Thursday, October 22, 2020

ಕೊರೋನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರದಿಂದ ೫೦,೦೦೦ ಕೋಟಿ ರೂ ಮೀಸಲು

 ಕೊರೋನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರದಿಂದ ೫೦,೦೦೦ ಕೋಟಿ ರೂ ಮೀಸಲು

ನವದೆಹಲಿ: ಚೀನಾದ ನಂತರ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೊರೋನಾವೈರಸ್ ವಿರೋಧಿ ಲಸಿಕೆ ನೀಡಲು ಭಾರತದ ಸರ್ಕಾರ ಸುಮಾರು ೫೦೦ ಬಿಲಿಯನ್ (೫೦,೦೦೦ ಕೋಟಿ) ರೂಪಾಯಿಗಳನ್ನು ಅಂದರೆ ಸುಮಾರು ಬಿಲಿಯನ್ (೭೦೦ ಕೋಟಿ) ಡಾಲರ್ಗಳನ್ನು ಮೀಸಲಿಟ್ಟಿದೆ ಎಂದು ನಂಬಲರ್ಹ ಮೂಲಗಳು 2020 ಅಕ್ಟೋಬರ್ 22ರ ಗುರುವಾರ ವರದಿ ಮಾಡಿದವು.

ಪ್ರಧಾನಿ ನರೇಂದ್ರ ಮೋದಿಯ ಆಡಳಿತವು ೧೩೦ ಕೋಟಿ ಜನಸಂಖ್ಯೆಯುಳ್ಳ ರಾಷ್ಟ್ರದ ಪ್ರತಿ ವ್ಯಕ್ತಿಗೆ ಲಸಿಕೆ ಒದಗಿಸಲು ಸುಮಾರು - ಡಾಲರ್ ವೆಚ್ಚವನ್ನು ಅಂದಾಜು ಮಾಡಿದೆ ಎಂದು ಗುರುತು ಹೇಳಲು ಇಚ್ಛಿಸದ ಬೆಳವಣಿಗೆ ಬಗ್ಗೆ ಅರಿವು ಉಳ್ಳ ವ್ಯಕ್ತಿಗಳು ಹೇಳಿದರು.

ಹಣವನ್ನು ಮಾರ್ಚ್ ೩೧ಕ್ಕೆ ಮುಕ್ತಾಯವಾಗುವ ಪ್ರಸಕ್ತ ಹಣಕಾಸು ವರ್ಷಕ್ಕಾಗಿ ವ್ಯವಸ್ಥೆಗೊಳಿಸಲಾಗಿದೆ. ಆದ್ದರಿಂದ ಉದ್ದೇಶಕ್ಕಾಗಿ ಯಾವುದೇ ಹಣದ ಕೊರತೆ ಉಂಟಾಗುವುದಿಲ್ಲ ಎಂದು ಅವರು ನುಡಿದರು.

ವಿಶ್ವದ ಅತಿದೊಡ್ಡ ಲಸಿಕೆಗಳ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈ.ಲಿ. ಮುಖ್ಯಸ್ಥ ಆದರ್ ಪೂನಾವಾಲ್ಲಾ ಅವರು, ಹಿಮಾಲಯದಿಂದ ದೂರದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳವರೆಗೆ ಎಲ್ಲೆಡೆ ವಾಸಿಸುವ ಜನರಿಗಾಗಿ ಲಸಿಕೆ ಸಂಗ್ರಹ ಮತ್ತು ಚುಚ್ಚುಮದ್ದು ನೀಡಲು ರಾಷ್ಟ್ರಕ್ಕೆ ಸುಮಾರು ೮೦೦ ಬಿಲಿಯನ್ (೮೦,೦೦೦ ಕೋಟಿ) ರೂಪಾಯಿಗಳ ಅಗತ್ಯವಿರುತ್ತದೆ ಎಂದು ಊಹಿಸಿದ್ದಾರೆ. ಲಸಿಕೆ ಖರೀದಿ ಜೊತೆಗೆ ಅವುಗಳನ್ನು ಉತ್ಪಾದನಾ ತಾಣಗಳಿಂದ ವಿತರಣಾ ತಾಣಗಳಿಗೆ ಸಾಗಿಸುವುದು ಬೃಹತ್ ಕಾರ್ಯವಾಗಿದೆ.

