Tuesday, August 25, 2020

ಮಾಸ್ಕ್ ಧರಿಸದ ಬೇಜಾಬ್ದಾರಿಗಳಿಂದ ಸೋಂಕು ಪ್ರಸಾರ

 ಮಾಸ್ಕ್ ಧರಿಸದ ಬೇಜಾಬ್ದಾರಿಗಳಿಂದ ಸೋಂಕು ಪ್ರಸಾರ

ನವದೆಹಲಿ: ’ಮುಖವಾಡ ಧರಿಸದ ಬೇಜವಾಬ್ದಾರಿ ಜನರು ಭಾರತದಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ರೋಗವನ್ನು ಹರಡುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮುಖ್ಯಸ್ಥರು 2020 ಆಗಸ್ಟ್ 25ರ ಮಂಗಳವಾರ ಹೇಳಿದರು.

"ನಾನು ಎಳೆಯರು ಅಥವಾ ವಯಸ್ಸಾದವರು ಎಂದು ಹೇಳುತ್ತಿಲ್ಲ. ಆದರೆ ಬೇಜವಾಬ್ದಾರಿಯುತರಾದ, ಕಡಿಮೆ ಜಾಗರೂಕತೆಯ, ಮುಖಗವಸುಗಳನ್ನು (ಮಾಸ್ಕ್) ಧರಿಸದ ಜನರು ಭಾರತದಲ್ಲಿ ಸಾಂಕ್ರಾಮಿಕ ರೋಗವನ್ನು ಹರಡುತ್ತಿದ್ದಾರೆ ಎಂದು ಐಸಿಎಂಆರ್ ಮಹಾನಿರ್ದೇಶಕ ಪ್ರೊಫೆಸರ್ (ಡಾ) ಬಲರಾಮ್ ಭಾರ್ಗವ ಹೇಳಿದರು.

ಮೂರು ಲಸಿಕೆ ಸಂಶೋಧಕರು ದೇಶದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದೂ ಭಾರ್ಗವ ಅವರು ಅವರು ಹೇಳಿದರು.

"ಭಾರತದಲ್ಲಿ ಮೂರು ಕೋವಿಡ್-೧೯ ಲಸಿಕೆ ಸಂಶೋಧಕರು ಮುಂಚೂಣಿಯಲ್ಲಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟಿನ  ಲಸಿಕೆಯು ಹಂತ (ಬಿ) ಮತ್ತು ಹಂತ ಪ್ರಯೋಗಗಳಲ್ಲಿದೆ. ಭಾg ಬಯೋಟೆಕ್ ಮತ್ತು ಝೈಡಸ್  ಕ್ಯಾಡಿಲಾ ಅವರ ಲಸಿಕೆಗಳು ೧ನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಡಾ ಭಾರ್ಗವ ನುಡಿದರು.

ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೬೦,೯೭೫ ಕೊರೋನಾವೈರಸ್ ಪ್ರಕರಣಗಳು ಭಾರತದಲ್ಲಿ ದಾಖಲಾದ ದಿನ ಭಾರ್ಗವ ಅವರ ಹೇಳಿಕೆಗಳು ಬಂದಿವೆ.

ಹೊಸ ೬೦,೯೭೫ ಪ್ರಕರಣಗಳೊಂದಿಗೆ ಭಾರತದಲ್ಲಿನ ಸೋಂಕಿನ ಪ್ರಕರಣಗಳ ಸಂಖ್ಯೆ ೩೧,೬೭,೩೨೩ಕ್ಕೆ ಏರಿತು.

೨೪ ಗಂಟೆಗಳ ಅವಧಿಯಲ್ಲಿ ೮೪೮ ಸಾವುಗಳು ವರದಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ ೫೮,೩೯೦ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಮಂಗಳವಾರ ತಿಳಿಸಿವೆ.

ದೇಶದಲ್ಲಿ ,೦೪,೩೪೮ ಸಕ್ರಿಯ ಕೊರೋನಾವೈರಸ್ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ ೨೨.೨೪ ರಷ್ಟಿದೆ ಎಂದು ಮಾಹಿತಿ ತಿಳಿಸಿದೆ.

ಆದಾಗ್ಯೂ, ದೇಶದ ಚೇತರಿಕೆ ಪ್ರಮಾಣವು ಸ್ಥಿರವಾಗಿ ಸುಧಾರಿಸುತ್ತಿದೆ. ಚೇತರಿಸಿಕೊಂಡ ರೋಗಿಗಳ ಸಂಖ್ಯೆ ಮಂಗಳವಾರ ೨೪,೦೪,೫೮೫ ಕ್ಕೆ ಏರಿದ್ದು, ಚೇತರಿಕೆಯ ಪ್ರಮಾಣವನ್ನು ಶೇಕಡಾ ೭೫.೯೨ಕ್ಕೆ ಏರಿಸಿದೆ.

ಕೋವಿಡ್ -೧೯ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ .೮೪ ಕ್ಕೆ ಇಳಿದಿದೆ.

ಆಗಸ್ಟ್ ರಂದು ಭಾರತದ ಕೋವಿಡ್-೧೯ ಪ್ರಕರಣಗಳ ಒಟ್ಟು ಸಂಖ್ಯೆ ೨೦ ಲಕ್ಷದ ಗಡಿ ದಾಟಿದೆ. ಐಸಿಎಂಆರ್ ಪ್ರಕಾರ, ಒಟ್ಟು ,೬೮,೨೭,೫೨೦ ಮಾದರಿಗಳನ್ನು ಆಗಸ್ಟ್ ೨೪ ರವರೆಗೆ ಪರೀಕ್ಷಿಸಲಾಗಿದ್ದು, ,೨೫,೩೮೩ ಮಾದರಿಗಳನ್ನು ಸೋಮವಾರ ಪರೀಕ್ಷಿಸಲಾಗಿದೆ.

No comments:

Advertisement