Tuesday, October 27, 2020

೨ + ೨ ಮಾತುಕತೆ: ಬಿಇಸಿಎ ರಕ್ಷಣಾ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ

  + ಮಾತುಕತೆ: ಬಿಇಸಿಎ ರಕ್ಷಣಾ ಒಪ್ಪಂದಕ್ಕೆ
ಭಾರತ-ಅಮೆರಿಕ ಸಹಿ

ನವದೆಹಲಿ: ಲಡಾಖ್ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನೆಯೊಂದಿಗೆ ನಡೆದಿರುವ ಭಾರತೀಯ ಸೇನಾ ಮುಖಾಮುಖಿಯ ಹಿನ್ನೆಲೆಯಲ್ಲಿ ತನ್ನ ಸಾರ್ವಭೌಮತ್ವವನ್ನು ಕಾಪಾಡುವ ಭಾರತದ ಪ್ರಯತ್ನಗಳಲ್ಲಿ ಜೊತೆಯಾಗಿ ನಿಲ್ಲುವುದಾಗಿ ಅಮೆರಿಕ 2020 ಅಕ್ಟೋಬರ್ 27 ಮಂಗಳವಾರ ಇಲ್ಲಿ ಘೋಷಿಸಿತು.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆಗೆ ಪ್ಲಸ್ ಮಾತುಕತೆಯ ಸಂದರ್ಭದಲ್ಲಿ ಭರವಸೆ ನೀಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಚೀನಾದ ಯಾವುದೇ ಬೆದರಿಕೆಯನ್ನು ಎದುರಿಸಲು  ಭಾರತದ ಜೊತೆಗೆ ಅಮೆರಿಕವು ನಿಲ್ಲುತ್ತದೆ ಎಂದು ಹೇಳಿದರು.

ಲಡಾಖ್ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾದ ಸೇನೆ ಮತ್ತು ಭಾರತೀಯ ಸೇನೆಯ ಮುಖಾಮುಖಿ ಹಿನ್ನೆಲೆಯಲ್ಲಿ "ತನ್ನ ಸಾರ್ವಭೌಮತ್ವವನ್ನು ಕಾಪಾಡುವ ಪ್ರಯತ್ನಗಳಲ್ಲಿ ಭಾರತಕ್ಕೆ ತಮ್ಮ ದೇಶದ ದೃಢ ಬೆಂಬಲವನ್ನು ವ್ಯಕ್ತಪಡಿಸಿದರು.

ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರೊಂದಿಗೆ + ಮಾತುಕತೆಯ ಮೂರನೇ ಆವೃತ್ತಿಯನ್ನು ಲಡಾಖ್ ಪ್ರದೇಶದ ತೀವ್ರ ಉದ್ವಿಗ್ನತೆಯ ಸಮಯದಲ್ಲಿ ನಡೆಸಿದರು.

ಭಾರತೀಯ ಪಡೆಗಳು ತಮ್ಮ ವಿವಾದಿತ ಹಿಮಾಲಯನ್ ಗಡಿಯಲ್ಲಿ ಚೀನಾದ ಪಡೆಗಳಿ ಮುಖಾಮುಖಿಯಾಗಿದ್ದು ಬಿಕ್ಟಟ್ಟು ಎದುರಿಸುತ್ತಿವೆ.

ತಮ್ಮ ಮಿಲಿಟರಿಗಳ ನಡುವೆ ಉನ್ನತ ಮಟ್ಟದ ಮಿಲಿಟರಿ ತಂತ್ರಜ್ಞಾನ, ಜಿಯೋಸ್ಪೇಷಿಯಲ್ ನಕ್ಷೆಗಳು ಮತ್ತು ವರ್ಗೀಕೃತ ಉಪಗ್ರಹ ದತ್ತಾಂಶಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವ ಹೆಗ್ಗುರುತು ರಕ್ಷಣಾ ಒಪ್ಪಂದವಾದ ಬಿಇಸಿಎಗೆ ಉಭಯ ಕಡೆಯವರು ಸಹಿ ಹಾಕಿದರು ಮತ್ತು ಭದ್ರತಾ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಹಿಂದೂ ಮಹಾಸಾಗರ-ಶಾಂತ ಸಾಗರ (ಇಂಡೋ-ಪೆಸಿಫಿಕ್) ವಲಯದಲ್ಲಿ ಕಾರ್ಯತಂತ್ರದ ಸಹಕಾರವನ್ನು ಹೆಚ್ಚಿಸಲು ಪ್ರತಿಜ್ಞೆ ಮಾಡಿದರು.

