My Blog List

Monday, October 5, 2020

ಬ್ಯಾಂಕ್ ಇಎಂಐ: ಹೆಚ್ಚುವರಿ ಅಫಿಡವಿಟಿಗೆ ಸುಪ್ರೀಂ ಕಾಲಾವಕಾಶ

 ಬ್ಯಾಂಕ್ ಇಎಂಐ: ಹೆಚ್ಚುವರಿ ಅಫಿಡವಿಟಿಗೆ ಸುಪ್ರೀಂ ಕಾಲಾವಕಾಶ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ತಡೆಯಲು ವಿಧಿಸಲಾದ ರಾಷ್ಟ್ರವ್ಯಾಪಿ ದಿಗ್ಬಂಧನ ಅವಧಿಯಲ್ಲಿ ಘೋಷಿಸಲಾದ ಬ್ಯಾಂಕ್ ಸಾಲ ಕಂತು ಮರುಪಾವತಿ ಮುಂದೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಕೇಂದ್ರ ಸರ್ಕಾರಕ್ಕೆ 2020 ಅಕ್ಟೋಬರ್ 05 ಸೋಮವಾರ ಕಾಲಾವಕಾಶ ನೀಡಿದ ಸುಪ್ರೀಂಕೋಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ ೧೩ಕ್ಕೆ ಮುಂದೂಡಿತು.

ವಿವಿಧ ಕ್ಷೇತ್ರಗಳ ಮೇಲಿನ ಕೋವಿಡ್-೧೯ ಸಂಬಂಧಿತ ಒತ್ತಡದ ಹಿನ್ನೆಲೆಯಲ್ಲಿ ಸಾಲ ಪುನರ್ರಚನೆ ಕುರಿತು ಕೆ.ವಿ. ಕಾಮತ್ ಸಮಿತಿಯು ಸಲ್ಲಿಸಿದ ಶಿಫಾರಸನ್ನು ನ್ಯಾಯಾಲಯದಲ್ಲಿ ದಾಖಲಿಸುವಂತೆ ಕೂಡಾ ಕೇಂದ್ರ ಮತ್ತು ಆರ್ ಬಿಐಗೆ ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವ ಪೀಠ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ ನಿರ್ದೇಶಿಸಿತು.

ಸಾಲ ನಿಷೇಧದ ತಿಂಗಳ ಅವಧಿಯ ಬಡ್ಡಿ ಮನ್ನಾ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು. ನ್ಯಾಯಮೂರ್ತಿಗಳಾದ ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಕೂಡ ಪೀಠದ ಸದಸ್ಯರಾಗಿದ್ದಾರೆ.

ಆರು ತಿಂಗಳ ನಿಷೇಧದ ಅವಧಿಯಲ್ಲಿ ಕೋಟಿ ರೂ.ಗಳವರೆಗೆ ಸಾಲಕ್ಕೆ ವಿಧಿಸಲಾಗುವ ಚಕ್ರಬಡ್ಡಿಯನ್ನು (ಬಡ್ಡಿಯ ಮೇಲಿನ ಬಡ್ಡಿ) ಮನ್ನಾ ಮಾಡಲು ಒಪ್ಪಿಗೆ ನೀಡುವ ಮೂಲಕ ವೈಯಕ್ತಿಕ ಸಾಲಗಾರರಿಗೆ ಮತ್ತು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪರಿಹಾರ ನೀಡಲು ಹಣಕಾಸು ಸಚಿವಾಲಯ ನಿರ್ಧರಿಸಿದ ನಂತರ ಸುಪ್ರೀಂ ಕೋರ್ಟ್ ನಿರ್ದೇಶನ ಬಂದಿತು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ, ಕೇಂದ್ರದ ಹೊಸ ಪ್ರಸ್ತಾವನೆಯಡಿಯಲ್ಲಿ ರಿಯಲ್ ಎಸ್ಟೇಟ್ ನಂತಹ ವಿವಿಧ ಕ್ಷೇತ್ರಗಳನ್ನು ಕೈಬಿಡಲಾಗಿದೆ ಎಂಬಿತ್ಯಾದಿ ಕುಂದುಕೊರತೆಗಳನ್ನು ಪೀಠವು ಗಮನಕ್ಕೆ ತೆಗೆದುಕೊಂಡಿತು.

ಸಾಲ ನಿರ್ಣಯ ಯೋಜನೆಗಳನ್ನು ಅಂತಿಮಗೊಳಿಸುವಾಗ ಸಾಲ ನೀಡುವ ಸಂಸ್ಥೆಗಳಿಂದ ಅಪವರ್ತನಗೊಳ್ಳಬಹುದಾದ ೨೬ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾಮತ್ ಸಮಿತಿ ಶಿಫಾರಸುಗಳನ್ನು ಮಾಡಿತ್ತು ಮತ್ತು ಒಂದು ವಲಯದಲ್ಲಿನ ಕೊರೊನಾವೈರಸ್ ಸಾಂಕ್ರಾಮಿಕದ ತೀವ್ರತೆಯ ಆಧಾರದ ಮೇಲೆ ಬ್ಯಾಂಕುಗಳು ಶ್ರೇಣೀಕೃತ ವಿಧಾನವನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳಿತ್ತು.

