My Blog List

Tuesday, August 18, 2020

ಸುಪ್ರೀಂ ನಿರಾಳತೆ ಬಳಿಕ ರಾಹುಲ್‌ಗೆ ಬಿಜೆಪಿ ತರಾಟೆ

 ಸುಪ್ರೀಂ ನಿರಾಳತೆ ಬಳಿಕ ರಾಹುಲ್ಗೆ ಬಿಜೆಪಿ ತರಾಟೆ

ನವದೆಹಲಿ: ’ಪಿಎಂ ಕೇರ್ಸ್ ನಿಧಿಗೆ ಜಮೆಯಾದ ಎಲ್ಲ ಹಣವನ್ನೂ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸಬೇಕು ಎಂಬುದಾಗಿ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ 2020 ಆಗಸ್ಟ್ 18ರ ಮಂಗಳವಾರ ತಳ್ಳಿಹಾಕಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಿಜೆಪಿಕೋವಿಡ್-೧೯ ವಿರೋಧಿ ಸಮರವನ್ನು ದುರ್ಬಲಗೊಳಿಸುವ ಒಂದೂ ಅವಕಾಶವನ್ನು ರಾಹುಲ್ ಬಿಟ್ಟಿಲ್ಲ ಎಂದು ಹೇಳಿತು.

"ರಾಹುಲ್ ಗಾಂಧಿಯವರು ಪಿಎಂ ಕೇರ್ಸ್ ನಿಧಿಯನ್ನು ಪ್ರಶ್ನಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಅವರ ಎಲ್ಲಾ ವಾದಗಳನ್ನು ಹೊಡೆದುರುಳಿಸಿದೆ. ಪಿಎಂ ಕೇರ್ಸ್ ಕೋವಿಡ್ ತರಹದ ತುರ್ತು ಪರಿಸ್ಥಿತಿU ಸಲುವಾಗಿ ನೋಂದಣಿಯಾಗಿರುವ ಸಾರ್ವಜನಿಕ ಟ್ರಸ್ಟ್ ಆಗಿದೆ ಎಂದು ಪ್ರಸಾದ್ ಹೇಳಿದರು.

ವೈರಸ್ ವಿರುದ್ಧದ ಹೋರಾಟದಲ್ಲಿ ರಾಷ್ಟ್ರದ ಸಂಕಲ್ಪವನ್ನು ದುರ್ಬಲಗೊಳಿಸುವ ಒಂದೂ ಅವಕಾಶವನ್ನು ರಾಹುಲ್ ಗಾಂಧಿ ಎಂದಿಗೂ ಬಿಟ್ಟಿಲ್ಲ ಎಂದು ನುಡಿದರು.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ ) ಅಧಿಕಾರದಲ್ಲಿದ್ದ ಸಮಯದಲ್ಲಿ, ಮನಮೋಹನ್ ಸಿಂಗ್ ಯುಗದಲ್ಲಿ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಹಣವನ್ನು ಬೇರೆ ಕಡೆಗೆ ತಿರುಗಿಸಿ ರಾಜೀವಗಾಂಧಿ ಪ್ರತಿಷ್ಠಾನಕ್ಕೆ ನೀಡಲಾಗಿತ್ತು ಎಂದು ಆಪಾದಿಸಿದ್ದ ಬಿಜೆಪಿ ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಬಿಡುಗಡೆ ಮಾಡಿತ್ತು. ಸೋನಿಯಾ ಗಾಂಧಿ ಅವರು ಪ್ರತಿಷ್ಠಾನದ ಮುಖ್ಯಸ್ಥರಾಗಿದ್ದು, ಆಡಳಿತ ಮಂಡಳಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರೂ ಸೇರಿದ್ದರು.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಒಂದು ಪ್ರಾಮಾಣಿಕ ಸರ್ಕಾರವಾಗಿದೆ ಎಂದೂ ಪ್ರಸಾದ್ ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಮಂಗಳವಾರ ಸುಪ್ರೀಂ ಕೋರ್ಟ್ ಪಿಎಂ ಕೇರ್ಸ್ ನಿಧಿಯ ಹಣವನ್ನು ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಗೆ (ಎನ್ಡಿಆರ್ಎಫ್) ವರ್ಗಾಯಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಇವೆರಡೂ ಸಂಪೂರ್ಣ ವಿಭಿನ್ನ ದೇಣಿಗೆಗಳು ಎಂದು ಸುಪ್ರೀಂಕೋಟ್ ಹೇಳಿತು.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸುಪ್ರೀಂಕೋರ್ಟ್ ನಿರ್ಧಾರವನ್ನು, ಗಾಂಧಿಯವರ "ಅಸಹ್ಯಕರ ವಿನ್ಯಾಸಗಳಿಗೆ ದೊಡ್ಡ ಹೊಡೆತ" ಎಂದು ಬಣ್ಣಿಸಿದರು.