ಭಾರತದಾದ್ಯಂತ ಲಸಿಕೆ ವಿತರಿಸುವುದು ಒಂದು ಬೃಹತ್ ಕಾರ್ಯವಾಗಲಿದೆ ಎಂದು ಚಂಡೀUಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಮಹೇಶ್ ದೇವ್ನಾನಿ ಅವರು ವೆಬ್ನಾರ್ನಲ್ಲಿ ಮಾತನಾಡುತ್ತಾ ಬುಧವಾರ ಹೇಳಿದರು. ನಮಗೆ ಆದ್ಯತೆಯ ಯೋಜನೆ ಬೇಕು, ಪ್ರತಿಯೊಬ್ಬರೂ ಇದನ್ನು ಆರಂಭದಲ್ಲಿ ಹೊಂದಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಒಂದು ಅಂದಾಜಿನ ಪ್ರಕಾರ, ವಿಶ್ವದ ಜನಸಂಖ್ಯೆಯನ್ನು ರಕ್ಷಿಸಲು ಸಿಂಗಲ್-ಡೋಸ್ ಲಸಿಕೆಯನನು ವಿಮಾನಗಳ ಮೂಲಕ ಸಾಗಿಸಲು ಸುಮಾರು ,೦೦೦ ಸರಕು ವಿಮಾನಗಳಲ್ಲಿ ಸ್ಥಳಾವಕಾಶ ಬೇಕಾಗುತ್ತದೆ.

ಅಲ್ಪಾವಧಿಯಲ್ಲಿ ಭಾರತದಾದ್ಯಂತ ಲಸಿಕೆಗಳನ್ನು ವಿತರಿಸಲು ಶೈತ್ಯಾಗಾರ ವ್ಯವಸ್ಥೆಯುಳ್ಳ ಸಾಗಣೆ (ಕೋಲ್ಡ್-ಚೈನ್ ಲಾಜಿಸ್ಟಿಕ್) ನಿರ್ಮಿಸುವುದು ಭಾರತಕ್ಕೆ ದೊಡ್ಡ ಸವಾಲಾಗಿದೆ ಎಂದು ಬಯೋಕಾನ್ ಲಿಮಿಟೆಡ್ ಸ್ಥಾಪಕ ಮತ್ತು ಅಧ್ಯಕ್ಷರಾದ ಕಿರಣ್ ಮಜುಂದಾರ್-ಶಾ ಕಳೆದ ವಾರ ಹೇಳಿದ್ದರು.

"ನಾವು ಯೋಜನೆ ಹೊಂದಿದ್ದೇವೆ ಎಂದು ಹೇಳಲು ನವೆಂಬರ್ ಅಂತ್ಯದ ವೇಳೆಗೆ ನಮಗೆ ಸಾಧ್ಯವಾಗಬಹುದು ಮತ್ತು ಲಸಿಕೆಗಳನ್ನು ಹೊರತರಲು ಡಿಜಿಟಲ್ ಪ್ಲಾಟ್ಫಾರ್ಮ್ಗಳು ಸಹಾಯ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಭಾರತವು ಕೋವಿಡ್ ಸೋಂಕಿನ ಗರಿಷ್ಠ ಮಟ್ಟವನ್ನು ಸೆಪ್ಟೆಂಬರಿನಲ್ಲಿ ದಾಟಿದ್ದು, ಫೆಬ್ರುವರಿ ವೇಳೆಗೆ ಸಾಂಕ್ರಾಮಿಕ ಹರಡುವಿಕೆ ಸಂಪೂರ್ಣ ನಿಯಂತ್ರಣಕ್ಕೆ ಬರಬಹುದು ಎಂದು ಕೇಂದ್ರ ಸರ್ಕಾರ ನೇಮಿಸಿದ ಅಧ್ಯಯನ ಸಮಿತಿ ಹೇಳಿದೆ. ಕೊರೋನಾದಿಂದಾಗಿ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಭಾರೀ ಪೆಟ್ಟು ಬಿದ್ದಿದು, ಪ್ರಧಾನಿ ಮೋದಿಯವರು ಆರ್ಥಿತಕೆಯನ್ನು ಮತ್ತೆ ತೆರೆಯುತ್ತಿದ್ದಾರೆ.

ವಾರಾಂತ್ಯದಿಂದ, ಭಾರತೀಯರು ಸರಣಿ ಹಬ್ಬಗಳನ್ನು ಆಚರಿಸಲಿದ್ದು, ಅದು ದೈನಂದಿನ ವೈರಸ್ ಸೋಂಕಿನಲ್ಲಿ ತೀವ್ರ ಏರಿಕೆಗೆ ಕಾರಣವಾಗಬಹುದು ಎಂಬ ಭೀತಿಯೂ ಇದೆ.

ಕೋವಿಡ್ -೧೯ ಲಸಿಕೆ ಸಿದ್ಧವಾದ ಕೂಡಲೇ ಎಲ್ಲಾ ಭಾರತೀಯರಿಗೆ ಅದು ಲಭಿಸುವುದನ್ನು ತಮ್ಮ ಸರ್ಕಾರ ಖಚಿತಪಡಿಸುತ್ತದೆ ಎಂದು ಮೋದಿ ಮಂಗಳವಾರ ಹೇಳಿದ್ದಾರೆ.

No comments:

Advertisement