My Blog List

Sunday, October 11, 2020

೮ ಕಡಲ ತೀರಗಳಿಗೆ ಸ್ವಚ್ಛತೆಯ ‘ಬ್ಲೂಫ್ಲ್ಯಾಗ್’

ಕಡಲ ತೀರಗಳಿಗೆ ಸ್ವಚ್ಛತೆಯ ಬ್ಲೂಫ್ಲ್ಯಾಗ್

ನವದೆಹಲಿ: ಕರ್ನಾಟಕದ ಪಡುಬಿದ್ರಿ ಮತ್ತು ಕಾಸರಕೋಡು ಸೇರಿ ಐದು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಕಡಲ ತೀರಗಳು ಪರಿಶುದ್ಧತೆಗಾಗಿ ನೀಡಲಾಗುವ ಅಂತಾರಾಷ್ಟ್ರೀಯ ಬ್ಲೂಫ್ಲ್ಯಾಗ್ ಮನ್ನಣೆಗೆ ಆಯ್ಕೆಯಾಗಿವೆ. ಕರಾವಳಿ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಡೆನ್ಮಾರ್ಕ್ ನೇತೃತ್ವದ ಅಂತಾರಾಷ್ಟ್ರೀಯ ತೀರ್ಪುಗಾರರ ತಂಡ ಮೆಚ್ಚುಗೆ ವ್ಯಕ್ತಪಡಿಸಿತು..

ಕರ್ನಾಟಕದ ಉಡುಪಿ ಜಿಲ್ಲೆಯ ಪಡುಬಿದ್ರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು, ಕಪ್ಪಡ್ (ಕೇರಳ), ಶಿವರಾಜಪುರ (ದ್ವಾರಕಾ-ಗುಜರಾತ್), ಘೋಘ್ಲಾ(ದಿಯು), ಋಷಿಕೊಂಡ (ಆಂಧ್ರಪ್ರದೇಶ), ಗೋಲ್ಡನ್ ಬೀಚ್ (ಪುರಿ-ಒಡಿಶಾ) ಮತ್ತು ರಾಧಾನಗರ (ಅಂಡಮಾನ್-ನಿಕೋಬಾರ್) ಬಹುಮಾನಕ್ಕೆ ಪಾತ್ರವಾದ ಕರಾವಳಿ ಪ್ರದೇಶಗಳು.

ಯಾವ ದೇಶವೂ ಒಂದೇ ವರ್ಷ ಕಡಲ ತೀರಗಳಿಗೆ ಬ್ಲೂಫ್ಲ್ಯಾಗ್ ಮನ್ನಣೆ ಪಡೆದಿಲ್ಲ. ಇದು ನಮ್ಮ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಿಗೆ ದೊರೆತ ಜಾಗತಿಕ ಮನ್ನಣೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿ ಹೆಮ್ಮೆ ವ್ಯಕ್ತ ಪಡಿಸಿದರು.

No comments:

Advertisement