ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್ ಇನ್ನಿಲ್ಲ
ಬೆಂಗಳೂರು: ಯಕ್ಷಗಾನದ ಹಿರಿಯ ಕಲಾವಿದ, ಮದ್ದಳೆಯ ಮಾಂತ್ರಿಕರೆಂದೇ ಖ್ಯಾತರಾದ ಹಿರಿಯಡ್ಕ ಗೋಪಾಲ ರಾವ್ (೧೦೧) ಬೆಂಗಳೂರಿನ ಸ್ವಗೃಹ ಒಂತಿಬೆಟ್ಟುವಿನಲ್ಲಿ 2020 ಅಕ್ಟೋಬರ್ 17ರ ಶನಿವಾರ ನಿಧನರಾದರು. ಅವರು ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದರು.
ಗೋಪಾಲರಾವ್
ಅವರು ೧೯೧೯ರ ಡಿಸೆಂಬರ್ ೧೫ರಂದು ಉಡುಪಿ ತಾಲ್ಲೂಕಿನ ಹಿರಿಯಡ್ಕದಲ್ಲಿ ಜನಿಸಿದರು. ಹಿರಿಯಡ್ಕ ಮೇಳದಲ್ಲಿ
ಮದ್ದಳೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಯಕ್ಷಗಾನದ ಬಡಗುತಿಟ್ಟಿನಲ್ಲಿ ಏರು ಮದ್ದಳೆ ಬಾರಿಸುವುದರಲ್ಲಿ
ಅವರು ನಿಷ್ಣಾತರು. ಹಿರಿಯ ಭಾಗವತರಾದ ಶೇಷಗಿರಿ ರಾವ್ ಅವರ ಭಾಗವತಿಗೆ ಮದ್ದಳೆ ಬಾರಿಸುತ್ತಿದ್ದ ಪರಿ
ಇಂದಿಗೂ ಮರೆಯುವಂತಿಲ್ಲ ಎಂದು ರಾವ್ ಅವರ ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಾರೆ.
ರಾವ್
ಅವರು ಪೆರ್ಡೂರು ಹಾಗೂ ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಶಿವರಾಮ ಕಾರಂತರ ಒಡನಾಡಿಯಾಗಿಯೂ
ಗುರುತಿಸಿಕೊಂಡಿದ್ದರು. ೨೦೧೮ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ
ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.
ಹಿರಿಯಡ್ಕ
ಗೋಪಾಲರಾವ್ ಅವರ ಕುರಿತು ಡಾ.ಕೆ.ಎಂ.ರಾಘವ ನಂಬಿಯಾರ್ ಅವರು ‘ರಂಗ ವಿದ್ಯೆಯ ಹೊಲಬು’ ಪುಸ್ತಕವನ್ನು
ಬರೆದಿದ್ದಾರೆ. ೨೦೧೮ರಲ್ಲಿ ಸಾಲಿಗ್ರಾಮ ಕಾರ್ಕಡದ
ಗೆಳೆಯರ ಬಳಗದ ವತಿಯಿಂದ ಡಾ.ಶಿವರಾಮ ಕಾರಂತರ ಹುಟ್ಟುಹಬ್ಬದ ಆಚರಣೆಯ ಸಂದರ್ಭ ‘ಕಾರಂತ ಪುರಸ್ಕಾರ’ವನ್ನು
ನೀಡಿ ಗೋಪಾಲ ರಾವ್ ಅವರನ್ನು ಗೌರವಿಸಲಾಗಿತ್ತು.
No comments:
Post a Comment