My Blog List

Wednesday, October 14, 2020

ಜಮ್ಮು-ಕಾಶ್ಮೀರ, ಲಡಾಖ್‌ಗೆ ೫೨೦ ಕೋಟಿ ರೂಪಾಯಿಗಳ ವಿಶೇಷ ಕೊಡುಗೆ

  ಜಮ್ಮು-ಕಾಶ್ಮೀರಲಡಾಖ್ಗೆ ೫೨೦ ಕೋಟಿ ರೂಪಾಯಿಗಳ ವಿಶೇಷ ಕೊಡುಗೆ

ನವದೆಹಲಿಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಖ್ಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್ಆರ್ಎಲ್ಎಂಅಡಿಯಲ್ಲಿ ೫೨೦ ಕೋಟಿ ರೂಪಾಯಿ ಮೊತ್ತದ ವಿಶೇಷ ಕೊಡುಗೆಗೆ ಕೇಂದ್ರ ಸಚಿವ ಸಂಪುಟ ೨೦೨೦ ಅಕ್ಟೋಬರ್ ೧೪ರ ಬುಧವಾರ ಅನುಮೋದನೆ ನೀಡಿತು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್  ವಿಷಯ ತಿಳಿಸಿದರು ವಿಶೇಷ ಕೊಡುಗೆಯ ಅಡಿಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು’ ಎಂದು ಅವರು ನುಡಿದರು.

‘ಕೇಂದ್ರ ಸರ್ಕಾರ ಜಾರಿಗೊಳಿಸಿದ ಎಲ್ಲ ಯೋಜನೆಗಳು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರಲಡಾಖ್ನಲ್ಲಿ  ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕು ಎಂಬ ಉದ್ದೇಶದಿಂದ ವಿಶೇಷ ಕೊಡುಗೆ ಘೋಷಿಸಲಾಗಿದೆ’ ಎಂದು ಜಾವಡೇಕರ್ ಹೇಳಿದರು.

ಎನ್ಆರ್ಎಲ್ಎಂಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆಗ್ರಾಮೀಣ ಪ್ರದೇಶ ಜನರಿಗೆ ಸುಸ್ಥಿರ ಜೀವನೋಪಾಯ ಖಾತ್ರಿಪಡಿಸುವುದು ಹಾಗೂ ಅವರಿಗೆ ಸುಲಭವಾಗಿ ಹಣಕಾಸು ನೆರವು ಸಿಗುವಂತೆ ಮಾಡುವುದು ಸಹ ಯೋಜನೆ ಉದ್ದೇಶವಾಗಿದೆ.

ಅನುಮೋದನೆಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ನೂತನ ಶಿಕ್ಷಣ ನೀತಿಯಡಿ (ಎನ್ಇಪಿರೂಪಿಸಿರುವ ಸ್ಟಾರ್ಸ್’ ಯೋಜನೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು.

ಶಿಕ್ಷಣ ಸಚಿವಾಲಯ ಅಡಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು  ಯೋಜನೆಯನ್ನು ಜಾರಿಗೊಳಿಸುವುದುಹಿಮಾಚಲ ಪ್ರದೇಶರಾಜಸ್ಥಾನಮಹಾರಾಷ್ಟ್ರಮಧ್ಯಪ್ರದೇಶಕೇರಳ ಹಾಗೂ ಒಡಿಶಾಗಳಲ್ಲಿ  ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಸಚಿವ ಜಾವಡೇಕರ್ ತಿಳಿಸಿದರು.

No comments:

Advertisement