ಗ್ರಾಹಕರ ಸುಖ-ದುಃಖ

My Blog List

Saturday, November 14, 2020

ಸೋತರೂ ಟ್ರಂಪ್‌ಗೆ ಎರಡನೇ ಅವಧಿ: ಶ್ವೇತಭವನದ ಯೋಜನೆ

 ಸೋತರೂ ಟ್ರಂಪ್‌ಗೆ ಎರಡನೇ ಅವಧಿ: ಶ್ವೇತಭವನದ ಯೋಜನೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ಸೋತಿರುವುದರ ಹೊರತಾಗಿಯೂ ಅವರಿಗೆ ಎರಡನೇ ಅವಧಿಗೆ ಸೇವೆ ಸಲ್ಲಿಸುವ ಅವಕಾಶ ಒದಗಿಸಲು ಶ್ವೇತಭವನ ಯೋಜಿಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು 2020 ನವೆಂಬರ್ 14ರ ಶನಿವಾರ ತಿಳಿಸಿದರು.

"ಟ್ರಂಪ್ ಅವರಿಗೆ ಎರಡನೇ ಅವಧಿ ಇರುತ್ತದೆ ಎಂಬ ಊಹೆಯ ಮೇರೆಗೆ ನಾವು ಶ್ವೇತಭವನದಲ್ಲಿ ಮುಂದುವರೆಯುತ್ತಿದ್ದೇವೆ ಎಂದು ಹೊರಹೋಗುವ ಅಧ್ಯಕ್ಷರ ವ್ಯಾಪಾರ ಸಲಹೆಗಾರ ಪೀಟರ್ ನವರೊ ಫಾಕ್ಸ್ ಬಿಸಿನೆಸ್ ನೆಟ್‌ವರ್ಕ್‌ನಲ್ಲಿ ಮಾತನಾಡುತ್ತಾ ಹೇಳಿದರು.

ನವೆಂಬರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಜೋ ಬಿಡೆನ್ ಅವರು ಸೋಲಿಸಿರುವುದಾಗಿ ಅಮೆರಿಕದ ಮಾಧ್ಯಮ ಘೋಷಿಸಿದ ಒಂದು ವಾರದ ಬಳಿಕವೂ ಟ್ರಂಪ್ ಅವರು ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ.

ಚುನಾವಣಾ ಫಲಿತಾಂಶ ಬಳಿಕ ಅಧ್ಯಕ್ಷರು ಕೆಲವು ಸಾರ್ವಜನಿಕ ಸಭೆಗಳಲ್ಲಿ ಹಾಜರಾಗಿದ್ದಾರೆ ಮತ್ತು ಹಲವಾರು ರಾಜ್ಯಗಳಲ್ಲಿ ಚುನಾವಣಾ ವಂಚನೆಯ ಆರೋಪ ಮಾಡಿ ಕಾನೂನು ಸಮರ ಪ್ರಾರಂಭಿಸಿದ್ದಾರೆ. ಆದರೆ ತಮ್ಮ ಆರೋಪಗಳಿಗೆ ಅವರು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.

"ನಾವು ಇಲ್ಲಿ ಕೋರುತ್ತಿರುವುದು ಪರಿಶೀಲಿಸಬಹುದಾದ ಮತಪತ್ರಗಳು, ಪ್ರಮಾಣೀಕರಿಸಬಹುದಾದ ಮತಪತ್ರಗಳು ಮತ್ತು ಸಾಕ್ಷಿಗಳು ಸಹಿ ಮಾಡಿದ ಅಫಿಡವಿಟ್‌ಗಳ ಅಡಿಯಲ್ಲಿ ಹೆಚ್ಚುತ್ತಿರುವ ವಂಚನೆ ಆರೋಪಗಳ ಬಗೆಗಿನ  ತನಿಖೆ ಎಂದು ನವರೋ ಹೇಳಿದರು. ಟ್ರಂಪ್ ಬೆಂಬಲಿಗರ ಆಧಾರರಹಿತ ಪ್ರತಿಪಾದನೆಯನ್ನು ಅವರು ಪುನರಾವರ್ತಿಸಿದರು.

ಅಮೆರಿಕದ ಹಿರಿಯ ಫೆಡರಲ್ ಮತ್ತು ರಾಜ್ಯ ಚುನಾವಣಾ ಅಧಿಕಾರಿಗಳು ಗುರುವಾರ ಹ್ಯಾಕರ್‌ಗಳು ಮತವನ್ನು ಹಾಳುಮಾಡಲು ಸಮರ್ಥರಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ ಮತ್ತು ಹೆಚ್ಚಿನ ವಿಶ್ವ ನಾಯಕರು ವಿಜಯಕ್ಕಾಗಿ ಬಿಡೆನ್ ಅವರನ್ನು ಅಭಿನಂದಿಸಿದ್ದಾರೆ.

No comments:

Advertisement