Wednesday, October 7, 2020

ಭಾರತದಲ್ಲಿ 72049 ಹೊಸ ಪ್ರಕರಣ, ಒಟ್ಟು ಸಂಖ್ಯೆ 67 ಲಕ್ಷ

 ಭಾರತದಲ್ಲಿ 72049 ಹೊಸ ಪ್ರಕರಣ, ಒಟ್ಟು ಸಂಖ್ಯೆ 67 ಲಕ್ಷ

ನವದೆಹಲಿ: ಭಾರತದಲ್ಲಿ ಹೊಸದಾಗಿ ಒಂದೇ ದಿನ ೭೨,೦೪೯ ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಕೋವಿಡ್ -೧೯ ಪ್ರಕರಣ ಸಂಖ್ಯೆ 2020 ಅಕ್ಟೋಬರ್ 07 ಬುಧವಾರ ೬೭.೫೭ ಲಕ್ಷಕ್ಕೆ ಏರಿಕೆಯಾಯಿತು.

ಒಟ್ಟು ೫೭,೪೪,೬೯೩ ಜನರು ರೋಗದಿಂದ ಗುಣಮುಖರಾಗಿ ಈವರೆಗೆ ಚೇತರಿಸಿಕೊಂಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇಕಡಾ ೮೫.೦೨ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿತು.

ಒಟ್ಟು ಕೊರೋನವೈರಸ್ ಪ್ರಕರಣಗಳು ೬೭,೫೭,೧೩೧ ಕ್ಕೆ ಏರಿದರೆ, ಸಾವಿನ ಸಂಖ್ಯೆ ,೦೪,೫೫೫ ಕ್ಕೆ ಏರಿದೆ, ಕೊರೋನಾವೈರಸ್ ದೇಶದಲ್ಲಿ ೨೪ ಗಂಟೆಗಳ ಅವಧಿಯಲ್ಲಿ ೯೮೬ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಬೆಳಗ್ಗೆ ಗಂಟೆಗೆ ನವೀಕರಿಸಿದ ಮಾಹಿತಿ ತೋರಿಸಿದೆ.

ದೇಶದಲಿ ಕೋವಿಡ್-೧೯ ಪ್ರಕರಣಗಳ ಸಾವಿನ ಪ್ರಮಾಣವು ಇನ್ನೂ ಕಡಿಮೆಯಾಗಿದ್ದು ಶೇಕಡಾ .೫೫ ಕ್ಕೆ ಇಳಿದಿದೆ.

ದೇಶದಲ್ಲಿ ಪ್ರಸ್ತುತ ,೦೭,೮೮೩ ಕೊರೋನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ ೧೩.೪೪ ರಷ್ಟಿದೆ ಎಂದು ಮಾಹಿತಿ ತಿಳಿಸಿದೆ.

ಐಸಿಎಂಆರ್ ಪ್ರಕಾರ, ಅಕ್ಟೋಬರ್ ರವರೆಗೆ ಒಟ್ಟು ,೨೨,೭೧,೬೫೪ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೧೧,೯೯,೮೫೭ ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.

No comments:

Advertisement