"ಪಿಎಂ ಕೇರ್ಸ್ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ರಾಹುಲ್ ಗಾಂಧಿ ಮತ್ತು ಅವರಬಾಡಿಗೆ ಕಾರ್ಯಕರ್ತರ ಅಸಹ್ಯ ವಿನ್ಯಾಸಗಳಿಗೆ ಭಾರಿ ಹೊಡೆತವಾಗಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಉದ್ದೇಶ ಮತ್ತು ದುರುದ್ದೇಶಪೂರಿತ ಪ್ರಯತ್ನಗಳ ಹೊರತಾಗಿಯೂ ಸತ್ಯವು ಝಗಮಗಿಸುತ್ತದೆ ಎಂಬುದನ್ನು ಇದು ತೋರಿಸಿದೆ ಎಂದು ನಡ್ಡಾ ಟ್ವೀಟ್ ಮಾಡಿದರು.

ಪಿಎಂ ಕೇರ್ಸ್ ನಿಧಿಗೆ "ಅಗಾಧವಾಗಿ" ಕೊಡುಗೆ ನೀಡಿದ ಸಾಮಾನ್ಯ ಜನರು ರಾಹುಲ್ ಗಾಂಧಿಯವರ "ಬಾಡಿಗೆ ಕಾರ್ಯಕರ್ತರನ್ನು ಪದೇ ಪದೇ ತಳ್ಳಿಹಾಕಿದ್ದಾರೆ ಎಂದು ಅವರು ಹೇಳಿದರು.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಪಿಎಂ ಕೇರ್ಸ್ ನಿಧಿಯು, ಕೋವಿಡ್ -೧೯ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡುತ್ತಿದೆ ಮತ್ತು ಬಜೆಟ್ ಹಂಚಿಕೆಗಳು ಸಾರ್ವಜನಿಕ ಟ್ರಸ್ಟ್ ರೂಪದಲ್ಲಿವೆ ಎಂದು ಅಭಿಪ್ರಾಯಪಟ್ಟಿತು,

ಮತ್ತೊಂದೆಡೆ, ಎನ್ಡಿಆರ್ಎಫ್ ಶಾಸನಬದ್ಧವಾಗಿ ರಚಿಸಲಾದ ನಿಧಿಯಾಗಿದ್ದು, ಇದು ಪಿಎಂ ಕೇರ್ಸ್ ನಿಧಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಎರಡರಲ್ಲಿ ಜನರು ದೇಣಿಗೆ ನೀಡಲು ಸ್ವತಂತ್ರರು, ಮತ್ತು ಸರ್ಕಾರವು ತನ್ನ ವಿವೇಚನೆಯಿಂದ ಪಿಎಂ ಕೇರ್ಸ್ನಿಂದ ಎನ್ಡಿಆರ್ಎಫ್ಗೆ ಹಣವನ್ನು ವರ್ಗಾಯಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಜನರನ್ನು ದಾರಿ ತಪ್ಪಿಸಿದ್ದಕ್ಕಾಗಿ ಗಾಂಧಿ ಕುಟುಂಬ ರಾಷ್ಟ್ರದ ಕ್ಷಮೆಯಾಚಿಸುತ್ತದೆಯೇ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೇಳಿದರು.

