Monday, October 5, 2020

ಕೊರೋನಾವೈರಸ್: ಸೆಪ್ಟೆಂಬರಿನಲ್ಲಿ ಗರಿಷ್ಠ ಮಟ್ಟ ದಾಟಿದ ಭಾರತ

 ಕೊರೋನಾವೈರಸ್: ಸೆಪ್ಟೆಂಬರಿನಲ್ಲಿ ಗರಿಷ್ಠ ಮಟ್ಟ ದಾಟಿದ ಭಾರತ

ನವದೆಹಲಿ: ಭಾರತವು ಸೆಪ್ಟೆಂಬರ್ನಲ್ಲಿ ಕೋವಿಡ್ -೧೯ ಶಿಖರವನ್ನು ದಾಟಿದೆ ಎಂದು ಕೊರೋನಾವೈರಸ್ ಪ್ರಸರಣದ ಅಂಕಿಸಂಖ್ಯೆ ಮಾಹಿತಿಯನ್ನು ವಿಶ್ಲೇಷಿಸಿದ ಬಳಿಕ ಹಣಕಾಸು ಸಚಿವಾಲಯ 2020 ಅಕ್ಟೋಬರ್ 05 ಸೋಮವಾರ ತಿಳಿಸಿತು.

ಕಳೆದ ಒಂದು ವಾರದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಸೆಪ್ಟೆಂಬರ್ನಲ್ಲಿ ಭಾರತ ತನ್ನ ಕೋವಿಡ್ -೧೯ ಗರಿಷ್ಠ ಮಟ್ಟವನ್ನು ದಾಟಿರುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವಾಲಯ ಹೇಳಿತು.

ಆದಾಗ್ಯೂ, ಸಾಂಕ್ರಾಮಿಕ ರೋಗವು ಅಂತ್ಯಗೊಂಡಿಲ್ಲ ಎಂದು ಸಚಿವಾಲಯ ಎಚ್ಚರಿಸಿತು.

"ಅಖಿಲ ಭಾರತ ಮಟ್ಟದಲ್ಲಿ ಕ್ಷೀಣಿಸುತ್ತಿರುವ ಸೋಂಕು ದೃಢೀಕರಣದ ಪ್ರಮಾಣವು ಆರ್ಥಿಕ ಚೇತರಿಕೆಯ ಅಂಚುಗಳನ್ನು ಮತ್ತಷ್ಟು ಹೆಚ್ಚಿಸಲು ವೇದಿಕೆ ಕಲ್ಪಿಸುತ್ತದೆ. ಸಂಪರ್ಕ ಮತ್ತು ಚಲನಶೀಲತೆಯ ಮೇಲಿನ ನಿರ್ಬಂಧಗಳನ್ನು ಕಡಿಮೆಗೊಳಿಸಿರುವುದರಿಂದ ಎಲ್ಲ ಪಾಲುದಾರರೂ ಸಕ್ರಿಯರಾಗುವ ಮೂಲಕ ಆರ್ಥಿಕ ಚಟುವಟಿಕೆಗೆ ವೇಗ ನೀಡಬೇಕು ಎಂದು ಹಣಕಾಸು ಸಚಿವಾಲಯ ಹೇಳಿದೆ.

ಸಾಮಾಜಿಕ ದೂರವಿಡುವುದಕ್ಕಿಂತ ಹೆಚ್ಚಾಗಿ ಜೀವ ಮತ್ತು ಜೀವನ ಕಾಪಾಡಿಕೊಳ್ಳುವ ಸಲುವಾಗಿ ಸನ್ನಿವೇಶಕ್ಕೆ ಅನುಗುಣವಾಗಿ ಸ್ವಯಂ ರಕ್ಷಣೆಯ ಮುನ್ನೆಚ್ಚರಿಕೆಯೊಂದಿಗೆ ಹೊಂದಿಕೊಳ್ಳುವುದು ಅಗತ್ಯ ಎಂದು ಹಣಕಾಸು ಸಚಿವಾಲಯ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.

