ದೇಶದಲ್ಲಿ ಕೊರೋನಾ ಸಂಖ್ಯೆ ೨೫.೨೬ ಲಕ್ಷಕ್ಕೆ, ಚೇತರಿಕೆ ೧೮ ಲಕ್ಷ
ನವದೆಹಲಿ: ೨೪ ಲಕ್ಷ ಗಡಿ ತಲುಪಿದ ಒಂದು ದಿನದ ಬಳಿಕ ಒಂದೇ ದಿನ ೬೫,೦೦೨ ಸೋಂಕಿನ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತದ ಕೋವಿಡ್ -೧೯ ಪ್ರಕರಣಗಳು 2020 ಆಗಸ್ಟ್ 15ರ ಶನಿವಾರ ೨೫ ಲಕ್ಷದ ಗಡಿ ದಾಟಿತು. ಆದರೆ ಇದೇ ವೇಳೆಗೆ ಒಟ್ಟು ೧೮ ಲಕ್ಷ ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರ ಶೇಕಡಾ ೭೧.೬೧ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು.
ಆಗಸ್ಟ್ ೧೧ ರಿಂದ ಭಾರತದಲ್ಲಿ ಪ್ರತಿದಿನ ೬೦,೦೦೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಆಗಸ್ಟ್ ೧೧ ರಂದು ದೇಶದಲ್ಲಿ ೫೩,೬೦೧ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದವು.
ಕೋವಿಡ್-೧೯ ಒಟ್ಟು ಪ್ರಕರಣಗಳ ಸಂಖ್ಯೆ ೨೫,೨೬,೧೯೨ ರಷ್ಟಿದ್ದರೆ, ಸಾವಿನ ಸಂಖ್ಯೆ ೪೯,೦೩೬ ಕ್ಕೆ ಏರಿರ. ೯೯೬ ಜನರು ೨೪ ಗಂಟೆಗಳಲ್ಲಿ ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಶನಿವಾರ ಬೆಳಿಗ್ಗೆ ೮ ಗಂಟೆಗೆ ನವೀಕರಿಸಲಾದ ಮಾಹಿತಿ ತಿಳಿಸಿತು.
ಇದೇ ವೇಳೆಗೆ ಕೊರೋನಾ ಸಾವಿನ ಪ್ರಮಾಣ ಶೇಕಡಾ ೧.೯೪ ಕ್ಕೆ ಇಳಿದಿದೆ.
ದೇಶದಲ್ಲಿ ೬,೬೮,೨೨೦, ಸಕ್ರಿಯ ಕೊರೊನಾವೈರಸ್ ಸೋಂಕಿನ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ ೨೬.೪೫ ರಷ್ಟಿದ್ದರೆ, ಚೇತರಿಕೆ ಪ್ರಕರಣಗಳ ಸಂಖ್ಯೆ ೧೮,೦೮,೯೩೬ಕ್ಕೆ ಏರಿದೆ.
ಭಾರತದ ಕೋವಿಡ್-೧೯ ಸಂಖ್ಯೆಯು ಆಗಸ್ಟ್ ೭ ರಂದು ೨೦ ಲಕ್ಷ ದಾಟಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್) ಪ್ರಕಾರ, ಆಗಸ್ಟ್ ೧೪ ರವರೆಗೆ ಒಟ್ಟು ೨,೮೫,೬೩,೦೯೫ ಮಾದರಿಗಳನ್ನು ಪರೀಕ್ಷಿಸಲಾಗಿದೆ, ಅದರಲ್ಲಿ ೮,೬೮,೬೭೯ ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಗಿದೆ, ಇದು ಈವರೆಗಿನ ಒಂದು ದಿನದ ಪರೀಕ್ಷೆಗಳಲ್ಲಿ ಅತೀ ಹೆಚ್ಚು.
No comments:
Post a Comment