My Blog List

Saturday, October 3, 2020

ಸುಪ್ರೀಂಕೋರ್ಟಿಗೆ ಕೇಂದ್ರ ಅಫಿಡವಿಟ್: 2 ಕೋಟಿ ರೂ.ವರೆಗಿನ ಸಾಲಗಳ ಚಕ್ರಬಡ್ಡಿ ಮನ್ನಾ

 ಸುಪ್ರೀಂಕೋರ್ಟಿಗೆ ಕೇಂದ್ರ ಅಫಿಡವಿಟ್: 2 ಕೋಟಿ ರೂ.ವರೆಗಿನ ಸಾಲಗಳ ಚಕ್ರಬಡ್ಡಿ ಮನ್ನಾ

ನವದೆಹಲಿ / ಮುಂಬೈ: ಕೊರೋನಾವೈರಸ್ ಪ್ರಸರಣ ತಡೆಗಾಗಿ ಲಾಕ್ ಡೌನ್ ಹೇರಿದ ಅವಧಿಯಲ್ಲಿ ಘೋಷಿಸಲಾಗಿದ್ದ ಇಎಂಐ ಮುಂದೂಡಿಕೆ ಕ್ರಮದ ಅಡಿಯಲ್ಲಿ, ಆಗಸ್ಟ್ ಅಂತ್ಯದವರೆಗಿನ ಆರು ತಿಂಗಳಗಳಲ್ಲಿ ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ 2020 ಅಕ್ಟೋಬರ್ 03ರ ಶನಿವಾರ ಹೇಳಿತು.

ಆದರೆ ಇದು ಕೊರೋನವೈರಸ್ ವಿರೋಧೀ ಹೋರಾಟದಬದ್ಧತೆಗಳ ಮೇಲೆ ಒತ್ತಡದ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸಾಲದ ಬಡ್ಡಿಯ ಮೇಲಿನ ಬಡ್ಡಿ (ಚಕ್ರಬಡ್ಡಿ) ಮನ್ನಾ ಮಾಡುವುದಾಗಿ ನೀಡಿದ ಹೇಳಿಕೆಯನ್ನು ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ಚಿಲ್ಲರೆ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಗಳು ಸ್ವಾಗತಿಸಿದರು.

ಬಡ್ಡಿಗೆ ಬಡ್ಡಿ ಪಾವತಿಸುವ ವೆಚ್ಚವನ್ನು ಭರಿಸುವ ಕ್ರಮವು ಸಾಂಕ್ರಾಮಿಕ ನಿರ್ವಹಣೆಗೆ ಸಂಬಂಧಿಸಿದ ನೇರ ವೆಚ್ಚಗಳನ್ನು ಪೂರೈಕೆ, ಜೀವನೋಪಾಯದ ನಷ್ಟದಿಂದ ಉಂಟಾಗುವ ಸಾಮಾನ್ಯ ಮನುಷ್ಯನ ಸಮಸ್ಯೆಗಳು ಹಾಗೂ ಸಾಮಾನ್ಯ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಸೇರಿದಂತೆ ರಾಷ್ಟ್ರವು ಎದುರಿಸುತ್ತಿರುವ ಹಲವಾರು ಇತರ ಬದ್ಧತೆಗಳ ಮೇಲೆ ಸ್ವಾಭಾವಿಕವಾಗಿ ಪರಿಣಾಮ ಬೀರುತ್ತದೆ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಇದು ಎಲ್ಲಾ ವರ್ಗದ ಸಾಲಗಳಿಗೆ ವಿಧಿಸುವ ಬಡ್ಡಿಯನ್ನು ಮನ್ನಾ ಮಾಡುವುದಿಲ್ಲ, ಏಕೆಂದರೆ ಅದರಿಂದ  ಬ್ಯಾಂಕುಗಳು ಬದುಕುಳಿಯುವುದೇ ಕಷ್ಟವಾಗುತ್ತಿತ್ತು ಎಂದು ಪ್ರಮಾಣಪತ್ರ ಹೇಳಿದೆ.

ಅಭೂತಪೂರ್ವ ಪರಿಸ್ಥಿತಿಗಳಿಂದಾಗಿ "ಬಡ್ಡಿ ಮನ್ನಾ ಮಾಡುವ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳುವುದು ಒಂದೇ ಪರಿಹಾರ ಎಂದು ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ತಿಳಿಸಿದೆ ಮತ್ತು ನಿರ್ಧಾರಕ್ಕೆ ಸಂಸತ್ತಿನ ಅನುಮೋದನೆಯನ್ನು ಕೋರುವುದಾಗಿ ಹೇಳಿದೆ.

