My Blog List

Sunday, October 18, 2020

ಕೆಲವು ರಾಜ್ಯ, ಜಿಲ್ಲೆಗಳಲ್ಲಿ ಕೊರೋನಾ ಸಮುದಾಯ ಪ್ರಸರಣ: ಸಚಿವ ಹರ್ಷ ವರ್ಧನ್

 ಕೆಲವು ರಾಜ್ಯ, ಜಿಲ್ಲೆಗಳಲ್ಲಿ ಕೊರೋನಾ ಸಮುದಾಯ ಪ್ರಸರಣ: ಸಚಿವ ಹರ್ಷ ವರ್ಧನ್

ನವದೆಹಲಿ: ಸೀಮಿತ ಸಂಖ್ಯೆಯ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಕೋವಿಡ್ -೧೯ ವೈರಸ್ಸಿನ ಸಮುದಾಯ ಹರಡುವಿಕೆ ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ 2020 ಅಕ್ಟೋಬರ್ 18 ಭಾನುವಾರ ಒಪ್ಪಿಕೊಂಡರು. ಆದರೆ ಇದು ದೇಶಾದ್ಯಂತ ಸಂಭವಿಸುತ್ತಿಲ್ಲ’ ಎಂದು ಸಚಿವರು ತಮ್ಮ ಸಾಪ್ತಾಹಿಕ ಸಾಮಾಜಿಕ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಕೆಲವು ಪ್ರದೇಶಗಳಲ್ಲಿ ಸಮುದಾಯ ಪ್ರಸರಣವನ್ನು ಆರಂಭವಾಗಿದೆ ಎಂಬುದಾಗಿ ಒಪ್ಪಿದ ಬಗ್ಗೆ ಪ್ರಶ್ನಿಸಿದಾಗ ಕೇಂದ್ರ ಆರೋಗ್ಯ ಸಚಿವರು ಈ ವಿಷಯವನ್ನು ಒಪ್ಪಿಕೊಂಡರು.

ಕೆಲವು ಜನ ನಿಬಿಡ ಪ್ರದೇಶಗಳಲ್ಲಿ ಇದು ಸಂಭವಿಸುವ ಸಾಧ್ಯತೆ ಇದೆ. ಆದರೆ ದೇಶಾದ್ಯಂತ ಇದು ಸಂಭವಿಸುತ್ತಿಲ್ಲ ಎಂದು ಹರ್ಷ ವರ್ಧನ್ ಹೇಳಿದರು.

ಭಾರತದಲ್ಲಿ ಕೋವಿಡ್ -೧೯ ಸಮುದಾಯ ಪ್ರಸರಣವನ್ನು ಕೇಂದ್ರ ಸರ್ಕಾರವು ಇದುವರೆಗೂ  ನಿರಾಕರಿಸಿದ್ದರೂ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜುಲೈ ತಿಂಗಳಲ್ಲಿ  ರಾಜ್ಯದಲ್ಲಿ ಸಮುದಾಯ ಪ್ರಸರಣವನ್ನು ದೃಢ ಪಡಿಸಿದ್ದರು.

ಕರಾವಳಿಯ ಎರಡು ಪುಟ್ಟ ಗ್ರಾಮಗಳಾದ ಪೂಂತುರಾ ಮತ್ತು ಪುಲ್ಲಿವಿಲಾದಲ್ಲಿ ಸಮುದಾಯ ಪ್ರಸರಣಗಳು ಕಂಡು ಬಂದಿದ್ದುದನ್ನು ಮುಖ್ಯಮಂತ್ರಿ ಪಿಣರಾಯಿ ದೃಢ ಪಡಿಸಿದ್ದರು. ಅಸ್ಸಾಮಿನಲ್ಲಿ ಕೂಡಾ ಜುಲೈ-ಆಗಸ್ಟ್ ತಿಂಗಳಲ್ಲಿ ಸಮುದಾಯ ಪ್ರಸರಣದ ಸುಳಿವು ಲಭಿಸಿತ್ತು.

No comments:

Advertisement