ಸಾಲದ ನಿಷೇಧದ ಕುರಿತು ಶಿಫಾರಸುಗಳು ಮತ್ತು ನಿರ್ಧಾರಗಳು ಮತ್ತು ಇತರ ಅಧಿಸೂಚನೆಗಳನ್ನು ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಇರಿಸಲು ಮತ್ತು "ರಿಯಲ್ ಎಸ್ಟೇಟ್ ಸಂಘಗಳು ಮತ್ತು ವಿದ್ಯುತ್ ಉತ್ಪಾದಕರು ಎತ್ತಿದ ಸಮಸ್ಯೆಗಳನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಆರ್ಬಿಐಗೆ ಸೂಚಿಸಿತು.

ಏತನ್ಮಧ್ಯೆ, ಭಾರತೀಯ ಬ್ಯಾಂಕುಗಳ ಸಂಘ (ಐಬಿಎ), ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಶನ್ (ಕ್ರೆಡೈ) ಮತ್ತು ಇತರ ಕಕ್ಷಿದಾರರಿಗೆ ಕೇಂದ್ರದ ಅಫಿಡವಿಟ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ನ್ಯಾಯಪೀಠವು ಸ್ವಾತಂತ್ರ್ಯವನ್ನು ನೀಡಿದೆ.

ರಿಯಲ್ ಎಸ್ಟೇಟ್ ಕ್ಷೇತ್ರದ ಪರವಾಗಿ ಹಾಜರಾದ ಹಿರಿಯ ವಕೀಲ ಸಿ ಸುಂದರಂ, ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಸಂಪೂರ್ಣವಾಗಿ ಬಿಟ್ಟುಬಿಡಲಾಗಿದೆ, ಇಂತಹ ಸನ್ನಿವೇಶದಲ್ಲಿ ಹೀಗೆ ಮಾಡಬಾರದು ಎಂದು ವಾದಿಸಿದರು.

ಇನ್ನೊಬ್ಬ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಕೇಂದ್ರದ ಉತ್ತರಕ್ಕೆ ವಿವರವಾದ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಲು ಬಯಸಿದರು. ಕೆಲವು ವಿಷಯಗಳನ್ನು ಪರಿಶೀಲಿಸಬೇಕಾಗಿದ್ದು ಅದಕ್ಕೆ ಕಾಲಾವಕಾಶ ಬೇಕು ಎಂದು ಅವರು ಹೇಳಿದರು.

ಚಕ್ರ ಬಡ್ಡಿ ಮನ್ನಾಕ್ಕೆ ಸಂಬಂಧಿಸಿದಂತೆ ನೀಡಿದ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರವು ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ಇದಕ್ಕಾಗಿ ಸೂಕ್ತ ಅನುದಾನ ನೀಡಲು ಸಂಸತ್ತಿನ ಅನುಮೋದನೆ ಪಡೆಯುವುದಾಗಿ ತಿಳಿಸಿದೆ.

ಸರ್ಕಾರವು ಹಿಂದೆ ಘೋಷಿಸಿದ ಗರೀಬ ಕಲ್ಯಾಣ ಮತ್ತು ಆತ್ಮ ನಿರ್ಭರ ಪ್ಯಾಕೇಜ್ಗಳ ಅಡಿಯಲ್ಲಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ನೀಡಲಾದ . ಲಕ್ಷ ಕೋಟಿ ರೂ ಮತ್ತು ಗೃಹ ಸಾಲಕ್ಕೆ ನೀಡಲಾದ ೭೦,೦೦೦ ಕೋಟಿ ರೂ.ಕೊಡುಗೆಯನ್ನೂ ಇದು ಮೀರುತ್ತದೆ. ಮತ್ತು ಕೊಡುಗೆಯ ಲಾಭ ಸಾಲ ನಿಷೇಧ ಅವಧಿಯಲ್ಲಿ ಸಾಲ ಕಂತು ಪಾವತಿ ಮುಂದೂಡಿಕೆಯ ಲಾಭ ಪಡೆಯದ ಸಾಲಗಾರರಿಗೂ ಲಭಿಸುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ.

ಸಾಲ ಕಂತು ಮರುಪಾವತಿ ನಿಷೇಧ ಕುರಿರು ಆರ್ ಬಿಐ ಆರಂಭದಲ್ಲಿ, ಮಾರ್ಚ್ ೨೭ ರಂದು ಸುತ್ತೋಲೆಯನ್ನು ಹೊರಡಿಸಿತ್ತು, ಇದು ಸಾಂಕ್ರಾಮಿಕ ರೋಗದಿಂದಾಗಿ ೨೦೨೦ ಮಾರ್ಚ್ ಮತ್ತು ವರ್ಷದ ಮೇ ೩೧ ನಡುವಣ ಸಾಲದ ಕಂತುಗಳ ಮರುಪಾವತಿ ಮುಂದೂಡಿಕೆಗೆ ಅವಕಾಶ ಕಲ್ಪಿಸಿತ್ತು. ನಂತರ, ಇದನ್ನು ಆಗಸ್ಟ್ ೩೧ ರವರೆಗೆ ವಿಸ್ತರಿಸಲಾಗಿತ್ತು.

No comments:

Advertisement