ಉಭಯ ದೇಶಗಳ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮಹತ್ವದ ಮಾತುಕತೆಗಾಗಿ ಪೊಂಪಿಯೊ ಮತ್ತು ಮಾರ್ಕ್ ಟಿ ಎಸ್ಪರ್ ಸೋಮವಾರ ದೆಹಲಿಗೆ ಆಗಮಿಸಿದ್ದರು.

ದಕ್ಷಿಣ ಬ್ಲಾಕ್ನಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ೪೦ ನಿಮಿಷಗಳ ಸಭೆಯಲ್ಲಿ ಲಡಾಖ್ ೧೭೫ ದಿನಗಳ ಬಿಕ್ಕಟ್ಟು ಕುರಿತು ಚರ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

"ಇತ್ತೀಚೆಗೆ ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಸೈನಿಕರಿಗೆ ನಾವು ನಮ್ಮ ಗೌರವವನ್ನು ಅರ್ಪಿಸಿದ್ದೇವೆ ಎಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಪೊಂಪಿಯೊ, ಜೂನ್ ೧೫ ರಂದು ಚೀನಾದ ಸೈನ್ಯದೊಂದಿಗಿನ ಘರ್ಷಣೆಯಲ್ಲಿ ಹುತಾತ್ಮರಾದ ೨೦ ಸೈನಿಕರನ್ನು ಉಲ್ಲೇಖಿಸಿ ಹೇಳಿದರು.

"ಅಮೆರಿಕವು, ತನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಪ್ರಯತ್ನದಲ್ಲಿ ಭಾರತದೊಂದಿಗೆ ನಿಲ್ಲುತ್ತದೆ ... ನಮ್ಮ ಪಾಲುದಾರಿಕೆಗಳನ್ನು ಅನೇಕ ರಂಗಗಳಲ್ಲಿ ವಿಸ್ತರಿಸಲು ನಮ್ಮ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ" ಎಂದು ಅವರು ಹೇಳಿದರು.

"ಕಳೆದ ಎರಡು ದಶಕಗಳಲ್ಲಿ ಅಮೆರಿಕ-ಭಾರತ ಸಂಬಂಧವು ಬಲವನ್ನು ಪಡೆಯುತ್ತಿದೆ, ಆದರೆ ಕಳೆದ ಕೆಲವು ವರ್ಷಗಳಲ್ಲಿ ಇದು ಇನ್ನಷ್ಟು ಹೆಚ್ಚಿದೆ. ಪಾಲುದಾರಿಕೆಗೆ ಒಂದಲ್ಲ, ಆದರೆ ಎರಡು ಕಾರಣಗಳಿವೆ - ಒಂದು ಭಾರತ ಮತ್ತು ಇನ್ನೊಂದು ಅಮೆರಿಕ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.

ಚೀನಾವನ್ನು ತೀವ್ರವಾಗಿ ಖಂಡಿಸಿದ ಪೊಂಪಿಯೊ, "ವುಹಾನ್ನಿಂದ ಬಂದ ಕೊರೋನವೈರಸ್ ಸಾಂಕ್ರಾಮಿಕವು ಚೀನೀ ಕಮ್ಯುನಿಸ್ಟ್ ಪಕ್ಷದ ಬಗ್ಗೆ "ದೃಢವಾದ ಚರ್ಚೆಯನ್ನು" ಪ್ರಾರಂಭಿಸಿದೆ ಎಂದು ಹೇಳಿದರು.

