ಭಾರತದ ಸಾರ್ವಭೌಮತ್ವ ಗೌರವಿಸಿ: ಟ್ವಿಟ್ಟರಿಗೆ ತಾಕೀತು
ನವದೆಹಲಿ: ಲೆಹ್ನ್ನು ಚೀನಾದ ಭಾಗವಾಗಿ ತೋರಿಸಿದ ಸಾಮಾಜಿಕ ಮಾಧ್ಯಮ ಟ್ವಿಟ್ಟರನ್ನು ಭಾರತ ಸರ್ಕಾರವು ತರಾಟೆಗೆ ತೆಗೆದುಕೊಂಡಿದ್ದು, ಟ್ವಿಟ್ಟರ್ ಸಿಇಒ ಜಾಕ್ ಡಾರ್ಸಿಗೆ ಖಡಕ್ ಪತ್ರ ಬರೆದು ’ಟ್ವಿಟ್ಟರ್ ವರ್ತನೆಯು ಅದರ ವಿಶ್ವಾಸಾರ್ಹತೆ ಮತ್ತು ತಟಸ್ಥತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಹೇಳಿದೆ.
"ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಸಾಹ್ನಿ ಅವರು ಜಾಕ್ ಡಾರ್ಸಿ ಅವರಿಗೆ ಬರೆದ ಪತ್ರದಲ್ಲಿ ಸರ್ಕಾರದ ಭ್ರಮನಿರಸನವನ್ನು ತಿಳಿಸಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಅಕ್ಟೋಬರ್ ೧೮ ರಂದು ಹಿರಿಯ ಪತ್ರಕರ್ತರೊಬ್ಬರು ಲೆಹ್ನಿಂದ ಟ್ವಿಟರ್ ಮೂಲಕ ನೇರ ಪ್ರಕಟಣೆ ಮಾಡುತ್ತಿದ್ದಾಗ ತೋರಿಸಲಾಗುತ್ತಿದ್ದ ಸ್ಥಳ ಸೆಟ್ಟಿಂಗ್ಗಳನ್ನು ನಮ್ಮ ಗಮನಕ್ಕೆ ತರಲಾಗಿದೆ.... ಅದು [ಲೇಹ್] ಚೀನಾದಲ್ಲಿದೆ ಎಂದು ಸೆಟ್ಟಿಂಗ್ ತೋರಿಸಿದೆ ಎಂಬುದನ್ನು ನಾವು ಗಮನಿಸಿದ್ದೇವೆ.’ ಎಂದು ಅಧಿಕಾರಿ ಟ್ವಿಟ್ಟರಿಗೆ ತಿಳಿಸಿದ್ದಾರೆ.
’ಟ್ವಿಟ್ಟರ್ ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು. ಇದು ಸ್ವೀಕಾರಾರ್ಹವಲ್ಲ ಮತ್ತು ಟ್ವಿಟ್ಟರ್ ಇದಕ್ಕೆ ವಿವರಣೆ ನೀಡಬೇಕು. ಮತ್ತು ಮುಂದೆಂದೂ ಇಂತಹ ಘಟನೆ ಸಂಭವಿಸುವುದಿಲ್ಲ ಎಂದು ಅವರು ಖಚಿತಪಡಿಸಿಕೊಳ್ಳಬೇಕು’ ಎಂದು ಅಧಿಕಾರಿ ತಿಳಿಸಿದ್ದಾರೆ.
ಅತ್ಯಂತ ಹೆಚ್ಚು ಟ್ವಿಟ್ಟರ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು’ ಎಂದೂ ಅಧಿಕಾರಿ ಪತ್ರದಲ್ಲಿ ನೆನಪಿಸಿದ್ದಾರೆ.
‘ನೀವು ಭಾರತದಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ದೇಶದ ಸಾರ್ವಭೌಮತ್ವವನ್ನು ಗೌರವಿಸಬೇಕು’ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.
ಟ್ವಿಟ್ಟರ್ ವಕ್ತಾರರು ಕಂಪೆನಿಯು ಸರ್ಕಾರದೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ ಮತ್ತು ಅದು ಒಳಗೊಂಡಿರುವ ಸೂಕ್ಷ್ಮತೆಗಳನ್ನು ಗೌರವಿಸುತ್ತದೆ ಎಂದು ಹೇಳಿದರು. ಟ್ವಿಟರ್ ಈ ಪತ್ರವನ್ನು ಒಪ್ಪಿಕೊಂಡಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಪತ್ರಕರ್ತ ನಿತಿನ್ ಗೋಖಲೆ ಅವರು ಲಡಾಖ್ನಲ್ಲಿ ಹುತಾತ್ಮರಾದ ಸೈನಿಕರ ಯುದ್ಧ ಸ್ಮಾರಕವಾದ ಲೆಹ್ಸ್ ಹಾಲ್ ಆಫ್ ಫೇಮ್ನಿಂದ ನೇರ ಟ್ವೀಟ್ ಪ್ರಕಟಿಸಿದ್ದರು, ಟ್ವಿಟರ್ನ ಜಿಯೋ-ಟ್ಯಾಗಿಂಗ್ ಚೀನಾದ ಭಾಗವಾಗಿ ಅವರು ಇದ್ದ ಸ್ಥಳವನ್ನು ತೋರಿಸಿತ್ತು.
"ಟ್ವಿಟ್ಟರ್ ಜನರೇ, ನಾನು ಹಾಲ್ ಆಫ್ ಫೇಮ್ನಿಂದ ಲೈವ್ ಮಾಡಿದ್ದೇನೆ. ಹಾಲ್ ಆಫ್ ಫೇಮ್ನ್ನು ಲೋಕೇಶನ್ ಆಗಿ ನೀಡಿ ಮತ್ತು ಅದು ಏನು ಹೇಳುತ್ತಿದೆ ಎಂದು ಊಹಿಸಿ..ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ! ನೀವೇನು ದಾಳಗಳಾಗಿದ್ದೀರಾ?’ ಎಂದು ಗೋಖಲೆ ಟ್ವೀಟ್ ಮಾಡಿದ್ದಾರೆ.
“ಟ್ವೀಪಲ್ ಪಿಎಲ್ [ದಯವಿಟ್ಟು] ಹಾಲ್ ಆಫ್ ಫೇಮ್ ಲೇಹ್ನ್ನು ನೇರ ಪ್ರಸಾರಕ್ಕಾಗಿ ನಿಮ್ಮ ಸ್ಥಳವಾಗಿ ಇರಿಸಿ ಮತ್ತು ಏನಾಗುತ್ತಿದೆ ಎಂಬುದನ್ನು ನೋಡಿ. ಇದು ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂದು ತೋರಿಸುತ್ತದೆ. ನಾನು ಅದನ್ನು ಮತ್ತೆ ಪರೀಕ್ಷಿಸಿದೆ. ಇದು ಅತಿರೇಕ..[ದಯವಿಟ್ಟು] ದೂರುಗಳ ಪ್ರವಾಹವನ್ನು ಟ್ವಿಟ್ಟರಿನತ್ತ ಹರಿಸಿ. ಜಿಒಐ (ಭಾರತ ಸರ್ಕಾರ) ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದೂ ಗೋಖಲೆ ಟ್ವೀಟ್ ಮಾಡಿದ್ದಾರೆ.
ಲಡಾಖ್ನಲ್ಲಿ ಭಾರತ ಮತ್ತು ಚೀನಾ ನಡುವಣ ಗಡಿ ಉದ್ವಿಗ್ನತೆಯ ಮಧ್ಯೆ ಈ ವಿವಾದ ಉಂಟಾಗಿದೆ.
No comments:
Post a Comment