Friday, August 21, 2020

ದೇಶದಲ್ಲಿ ಕೋವಿಡ್ ಗರಿಷ್ಠ ಚೇತರಿಕೆ, ಪ್ರಮಾಣ 74.28ಕ್ಕೆ ಏರಿಕೆ

 ದೇಶದಲ್ಲಿ ಕೋವಿಡ್  ಗರಿಷ್ಠ ಚೇತರಿಕೆ,
ಪ್ರಮಾಣ 74.28ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೬೨,೨೮೨ ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಮದ ಬಿಡುಗಡೆಯಾಗುವುದರೊಂದಿಗೆ ದೇಶವು ಶುಕ್ರವಾರ ಕೋವಿಡ್ ಪ್ರಕರಣಗಳ ಚೇತರಿಕೆಯಲ್ಲಿ ದಾಖಲೆ ಸ್ಥಾಪಿಸಿದೆ ಎಂದು ಕೇಂರ ಆರೋಗ್ಯ ಸಚಿವಾಲಯ 2020 ಆಗಸ್ಟ್ 21ರ ಶುಕ್ರವಾರ ತಿಳಿಸಿತು.

ಆಸ್ಪತ್ರೆಗಳು ಮತ್ತು ಮನೆಯ ಪ್ರತ್ಯೇಕತೆಯಲ್ಲಿರುವ ಹೆಚ್ಚಿನ ರೋಗಿಗಳು ಗುಣಮುಖರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶುಕ್ರವಾರದವರೆಗೆ ಗುಣಮುಖರಾದವರ ಸಂಖ್ಯೆ ೨೧. ಲಕ್ಷವನ್ನು (೨೧,೫೮,೯೪೬) ದಾಟಿತು.

ಚೇತರಿಕೆಗಳೊಂದಿಗೆ ದೇಶದ ಚೇತರಿಕೆಯ ಪ್ರಮಾಣವು ಈಗ ಶೇಕಡಾ ೭೪ ರಷ್ಟು (ಆಗಸ್ಟ್ ೨೧ ವೇಳೆಗೆ ೭೪.೨೮ ಶೇಕಡಾ) ಏರಿದೆ ಎಂದು ಸಚಿವಾಲಯ ಹೇಳಿತು.

೩೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚೇತರಿಕೆಯ ಪ್ರಮಾಣ ಶೇಕಡಾ ೫೦ ಕ್ಕಿಂತ ಹೆಚ್ಚು ದಾಖಲಾಗಿದೆ ಅದು ಹೇಳಿತು.

ಭಾರತದಲ್ಲಿ ಕೊರೋನಾವೈರಸ್ ಸಾವಿನ ಪ್ರಮಾಣ (ಸಿಎಫ್‌ಆರ್) ಜಾಗತಿಕ ಸರಾಸರಿಗಿಂತ ಕಡಿಮೆ ಇದೆ. ಇದು ನಿರಂತರವಾಗಿ ಧನಾತ್ಮಕವಾಗಿದ್ದು, ಪ್ರಸ್ತುತ ಶೇಕಡಾ .೮೯ಕ್ಕೆ ಇಳಿದಿದೆ.

ಹಾಗಾದರೆ ಭಾರತವು ಕೋವಿಡ್ -೧೯ ಸೋಂಕಿನ ಉತ್ತುಂಗಕ್ಕೆ ಏರಿದೆಯೇ? ಅಥವಾ ನಾವು ಅದರ ಸಮೀಪದಲ್ಲಿ ಇದ್ದೇವೆಯೇ ಎಂಬ ಪ್ರಶ್ನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಇಕೋವ್ರಾಪ್‌ನಲ್ಲಿ ಉತ್ತರ ಕೊಟ್ಟಿದೆ.

ಆಗಸ್ಟ್ ೧೭ ರಂದು ಬಿಡುಗಡೆಯಾದ ಎಸ್‌ಬಿಐ ವರದಿಯಲ್ಲಿ, ಜುಲೈ ೩೦ ರಿಂದ ಆಗಸ್ಟ್ ೧೫ ರವರೆಗೆ ಭಾರತವು ೧೦ ಲಕ್ಷ ಪ್ರಕರಣಗಳನ್ನು (ಅಥವಾ ಸರಾಸರಿ ೫೮,೦೦೦ ದೈನಂದಿನ ಪ್ರಕರಣಗಳು) ವರದಿ ಮಾಡಿದೆ.

