ಗ್ರಾಹಕರ ಸುಖ-ದುಃಖ

My Blog List

Saturday, October 10, 2020

ಪುಲ್ವಾಮದಲ್ಲಿ ೨ ಉಗ್ರರ ಹತ್ಯೆ, ಕುಲಗಂನಲ್ಲಿ ಗುಂಡಿನ ಕಾಳಗ

 ಪುಲ್ವಾಮದಲ್ಲಿ ಉಗ್ರರ ಹತ್ಯೆ, ಕುಲಗಂನಲ್ಲಿ ಗುಂಡಿನ ಕಾಳಗ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕುಲಗಂ ಜಿಲ್ಲೆಯಲ್ಲಿ ಗುರುವಾರ ಪೊಲೀಸರೊಂದಿಗೆ ನಡೆದ ಘರ್ಷಣೆಯ ಬಳಿಕ ಪುಲ್ವಾಮ ಜಿಲ್ಲೆಯಲ್ಲಿ 2020 ಅಕ್ಟೋಬರ್ 10 ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ  ಎಂದು ಪೊಲೀಸರು ತಿಳಿಸಿದರು.

ದಕ್ಷಿಣ ಕಾಶ್ಮೀರ ಜಿಲ್ಲೆಯ ದಾದೂರಾ ಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್‍ಯಾಚರಣೆ ನಿರತವಾಗಿವೆ ಎಂದು ಅವರು ಹೇಳಿದರು.

ಕುಲಗಂ ಜಿಲ್ಲೆಯ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಲಭಿಸಿದ ಸುಳಿವನ್ನು ಅನುಸರಿಸಿ ಭದ್ರತಾ ಪಡೆಗಳು ಶುಕ್ರವಾರ ರಾತ್ರಿ ಶೋಧ ಕಾರ್ಯಾಚರಣೆ ನಡೆಸಿದವು. ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಶೋಧ ಕಾರ್‍ಯಾಚರಣೆಯು ಗುಂಡಿನ ಘರ್ಷಣೆಯಾಗಿ ಪರಿವರ್ತನೆಗೊಂಡಿತ್ತು.

ಬಳಿಕ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾದರು. ಸತ್ತ ಇಬ್ಬರು ಭಯೋತ್ಪಾದಕರ ಗುರುತು ಪತ್ತೆ ಹಚ್ಚಲಾಗಿಲ್ಲ.

ಪೊಲೀಸರು ಘರ್ಷಣಾ ಸ್ಥಳದಿಂದ ಒಂದು ಎಂ ರೈಫಲ್ ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

No comments:

Advertisement