My Blog List

Saturday, October 17, 2020

ಭಾರತದಲ್ಲಿ ಸ್ಪುಟ್ನಿಕ್ ವಿ ಪರೀಕ್ಷೆ: ಡಾ. ರೆಡ್ಡಿಗೆ ಡಿಸಿಜಿಐ ಒಪ್ಪಿಗೆ

 ಭಾರತದಲ್ಲಿ ಸ್ಪುಟ್ನಿಕ್ ವಿ ಪರೀಕ್ಷೆ: ಡಾ. ರೆಡ್ಡಿಗೆ ಡಿಸಿಜಿಐ ಒಪ್ಪಿಗೆ

ನವದೆಹಲಿ: ರಷ್ಯಾದ ಸ್ಪುಟ್ನಿಕ್ - ವಿ ಕೋವಿಡ್-೧೯ ಲಸಿಕೆಯ ಮಾನವ ಪರೀಕ್ಷೆಗೆ ಮೊದಲು ಸಲ್ಲಿಸಿದ್ದ ಪ್ರಸ್ತಾವವನ್ನು ತಳ್ಳಿ ಹಾಕಿದ್ದ ಭಾರತದ ಔಷಧ ಮಹಾ ನಿಯಂತ್ರಕರು (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ-ಡಿಸಿಜಿಐ) ಅಂತಿಮವಾಗಿ ಡಾ. ರೆಡ್ಡಿ ಅವರ ಹಂತ /೩ರ ಕ್ಲಿನಿಕಲ್ ಮಾನವ ಪರೀಕ್ಷೆಗೆ ಒಪ್ಪಿಗೆ ನೀಡಿದೆ. ಸ್ಪುಟ್ನಿಕ್ ವಿ, ಕೋವಿಡ್ -೧೯ ಲಸಿಕೆಯು ರಷ್ಯಾವು ಮಾನವರ ಮೇಲೆ ಪರೀಕ್ಷಾರ್ಥ ಪ್ರಯೋಗಕ್ಕೆ ಅನುಮತಿ ನೀಡಿದ ಚೊಚ್ಚಲ ಕೊರೋನಾವೈರಸ್ ಲಸಿಕೆಯಾಗಿದೆ.

"ಇದು ಬಹು-ಕೇಂದ್ರ ಮತ್ತು ಯಾದೃಚ್ಛಿಕ ನಿಯಂತ್ರಿತ ಅಧ್ಯಯನವಾಗಿದ್ದು, ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಅಧ್ಯಯನವನ್ನು ಒಳಗೊಂಡಿರುತ್ತದೆ" ಎಂದು ಡಾ. ರೆಡ್ಡಿ ಮತ್ತು ರಷ್ಯನ್ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) 2020 ಅಕ್ಟೋಬರ್ 17ರ ಶನಿವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆ ತಿಳಿಸಿದೆ.

ಚುಚ್ಚುಮದ್ದಾಗಿ ನೋಂದಾಯಿಸಿಕೊಳ್ಳುವ ಮೊದಲು ಸ್ಪುಟ್ನಿಕ್- ವಿ ಲಸಿಕೆಯನ್ನು ರಷ್ಯಾದಲ್ಲಿ ಅಲ್ಪ ಸಂಖ್ಯೆಯ ಜನರ ಮೇಲೆ ಪರೀಕ್ಷೆ ನಡೆಸಿರುವುದರಿಂದ ಭಾರತದಲ್ಲಿ ದೊಡ್ಡ ಸಂಖ್ಯೆಯ ಜನರ ಮೇಲೆ ಪರೀಕ್ಷಿಸುವ ಡಾ. ರೆಡ್ಡಿ ಪ್ರಯೋಗಾಲಯದ ಪ್ರಾಥಮಿಕ ಪ್ರಸ್ತಾವವನ್ನು ಡಿಸಿಜಿಐ ಪ್ರಶ್ನಿಸಿ ಅವಕಾಶ ನಿರಾಕರಿಸಿತ್ತು. ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಸ್ತುತ ನೋಂದಣಿ ಮಾಡಿಕೊಂಡಿರುವ ೪೦,೦೦೦ ಮಂದಿಯ ಮೇಲೆ ಕ್ಲಿನಿಕಲ್ ಪರೀಕ್ಷಾ ಹಂತ ೩ಕ್ಕೆ ಒಳಪಡಿಸಲಾಗುತ್ತಿದೆ.

ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಪರೀಕ್ಷೆ ಮತ್ತು ಭಾರತದಲ್ಲಿ ಅದರ ವಿತರಣೆಯನ್ನು ನಡೆಸಲು  ಸೆಪ್ಟೆಂಬರಿನಲ್ಲಿ ಡಾ. ರೆಡ್ಡಿ ಮತ್ತು ಆರ್‌ಡಿಐಎಫ್ ಪಾಲುದಾರಿಕೆಯ ಭಾಗವಾಗಿ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿದ್ದರು. ಸಹಭಾಗಿತ್ವದ ಮೂಲಕ ಭಾರತವು ೧೦೦ ಮಿಲಿಯನ್ (೧೦ ಕೋಟಿ) ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಪಡೆಯಲಿದೆ.

ಇಡೀ ಪ್ರಕ್ರಿಯೆಯಲ್ಲಿ ಡಿಸಿಜಿಐನ ವೈಜ್ಞಾನಿಕ ಕಠಿಣತೆ ಮತ್ತು ಮಾರ್ಗದರ್ಶನವನ್ನು ನಾವು ಅಂಗೀಕರಿಸಿದ್ದೇವೆ. ಇದು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲು ಅನುವು ಮಾಡಿಕೊಡುವ ಮಹತ್ವದ ಬೆಳವಣಿಗೆಯಾಗಿದೆ ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆ ತರಲು ನಾವು ಬದ್ಧರಾಗಿದ್ದೇವೆ ಎಂದು ಡಾ ರೆಡ್ಡಿ ಪ್ರಯೋಗಾಲಯಗಳ ಸಹ-ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ ವಿ ಪ್ರಸಾದ್ ಹೇಳಿದ್ದಾರೆ.

ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾ ಆರೋಗ್ಯ ಸಚಿವಾಲಯವು ಆಗಸ್ಟ್ ೧೧ ರಂದು ನೋಂದಾಯಿಸಿತು. ಇದು ಮಾನವ ಅಡೆನೊವೈರಲ್ ವೆಕ್ಟರ್ಸ್ ಪ್ಲಾಟ್‌ಫಾರ್ಮ್ ಆಧರಿಸಿ ಕೋವಿಡ್-೧೯ ವಿರುದ್ಧದ ವಿಶ್ವದ ಮೊದಲ ನೋಂದಾಯಿತ ಲಸಿಕೆಯಾಗಿದೆ.

ಎರಡನೇ ಲಸಿಕೆ - ಎಪಿವಾಕ್ ಕೊರೊನಾ -ಕೂಡಾ ರಷ್ಯಾದಲ್ಲಿ ನೋಂದಣಿಯಾಗಿದೆ. ಮೂರನೆಯ ಲಸಿಕೆಯ ಮೊದಲ ಮತ್ತು ಎರಡನೆಯ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನೊವೊಸಿಬಿರ್ಸ್ಕ್, ಸೇಂಟ್ ಪೀಟರ್‍ಸ್ ಬರ್ಗ್ ಮತ್ತು ಕಿರೋವ್‌ನಲ್ಲಿನ ವೈದ್ಯಕೀಯ ಸೌಲಭ್ಯಗಳಲ್ಲಿ ನಡೆಸಲು ಅನುಮತಿಯನ್ನು ಪಡೆದಿದೆ. ಮೊದಲ ಹಂತದಲ್ಲಿ, ಅಕ್ಟೋಬರ್ ರಂದು ೧೫ ಸ್ವಯಂಸೇವಕರಿಗೆ ಲಸಿಕೆಯೊಂದಿಗೆ ಚುಚ್ಚುಮದ್ದು ನೀಡಲಾಯಿತು.

No comments:

Advertisement