ಆರೋಗ್ಯ ಸೇತು ಆಪ್: ಆರ್ ಟಿಐ ಅಡಿ ಎಲ್ಲ ಮಾಹಿತಿ ಒದಗಿಸಲು ಕೇಂದ್ರ ಬದ್ಧ
ನವದೆಹಲಿ: ಕೊರೋನಾವೈರಸ್ ಸಂಪರ್ಕ ಪತ್ತೆ ಅಪ್ಲಿಕೇಷನ್ ’ಆರೋಗ್ಯ ಸೇತು’ವಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯ (ಆರ್ಟಿಐ) ಅಡಿ ಸಲ್ಲಿಸಿದ ಅರ್ಜಿಗೆ ಎಲ್ಲ ಮಾಹಿತಿಯನ್ನು ಒದಗಿಸಲು ಮತ್ತು ಕೇಂದ್ರ ಮಾಹಿತಿ ಆಯೋಗದ ನಿರ್ದೇಶನವನ್ನು ಅನುಸರಿಸಲು ಬದ್ಧವಾಗಿರುವುದಾಗಿ ಕೇಂದ್ರ ಸರ್ಕಾರವು 2020 ಅಕ್ಟೋಬರ್ 29ರ ಗುರುವಾರ ತಿಳಿಸಿತು.
ಆರೋಗ್ಯ ಸೇತು ಆಪ್ ಸೃಷ್ಟಿಗೆ ಸಂಬಂಧಿಸಿದಂತೆ ಕೋರಲಾದ ಮಾಹಿತಿಗೆ ಹಾರಿಕೆಯ ಉತ್ತರ ನೀಡಿದ್ದಕ್ಕಾಗಿ ರಾಷ್ಟ್ರೀಯ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ಲಕ್ಷಾಂತರ ಬಳಕೆದಾರರ ಡೇಟಾವನ್ನು ಹೊಂದಿರುವ ಆರೋಗ್ಯ ಸೇತು ಆಪ್ ಬಗ್ಗೆ ಮಾಹಿತಿ ನೀಡುವಲ್ಲಿ ಆಗಿರುವ ಲೋಪಗಳ ಬಗ್ಗೆ ಕೇಂದ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) ಗಮನ ಹರಿಸಿದ್ದು, ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆರ್ಟಿಐ ಪ್ರಶ್ನೆಯೊಂದಿಗೆ ತಮ್ಮ ಸಂಸ್ಥೆಗಳಲ್ಲಿ ವ್ಯವಹರಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾUಕ್ಕೆ (ಎನ್ಜಿಇಡಿ) ಅದು ನಿರ್ದೇಶನ ನೀಡಿದೆ.
ಆರ್ಟಿಐ ಕಾಯ್ದೆಯಡಿ ಕೋರಿದ ಎಲ್ಲ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲು ಮತ್ತು ಸಿಐಸಿಯ ನಿರ್ದೇಶನಗಳನ್ನು ಅನುಸರಿಸಲು ಸಚಿವಾಲಯ ಬದ್ಧವಾಗಿದೆ ಎಂದು ಅವರು ಹೇಳಿದರು. ಆಯೋಗವು ಸರ್ಕಾರದ ಪ್ರತಿಕ್ರಿಯೆಯನ್ನು "ಅತ್ಯಂತ ಅಸಂಬದ್ಧ’ ಎಂದು ಬಣ್ಣಿಸಿದೆ.
ಸೌರವ್ ದಾಸ್ ಸಲ್ಲಿಸಿದ ಆರ್ಟಿಐ ಅರ್ಜಿ, ಅದರ ಸುತ್ತಲಿನ ಗೌಪ್ಯತೆ ಕಾಳಜಿಯ ಹಿನ್ನೆಲೆಯಲ್ಲಿ ಅಪ್ಲಿಕೇಶನ್ ರಚಿಸುವ ಬಗ್ಗೆ ಮಾಹಿತಿ ಕೋರಿತ್ತು. ಎನ್ಐಸಿ ಮತ್ತು ಎನ್ಇಜಿಡಿ ಮತ್ತು ಮೀಟಿವೈ ಯ ಸರ್ಕಾರಿ ಅಧಿಕಾರಿಗಳು ದಾಸ್ ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ಹೀಗಾಗಿ ದಾಸ್ ಕೇಂದ್ರೀಯ ಮಾಹಿತಿ ಆಯೋಗಕ್ಕೆ (ಸಿಐಸಿ) ಮೇಲ್ಮನವಿ ಸಲ್ಲಿಸಿದ್ದರು.
ಅಪ್ಲಿಕೇಶನ್ ಮಾಹಿತಿಯನ್ನು ಸಂಗ್ರಹಿಸಿ ದಾಸ್ತಾನು ಇರಿಸುತ್ತದೆ ಎಂಬುದಾಗಿ ಮಾಹಿತಿ ಗೌಪ್ಯತೆ ಕಾರ್ಯಕರ್ತರು ಆರೋಪಿಸಿರುವುದರಿಂದ ಅಪ್ಲಿಕೇಶನ್ ವಿಶೇಷವಾಗಿ ವಿವಾದಗ್ರಸ್ತವಾಗಿದೆ.
’ಆಪ್ ಸೃಷ್ಟಿಗೆ ಸಂಬಂಧಿಸಿದ ಸಂಪೂರ್ಣ ಕಡತಗಳು ಎನ್ಐಸಿ ಬಳಿ ಇಲ್ಲ ಎಂಬ ‘ಸಿಪಿಐಒ (ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ), ಎನ್ಐಸಿಯ ಸಲ್ಲಿಕೆಗಳು ಅರ್ಥವಾಗುವಂತಹದ್ದಾಗಿದೆ, ಆದರೆ ಅದೇ ಸಲ್ಲಿಕೆಗಳನ್ನು ಮೀಟಿ, ಎನ್ಇಜಿಡಿ ಮತ್ತು ಎನ್ಐಸಿ ಸಂಪೂರ್ಣವಾಗಿ ಒಪ್ಪಿಕೊಂಡರೆ, ಅದು ಹೆಚ್ಚು ಪ್ರಸ್ತುತವಾಗುತ್ತದೆ. ಅಪ್ಲಿಕೇಶನ್ನ್ನು ಹೇಗೆ ಸೃಷ್ಟಿಸಲಾಗಿದೆ ಮತ್ತು ಯಾವುದೇ ಸಾರ್ವಜನಿಕ ಅಧಿಕಾರಿಗಳ ಬಳಿ ಈ ಬಗ್ಗೆ ಯಾವುದೇ ಮಾಹಿತಿ ಏಕಿಲ್ಲ ಎಂಬುದನ್ನು ಈಗ ಕಂಡುಹಿಡಿಯಿರಿ’ ಎಂದು ಸಿಐಸಿ ಅಕ್ಟೋಬರ್ ೨೬ ರ ತನ್ನ ಆದೇಶದಲ್ಲಿ ತಿಳಿಸಿತ್ತು.
No comments:
Post a Comment