"ಸುಪ್ರೀಂ ಕೋರ್ಟ್ ಪಿಎಂ ಕೇರ್ಸ್ ನಿಧಿಯ ಸಿಂಧುತ್ವವನ್ನು ಎತ್ತಿಹಿಡಿದಿರುವುದು ಗಾಂಧಿ ಕುಟುಂಬದ ದುಷ್ಕೃತ್ಯದ ವಿನ್ಯಾಸಗಳಿಗೆ ಮತ್ತೊಂದು ಪೆಟ್ಟು. ಜನರನ್ನು ದಾರಿತಪ್ಪಿಸಿದ್ದಕ್ಕಾಗಿ ಗಾಂಧಿ ಕುಡಿ ರಾಷ್ಟ್ರದ ಕ್ಷಮೆಯಾಚಿಸುವುದೇ? ಎಂದು ಜೋಶಿ ಟ್ವೀಟ್ ಮೂಲಕ ಪ್ರಶ್ನಿಸಿದರು.

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸರ್ಜೆವಾಲಾ, "ಸುಪ್ರೀಂಕೋರ್ಟ್ ತೀರ್ಪು ಜನರಿಗೆ ಸರ್ಕಾರದ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಒಂದು ದೊಡ್ಡ ಹೊಡೆತವಾಗಿದೆ. ಇದು ಮತದಾರರಿಗೆ ಆಡಳಿತಗಾರರ ಜವಾಬ್ದಾರಿ ಮತ್ತು ಉತ್ತರದಾಯಿತ್ವದ ವಿಚಾರದಲ್ಲಿ ಹಾಗೂ ಆಡಳಿತಗಾರರು ದೊರೆಗಳಲ್ಲ, ಜನರ ಸೇವಕರು ಎಂಬುದಾಗಿ ನೆನಪಿಸುವ ವಿಚಾರದಲ್ಲಿ ದುಃಖದ ದಿನವಾಗಿದೆ ಎಂದು ಹೇಳಿದರು.

ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ ಎಂದು ಸುಪ್ರೀಂಕೋರ್ಟ್ ಸೂಕ್ಷ್ಮವಾಗಿ ನಂಬಿತ್ತು. ಈದಿನ  ನ್ಯಾಯಾಲಯವು ಸಂಪ್ರದಾಯದಿಂದ ನಿರ್ಗಮಿಸುವಾಗ, ಸಾರ್ವಜನಿಕರ ಹಣವನ್ನು ಕೋರುವ ಅದರೆ ತನ್ನದೇ ಆದ ಅಪಾರದರ್ಶಕ ನಿಯಮಗಳನ್ನು ಹೊಂದಿರುವ ಪಿಎಂ ಕೇರ್ಸ್ ನಿಧಿ ಕುರಿತು ಉತ್ತರವನ್ನು ಆಗ್ರಹಿಸಲು ಅವಕಾಶವನ್ನು ನೀಡಿತು  ಎಂದು ಅವರು ಇನ್ನೊಂದು ಟ್ವೀಟಿನಲ್ಲಿ ಬರೆದರು.

ಮಾರ್ಚ್ ತಿಂಗಳಲ್ಲಿ ಕೇಂದ್ರವು ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (ಪಿಎಂ ಕೇರ್ಸ್) ನಿಧಿಯನ್ನು ಸ್ಥಾಪಿಸಿತ್ತು. ಪ್ರಸ್ತುತ ಎದುರಿಸುತ್ತಿರುವ ಕೋವಿಡ್ -೧೯ರಂತಹ  ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮತ್ತು ಸಂತ್ರಸ್ಥರಿಗೆ ಪರಿಹಾರವನ್ನು ಒದಗಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಇದನ್ನು ಸ್ಥಾಪಿಸಲಾಗಿತ್ತು.

No comments:

Advertisement