ಕ್ರಮವು ತಮ್ಮ ಬಾಕಿಗಳನ್ನು ತೆರವುಗೊಳಿಸಿದವರಿಗೂ ಅನ್ವಯಿಸಲಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ), ಶಿಕ್ಷಣ ಸಾಲ, ವಸತಿ ಸಾಲ, ಗ್ರಾಹಕ ಬಾಳಿಕೆ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ವೈಯಕ್ತಿಕ ಮತ್ತು ವೃತ್ತಿಪರ ಸಾಲಗಳು ಮತ್ತು ಬಳಕೆ ಸಾಲಗಳು ಸೇರಿದಂತೆ ಎಂಟು ಕ್ಷೇತ್ರಗಳಲ್ಲಿ ಚಕ್ರಬಡ್ಡಿಯನ್ನು ರದ್ದುಗೊಳಿಸಲಾಗುತ್ತದೆ.

ಖಚಿತವಾಗಿ ಹೇಳುವುದಾದರೆ, ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿಲ್ಲ. ಎಲ್ಲಾ ವರ್ಗದ ಸಾಲಗಳಿಗೆ ಬಡ್ಡಿಯನ್ನು ಮನ್ನಾ ಮಾಡಿದರೆ ಅದು ಬ್ಯಾಂಕುU ಮೇಲೆ ಟ್ರಿಲಿಯನ್ ರೂಪಾಯಿ ಹೊರೆಗೆ ಕಾರಣವಾಗುತ್ತದೆ ಎಂದು ಹಣಕಾಸು ಸಚಿವಾಲಯ ಶನಿವಾರ ತನ್ನ ಪ್ರಮಾಣಪತ್ರದಲ್ಲಿ ಹೇಳಿದೆ.

"ಬ್ಯಾಂಕುಗಳು ಹೊರೆಯನ್ನು ಹೊರಲು ಹೋದರೆ, ಅದು ಅವುಗಳ ನಿವ್ವಳ ಮೌಲ್ಯದ ಒಂದು ಪ್ರಮುಖ ಭಾಗವನ್ನು ಅಳಿಸಿಹಾಕುತ್ತದೆ, ಹೆಚ್ಚಿನ ಬ್ಯಾಂಕುಗಳನ್ನು ಅಸಮರ್ಥವಾಗಿಸುತ್ತದೆ ಮತ್ತು ಅವುಗಳ ಉಳಿವಿನ ಬಗ್ಗೆ ಬಹಳ ಗಂಭೀರವಾದ ಪ್ರಶ್ನಾರ್ಥಕ ಚಿಹ್ನೆಯನ್ನು ಉಂಟುಮಾಡುತ್ತದೆ ಎಂದು ಸರ್ಕಾರ ಹೇಳಿದೆ.

ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾವನ್ನು ಬೆಂಬಲಿಸಲು ಹೆಚ್ಚುವರಿ ನಿಧಿಗಳಿಗಾಗಿ ಹಣಕಾಸು ಸಚಿವಾಲಯವು ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಮನ್ನಾ ಸರ್ಕಾರದ ಹಣಕಾಸಿನ ಮೇಲೆ ತಕ್ಷಣದ ಪರಿಣಾಮ ಬೀರುವುದೇ ಎಂಬುದು ಗೊತ್ತಾಗಿಲ್ಲ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ ೨೨ ರಂದು ಸಾಲಗಳ ಮೇಲಿನ ಇಎಂಐ ಪಾವತಿ ಸ್ಥಗಿತವನ್ನು ಆಗಸ್ಟ್ ೩೧ ರವರೆಗೆ ವಿಸ್ತರಿಸಿತ್ತು. ಮಾರ್ಚ್ ತಿಂಗಳಲ್ಲಿ ಮೂರು ತಿಂಗಳ ಅವಧಿಗೆ ಇಎಂಐ ಪಾವತಿಯನ್ನು ಮುಂದೂಡಿದ ರಿಸರ್ವ್ ಬ್ಯಾಂಕ್, ಮಾರ್ಚ್ ೧ರಿಂದ ಮೇ ೩೧ರ ನಡುವಣ ಅವಧಿಯಲ್ಲಿ ಎಲ್ಲ ಸಾಲಗಳ ಇಎಂಐ ಪಾವತಿಯನ್ನು ಮುಂದೂಡಲು ಅನುಮತಿ ನೀಡಿತ್ತು. ಅವಧಿಯಲ್ಲಿ ಸಾಲ ಪಾವತಿ ಮಾಡದವರನ್ನು ಸುಸ್ತಿದಾರರಾಗಿ ಪರಿಗಣಿಸದಂತೆ ಆರ್‌ಬಿಐ ಸೂಚಿಸಿತ್ತು.

ಸೆಪ್ಟೆಂಬರ್ ೨೮ ರಂದು, ಸುಪ್ರೀಂ ಕೋರ್ಟ್ ಸಾಲ ಸ್ಥಗಿತ ಪ್ರಕರಣವನ್ನು ಅಕ್ಟೋಬರ್ ರವರೆಗೆ ಮುಂದೂಡಿ, ಕೇಂದ್ರ, ಆರ್‌ಬಿಐ ಮತ್ತು ಬ್ಯಾಂಕುಗಳು ಒಟ್ಟಾಗಿ ಯೋಚಿಸಿ ಕ್ರಮ ಕೈಗೊಳ್ಳಲು ಹೆಚ್ಚಿನ ಕಾಲಾವಕಾಶ ನೀಡಿತ್ತು.

