Friday, October 2, 2020

ಭಾರತ: ಕೋವಿಡ್ ಸಾವು ಲಕ್ಷದ ಸಮೀಪ

 ಭಾರತ: ಕೋವಿಡ್ ಸಾವು ಲಕ್ಷದ ಸಮೀಪ

ನವದೆಹಲಿ: ಭಾರತದಲ್ಲಿ ೯೯,೭೭೩ ಸಾವುಗಳು ಸೇರಿದಂತೆ ಕೊರೋನಾವೈರಸ್ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 2020 ಅಕ್ಟೋಬರ್ 02ರ ಶುಕ್ರವಾರ ೬೩,೯೪,೦೬೮ಕ್ಕೆ ಏರಿದೆ. ಆದರೆ ಚೇತರಿಕೆ ಪ್ರಮಾಣವೂ ಹೆಚ್ಚುತ್ತಿದ್ದು ಶೇಕಡಾ ೮೩.೭ಕ್ಕೆ ಏರಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಸೋಂಕು ವೇಗವಾಗಿ ಹೆಚ್ಚುತ್ತಿದೆ.

ಜಾಗತಿಕವಾಗಿ, ಕೋವಿಡ್-೧೯ ಪ್ರಕರಣಗಳು .೪೧ ಕೋಟಿಗೆ ಏರಿದ್ದು, ಈವರೆಗೆ ೧೦.೧೫ ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

No comments:

Advertisement