ" ಎಂದು ಹೇಳಿಕೆ ತಿಳಿಸಿದೆ.
ಪರ್ಯಾಯ ಅಕಾಡೆಮಿಕ್ ಕ್ಯಾಲೆಂಡರ್ ಮತ್ತು ವಿಭಿನ್ನ ತಂತ್ರಗಳನ್ನು ಬಳಸಿಕೊಂಡು ಪಠ್ಯಕ್ರಮವನ್ನು ರೂಪಿಸುವ ನಿಟ್ಟಿನಲ್ಲಿ ಎನ್ಸಿಇಆರ್ಟಿಯ ಒಳಹರಿವು ಕೂಡಾ ಬೋಧನಾ ಶಿಕ್ಷಣದ ಭಾಗವಾಗಬಹುದು ಎಂದು ಹೇಳಿಕೆ ತಿಳಿಸಿದೆ.
ಹ್ಯಾಷ್ ಸಿಲೆಬಸ್ ಫಾರ್ ಸ್ಟೂಡೆಂಟ್ಸ್ ೨೦೨೦ (#SyllabusForStudents2020) ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡುವ ಕುರಿತು ದೇಶಾದ್ಯಂತ ಶಿಕ್ಷಣ ತಜ್ಞರಿಂದ ೧,೫೦೦ ಕ್ಕೂ ಹೆಚ್ಚು ಸಲಹೆಗಳು ತಮಗೆ ಬಂದಿವೆ ಎಂದು ಪೋಖ್ರಿಯಾಲ್ ಹೇಳಿದರು.
No comments:
Post a Comment