ಇನ್ನೂ ಭಾರತವು ತನ್ನ ಉತ್ತುಂಗವನ್ನು ಯಾವಾಗ ತಲುಪುತ್ತದೆ ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿದೆ. ಆಯ್ದ ದೇಶಗಳ ಗರಿಷ್ಠ ದತ್ತಾಂಶ ಮತ್ತು ಚೇತರಿಕೆ ದರವನ್ನು ಆಧರಿಸಿ, ಭಾರತವು ಅದರ ಚೇತರಿಕೆಯ ಪ್ರಮಾಣವು ಶೇಕಡಾ ೭೫ ಗಡಿ ದಾಟಿದಾಗ ತಾಂತ್ರಿಕವಾಗಿ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ನಾವು ನಂಬುತ್ತೇವೆ, ಇದು ದೇಶಾದ್ಯಂತದ ಸರಾಸರಿ ಮಾನದಂಡವಾಗಿದೆ ಎಂದು ಎಸ್‌ಬಿಐ ಇಕೋವ್ರಾಪ್ ಹೇಳಿದೆ.

ಚೇತರಿಕೆ ಪ್ರಮಾಣ ಮತ್ತು ಗರಿಷ್ಠ ಪ್ರಮಾಣಗಳಿಗೆ ಯಾವುದೇ ಸಂಬಂಧವಿಲ್ಲ. ಬ್ರೆಜಿಲ್ ತನ್ನ ಗರಿಷ್ಠ ಪ್ರಮಾಣವನ್ನು ಶೇಕಡಾ ೬೯ ರಷ್ಟು ಚೇತರಿಕೆ ಪ್ರಮಾಣವಿದ್ದಾಗ ತಲುಪಿದೆ ಎಂದು ವರದಿ ಹೇಳಿದೆ.

ವರದಿಯ ವಿವಿಧ ರಾಜ್ಯಗಳ ಪರಿಸ್ಥಿತಿಯನ್ನು ವಿವರಿಸಿದೆ. "ಭಾರತದಲ್ಲಿ ಪ್ರತಿಯೊಂದು ರಾಜ್ಯದ ಪರಿಸ್ಥಿತಿ ಸಾಕಷ್ಟು ವಿಶಿಷ್ಟವಾಗಿದೆ. ಕೆಲವು ರಾಜ್ಯಗಳಲ್ಲಿ ಶಿಖರವು ಈಗಾಗಲೇ (ದೆಹಲಿ, ತಮಿಳುನಾಡು, ಇತ್ಯಾದಿ) ಹಾದುಹೋಗಿದೆ ಎಂದು ನಿರೀಕ್ಷಿಸಲಾಗಿದೆ, ಆದರೆ ಇತರ ರಾಜ್ಯಗಳಲ್ಲಿ (ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಇತ್ಯಾದಿ) ಇನ್ನೂ ಬರಬೇಕಿದೆ ಎಂದು ವರದಿ ತಿಳಿಸಿದೆ.

೨೭ ರಾಜ್ಯಗಳ ಪೈಕಿ ಕನಿಷ್ಠ ೨೨ ರಾಜ್ಯಗಳು ಇನ್ನೂ ಗರಿಷ್ಠ ಮಟ್ಟವನ್ನು ಕಂಡಿಲ್ಲ ಎಂದು ಎಸ್‌ಬಿಐ ವರದಿ ತಿಳಿಸಿದೆ. ‘ಶಿಖರವನ್ನು ದಾಟಿದಂತೆ ಕಂಡುಬರುವ ರಾಜ್ಯಗಳು: ತಮಿಳುನಾಡು, ದೆಹಲಿ, ಗುಜರಾತ್, ಜೆ & ಕೆ ಮತ್ತು ತ್ರಿಪುರ ಎಂದು ವರದಿ ಸೂಚಿಸಿದೆ.

No comments:

Advertisement