ಅಂಕಿಸಂಖ್ಯೆಗಳ ಪ್ರಕಾರ ಸೆಪ್ಟೆಂಬರ್ ೧೭ ರಿಂದ ೩೦ ರವರೆಗಿನ ೧೪ ದಿನಗಳ ಅವಧಿಯಲ್ಲಿ, ದೈನಂದಿನ ಸೋಂಕು ಸಕಾರಾತ್ಮಕ ಪ್ರಕರಣಗಳ ಏಳು ದಿನಗಳ ಸರಾಸರಿ ಸುಮಾರು ೯೩,೦೦೦ ದಿಂದ ೮೩,೦೦೦ ಕ್ಕೆ ಇಳಿದಿದೆ ಮತ್ತು ಏಳು ದಿನಗಳ ದೈನಂದಿನ ಪರೀಕ್ಷೆಗಳ ಸರಾಸರಿ ಸುಮಾರು ,೧೫,೦೦೦ ದಿಂದ ,೨೪,೦೦೦ ಕ್ಕೆ ಏರಿದೆ.

ಕಳೆದ ೨೪ ಗಂಟೆಗಳಲ್ಲಿ ೭೪,೪೪೨ ಹೊಸ ಪ್ರಕರಣಗಳು ಮತ್ತು ೯೦೩ ಸಾವುಗಳು ದಾಖಲಾಗಿದ್ದು, ಭಾರತದ ಕೋವಿಡ್ -೧೯ ಸಂಖ್ಯೆ ೬೬ ಲಕ್ಷ ದಾಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ ೬೬,೨೩,೮೧೬ ಆಗಿದ್ದು, ಇದರಲ್ಲಿ ,೩೪,೪೨೭ ಸಕ್ರಿಯ ಪ್ರಕರಣಗಳು, ೫೫,೮೬,೭೦೪ ಗುಣಮುಖರಾಗಿ ಚೇತರಿಸಿದ ಪ್ರಕರಣಗಳು ಮತ್ತು ,೦೨,೬೮೫ ಸಾವುಗಳು ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದಂತೆ ಭಾನುವಾರ, ಭಾರತದಲ್ಲಿ ಮಿಲಿಯನ್ (ದಶಲಕ್ಷ) ಜನಸಂಖ್ಯೆಗೆ ದಿನಕ್ಕೆ ೧೪೦ ಪರೀಕ್ಷೆಗಳನ್ನು ದಾಟಿದೆ.

ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿಗಿಂತ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಭಾರತದಲ್ಲಿ ಸೋಂಕಿನ ಬಗ್ಗೆ ಪರೀಕ್ಷೆ ಕಡಿಮೆಯಾಗಿದೆ ಎಂಬ ಟೀಕೆಗಳ ಮಧ್ಯೆ, ಭಾರತದ ದೈನಂದಿನ ಪರೀಕ್ಷಾ ಸಂಖ್ಯೆಗಳು ವಿಶ್ವದಲ್ಲೇ ಅತಿ ಹೆಚ್ಚು ಎಂದು ಕೇಂದ್ರ ಪ್ರತಿಪಾದಿಸಿದೆ.

ಪರೀಕ್ಷಾ ಹೆಚ್ಚಳವು ದೇಶಾದ್ಯಂತ ಪರೀಕ್ಷಾ ಲ್ಯಾಬ್ ನೆಟ್ವರ್ಕ್ ತ್ವರಿತ ವಿಸ್ತರಣೆಯಿಂದ ಸಾಧ್ಯವಾಗಿದೆ.

ಭಾರತವು ,೬೨೩ ಲ್ಯಾಬ್ಗಳನ್ನು ಹೊಂದಿದ್ದು, ಸರ್ಕಾರಿ ವಲಯದಲ್ಲಿ ,೦೨೨ ಲ್ಯಾಬ್ಗಳು ಮತ್ತು ೬೦೧ ಖಾಸಗಿ ಲ್ಯಾಬ್ಗಳನ್ನು ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.

No comments:

Advertisement