"ನಮ್ಮ ನಾಯಕರು ಮತ್ತು ನಮ್ಮ ನಾಗರಿಕರು ಚೀನಾದ ಕಮ್ಯುನಿಸ್ಟ್ ಪಕ್ಷವು ಪ್ರಜಾಪ್ರಭುತ್ವಕ್ಕೆ ಯಾವುದೇ ಸ್ನೇಹಿತನಲ್ಲ. ಕಾನೂನಿನ ನಿಯಮ, ಪಾರದರ್ಶಕತೆ ಅಥವಾ ಸಂಚರಣೆ ಸ್ವಾತಂತ್ರ್ಯ, ಮುಕ್ತ ಮತ್ತು ಸೌಹಾರ್ದಯುತ ಹಾಗೂ ಸಮೃದ್ಧವಾದ ಇಂಡೋ-ಪೆಸಿಫಿಕ್ ಸೂತ್ರದ ಅಡಿಪಾಯವಾಗಿದೆ ಎಂಬುದಾಗಿ ಹೇಳುವ ಮೂಲಕ ಹೆಚ್ಚಿನ ಸ್ಪಷ್ಟತೆಯನ್ನು ಪೊಂಪಿಯೊ ವ್ಯಕ್ತಪಡಿಸಿದರು.

ನನಗೆ ಸಂತಸವಾಗಿದೆ. ಚೀನಾ ಕಮ್ಯೂನಿಸ್ಟ್ ಪಕ್ಷದಿಂದ (ಸಿ.ಸಿ.ಪಿ) ಮಾತ್ರವಲ್ಲ, ಎಲ್ಲ್ಲ ಬೆದರಿಕೆಗಳ ವಿರುದ್ಧ ಸಹಕಾರವನ್ನು ಬಲಪಡಿಸಲು ಭಾರತ ಮತ್ತು  ಅಮೆರಿಕ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಕೊರೋನವೈರಸ್ ಸಾಂಕ್ರಾಮಿಕ ರೋಗದ ನಂತರ ಅಮೆರಿಕ-ಚೀನಾ ಸಾಲ ಸಂಬಂಧ ಕುಸಿಯಿತು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾವನ್ನು ದೂಷಿಸಿದರು. ಕಳೆದ ತಿಂಗಳು ಕ್ವಾಡ್ ಸಭೆಯಲ್ಲಿ ಪಾಲ್ಗೊಂಡಿದ್ದ ಪೊಂಪಿಯೊ,  ಚೀನಾವನ್ನು ಅದರ ವಿಸ್ತರಣಾವಾದಿ ವರ್ತನೆ, "ಶೋಷಣೆ, ಭ್ರಷ್ಟಾಚಾರ ಮತ್ತು ಬಲಾತ್ಕಾg’ಕ್ಕಾಗಿ ದೂಷಿಸಿದ್ದರು.

"ಸಿ.ಸಿ.ಪಿ (ಚೀನೀ ಕಮ್ಯುನಿಸ್ಟ್ ಪಕ್ಷ) ಶೋಷಣೆ, ಭ್ರಷ್ಟಾಚಾರ ಮತ್ತು ದಬ್ಬಾಳಿಕೆಯಿಂದ ನಮ್ಮ ಜನರು ಮತ್ತು ಪಾಲುದಾರರನ್ನು ರಕ್ಷಿಸಲು ನಾವು ಸಹಕರಿಸುತ್ತಿರುವುದು ಹಿಂದೆಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ ಎಂದು ಪೊಂಪಿಯೊ ಹೇಳಿದರು, ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳು, ಹಾಂಗ್ ಕಾಂಗ್, ತೈವಾನ್ ಜಲಸಂದಿ, ಹಿಮಾಲಯದಲ್ಲಿ ಚೀನಾದ ಕ್ರಮಗಳನ್ನು ಉಲ್ಲೇಖಿಸಿ ಇವು ಕೆಲವೇ ಉದಾಹರಣೆಗಳಾಗಿವೆ ಎಂದು ಅವರು ಹೇಳಿದರು.

No comments:

Advertisement