My Blog List

Thursday, October 29, 2020

ಫ್ರಾನ್ಸ್ ಇಗರ್ಜಿಯಲ್ಲಿ ಚಾಕು ದಾಳಿ: ೩ ಸಾವು, ಮಹಿಳೆಯ ಶಿರಚ್ಛೇದ

 ಫ್ರಾನ್ಸ್ ಇಗರ್ಜಿಯಲ್ಲಿ  ಚಾಕು ದಾಳಿ:
  
ಸಾವು, ಮಹಿಳೆಯ ಶಿರಚ್ಛೇದ

ಪ್ಯಾರಿಸ್: ಫ್ರಾನ್ಸಿನ ನೈಸ್ ನಗರದ ಇಗರ್ಜಿ (ಚರ್ಚ್) ಒಂದರಲ್ಲಿ ಅಮಾನ್ ಚಾಕನ್ನು ಝಳಪಿಸುತ್ತಾ ಬಂದ ಹಲ್ಲೆಕೋರರು ಒಬ್ಬ ಮಹಿಳೆಯ ಶಿರಚ್ಛೇದ ಸೇರಿದಂತೆ ಮೂವರು ಮಹಿಳೆಯರನ್ನು ಹತ್ಯೆಗೈದು ಹಲವಾರು ಮಂದಿಯನ್ನು ಗಾಯಗೊಳಿಸಿದ ಘಟನೆ  2020 ಅಕ್ಟೋಬರ್ 29ರ ಗುರುವಾರ ಘಟಿಸಿತು.

ದಾಳಿಕೋರರನ್ನು ಪೊಲೀಸರು ಬಂಧಿಸುವುದಕ್ಕೆ ಮುನ್ನ ಚಾಕು ದಾಳಿಯಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದವು.

ನೈಸ್ ನಗರದ ಮೇಯರ್ ಕ್ರಿಶ್ಚಿಯನ್ ಎಸ್ಟ್ರೋಸಿ ಅವರು ಇದು ಇಸ್ಲಾಮೀ ಫ್ಯಾಸಿಸ್ಟ್ ದಾಳಿ ಎಂಬುದಾಗಿ ಬಣ್ಣಿಸಿದ್ದು, ಫ್ರೆಂಚ್ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ನಗರದ ನೊಟ್ರೆ ಡೇಮ್ ಇಗರ್ಜಿ ಅಥವಾ ಹತ್ತಿರದಲ್ಲಿ ಚಾಕು ದಾಳಿ ನಡೆದಿದ್ದು, ಪೊಲೀಸರು ದಾಳಿಕೋರರನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಟ್ರೋಸಿ ಟ್ವಿಟರ್ ಸಂದೇಶದಲ್ಲಿ ತಿಳಿಸಿದರು.

ಹಲ್ಲೆ ಘಟನೆ ನಡೆದ ಸ್ವಲ್ಪ ಸಮಯದ ನಂತರ ಪೊಲೀಸರಿಂದ ಬಂಧಿಸಲ್ಪಟ್ಟ ಹಲ್ಲೆಕೋರರು "ಅಲ್ಲಾಹು ಅಕ್ಬರ್ (ದೇವರು ದೊಡ್ಡವ) ಘೋಷಣೆಗಳನ್ನು ಪುನರಾವರ್ತಿಸುತ್ತಿದ್ದರು ಎಂದು ಮೇಯರ್ ಘಟನಾ ಸ್ಥಳದಲ್ಲಿ ಪತ್ರಕರ್ತರಿಗೆ ತಿಳಿಸಿದರು.

ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯೊಬ್ಬರ ಶಿರಚ್ಛೇದ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಫ್ರೆಂಚ್ ರಾಜಕಾರಣಿ ಮರೀನ್ ಲೆ ಪೆನ್ ಕೂಡ ದಾಳಿಯಲ್ಲಿ ಶಿರಚ್ಛೇದ ನಡೆದುದನ್ನು ದೃಢ ಪಡಿಸಿದ್ದಾರೆ.

ದಾಳಿಯ ಬಗ್ಗೆ ತನಿಖೆ ನಡೆಸುವಂತೆ ಕೋರಲಾಗಿದೆ ಎಂದು ಫ್ರೆಂಚ್ ಭಯೋತ್ಪಾದನಾ ನಿಗ್ರಹ ಪ್ರಾಸೆಕ್ಯೂಟರ್ ಇಲಾಖೆ ತಿಳಿಸಿದೆ.

ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿದ ಪೊಲೀಸರು ಇಗರ್ಜಿಯ ಸುತ್ತ ಭದ್ರಕಾವಲು ಹಾಕಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ಪತ್ರಕರ್ತರು ತಿಳಿಸಿದರು. ದಾಳಿ ನಡೆದ ಸ್ಥಳವು ನಗರದ ಪ್ರಮುಖ ಶಾಪಿಂಗ್ ಮಾರ್ಗವಾದ ನೈಸ್ ಜೀನ್ ಮೆಡೆಸಿನ್ ಅವೆನ್ಯೂದಲ್ಲಿದೆ. ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳೂ ಧಾವಿಸಿವೆ.

ಪ್ರಾನ್ಸಿನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನೈಸ್ಗೆ ಆಗಮಿಸಲಿದ್ದಾರೆ ಎಂದು ಎಸ್ಟ್ರೋಸಿ ಹೇಳಿದರು.

ಪ್ಯಾರಿಸ್ಸಿನಲ್ಲಿ ಫ್ರೆಂಚ್ ಮಧ್ಯಮ ಶಾಲಾ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ಎಂಬ ವ್ಯಕ್ತಿಯೊಬ್ಬನನ್ನು ಚೆಚೆನ್ ಮೂಲದ ವ್ಯಕ್ತಿ ಶಿರಚ್ಛೇದ ಘಟನೆಯಿಂದ ಫ್ರಾನ್ಸ್ ಇನ್ನೂ ತತ್ತರಿಸುತ್ತಿರುವಾಗಲೇ ದಾಳಿ ಸಂಭವಿಸಿದೆ.

ನಾಗರಿಕ ಪಾಠದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವ್ಯಂಗ್ಯಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದಕ್ಕಾಗಿ ಪ್ಯಾಟಿಯನ್ನು ಶಿಕ್ಷಿಸಲು ಬಯಸುತ್ತೇನೆ ಎಂದು ದಾಳಿಕೋರರು ಹೇಳಿದ್ದರು.

ನೈಸ್ ದಾಳಿಯ ಉದ್ದೇಶವೇನು, ಅಥವಾ ವ್ಯಂಗ್ಯ ಚಿತ್ರ ಘಟನೆಗೆ ಏನಾದರೂ ಸಂಬಂಧವಿದೆಯೇ ಮತ್ತು ಮುಸ್ಲಿಮರು ಇದನ್ನು ಧರ್ಮನಿಂದೆಯೆಂದು ಪರಿಗಣಿಸಿದ್ದಾರೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಪ್ಯಾಟಿಯ ಹತ್ಯೆಯ ನಂತರ, ಫ್ರೆಂಚ್ ಅಧಿಕಾರಿಗಳು, ಜನ ಸಾಮಾನ್ಯರ ಬೆಂಬಲದೊಂದಿಗೆ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸುವ ಹಕ್ಕನ್ನು ಪುನಃ ಪ್ರತಿಪಾದಿಸಿದ್ದಾರೆ, ಮತ್ತು ಹತ್ಯೆಗೀಡಾದ ಶಿಕ್ಷಕನಿಗೆ ಒಗ್ಗಟ್ಟಿನಿಂದ ಮೆರವಣಿಗೆ ಮೂಲಕ ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಫ್ರೆಂಚ್ ಪೊಲೀಸರ ನಿಲುವು ಮುಸ್ಲಿಂ ಪ್ರಪಂಚದ ಕೆಲವು ಭಾಗಗಳಲ್ಲಿ ಕೋಪವನ್ನು ಹುಟ್ಟು ಹಾಕಿದೆ. ಕೆಲವು ಸರ್ಕಾರಗಳು ಫ್ರೆಂಚ್ ನಾಯಕ ಎಮ್ಯಾನುಯೆಲ್ ಮ್ಯಾಕ್ರೋನ್ ಇಸ್ಲಾಂ ವಿರೋಧಿ ಕಾರ್ಯಸೂಚಿಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿವೆ.

No comments:

Advertisement