ಆಗ್ರಾ ಮೂಲದ ಸಾಲಗಾರರಾದ ಅರ್ಜಿದಾರ ಗಜೇಂದ್ರ ಶರ್ಮಾ ಅವರು "ತೀವ್ರ ಸಂಕಷ್ಟ" ಎದುರಿಸುತ್ತಿರುವ ಕಾರಣ ಸಾಲ ಸ್ಥಗಿತದ ಸಮಯದಲ್ಲಿ ಯಾವುದೇ ಬಡ್ಡಿ ವಿಧಿಸಬಾರದು ಎಂದು ಮನವಿ ಮಾಡಿದ್ದರು.

ಸಾಂಕ್ರಾಮಿಕ ರೋಗದಿಂದಾಗಿ ತೊಂದರೆಗೆ ಒಳಗಾಗಿರುವ ಚಿಲ್ಲರೆ ಮತ್ತು ಸಣ್ಣ ಉದ್ಯಮಗಳಿಗೆ ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಕ್ರಮವು ಸಾಕಷ್ಟು ಅನುಕೂಲವನ್ನು ಒದಗಿಸಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಕೈಗೊಳ್ಳಬೇಕಾಗಿದೆ. ಆದರೆ ಭಾರವನ್ನು ಹೊರಲು ನಿರ್ಧರಿಸಿರುವ ಸರ್ಕಾರದ ಕ್ರಮವು ಸಾಲಸ್ಥಗಿತ ಕ್ರಮದ ಅನುಕೂಲ ಪಡೆಯದ ಸಾಲಗಾರರಿಗೂ ಲಭಿಸಲಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯ ಆರು ತಿಂಗಳಲ್ಲಿ ಇಎಂಐ ಮುಂದೂಡಿಕೆ ಅವಕಾಶ ಪಡೆಯದ ಹಾಗೂ ಮರುಪಾವತಿ ಮಾಡದ ಎಲ್ಲ ಸಾಲಗಾರರಿಗೂ ಇದು ಅನ್ವಯಿಸಲಿದೆ ಎಂದು ಬ್ಯಾಂಕರುಗಳು ಗಮನ ಸೆಳೆದಿದ್ದಾರೆ.

ಮುಂದಿನ ಸೋಮವಾರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲಿದೆ.

" ಪ್ರಯತ್ನವು, ಸರ್ಕಾರವು ಹಿಂದೆ ಘೋಷಿಸಿದ ಗರೀಬ ಕಲ್ಯಾಣ ಮತ್ತು ಆತ್ಮ ನಿರ್ಭರ ಪ್ಯಾಕೇಜುಗಳ ಮೂಲಕ ಎಂಎಸ್‌ಎಂಇಗಳಿಗೆ ನೀಡಿದ ರೂ. . ಟ್ರಿಲಿಯನ್, ಗೃಹ ಸಾಲಕ್ಕಾಗಿ ನೀಡಿದ ರೂ. ೭೦,೦೦೦ ಕೋಟಿ ಕೊಡುಗೆಯ ಬೆಂಬಲವನ್ನು ಮೀರಿದೆ ಎಂದು ಸರ್ಕಾರ ಪ್ರಮಾಣಪತ್ರದಲ್ಲಿ ಹೇಳಿದೆ.

ಕೋವಿಡ್ -೧೯ ಬಿಕ್ಕಟ್ಟು ಸಾಲಗಾರರನ್ನು ಒತ್ತಡಕ್ಕೆ ಸಿಲುಕಿಸಿದ್ದರ ಜೊತೆಗೆ ನಿಷ್ಕ್ರಿಯ ಆಸ್ತಿಗಳ ಪ್ರಮಾಣ ಹೆಚ್ಚಬಹುದಾಗ ಬೆದರಿಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಭದ್ರತೆಗಳ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ರೂ ೨೦,೦೦೦ ಕೋಟಿ ಬಂಡವಾಳ ಒದಗಿಸುವ ಕ್ರಮಕ್ಕೆ ಸಂಸತ್ತು ಕಳೆದ ತಿಂಗಳು ಅನುಮೋದನೆ ನೀಡಿತ್ತು.

ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ ಸೋಮವಾರ ಹೆಚ್ಚಿನ ಸ್ಪಷ್ಟತೆ ಬರಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಅಂತಿಮ ತೀರ್ಪು ಹೊರಬಂದ ನಂತರ ಮನ್ನಾ ಲಾಭವನ್ನು ಸಾಲಗಾರರಿಗೆ ನೀಡುವ ಬಗೆಗಿನ ವಿಧಿ ವಿಧಾನಗಳನ್ನು ನಿರ್ಧರಿಸಲಾಗುತ್ತದೆ ಎಂದು ಅವರು ನುಡಿದರು.

No comments:

Advertisement