Saturday, November 14, 2020

ಶೆಲ್ ದಾಳಿ: ಪಾಕ್ ರಾಜತಾಂತ್ರಿಕರಿಗೆ ಭಾರತ ಬುಲಾವ್, ಪ್ರತಿಭಟನೆ

 ಶೆಲ್ ದಾಳಿ: ಪಾಕ್ ರಾಜತಾಂತ್ರಿಕರಿಗೆ ಭಾರತ ಬುಲಾವ್, ಪ್ರತಿಭಟನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನದ ಸೈನಿಕರು ನಡೆಸಿದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯ ವಿರುದ್ಧ ತೀವ್ರ ಪ್ರತಿಭಟನೆ ಸಲ್ಲಿಸಲು ಭಾರತವು 2020 ನವೆಂಬರ್ 14ರ ಶನಿವಾರ ಪಾಕಿಸ್ತಾನದ ರಾಜತಾಂತ್ರಿಕರನ್ನು (ಚಾರ್ಜ್ ಡಿ ಅಫೈರ್) ಬುಲಾವ್ ನೀಡಿ ಕರೆಸಿಕೊಂಡು ಪ್ರತಿಭಟನೆ ವ್ಯಕ್ತ ಪಡಿಸಿತು.

ಪಾಕ್ ಸೇನೆಯ ಕದನ ವಿರಾಮ ಉಲ್ಲಂಘನೆಯು ತೀವ್ರ ಗುಂಡಿನ ವಿನಿಮಯಕ್ಕೆ ಕಾರಣವಾದ ಒಂದು ದಿನದ ಬಳಿಕ ಪಾಕಿಸ್ತಾನ ಹೈಕಮಿಷನ್‌ನ ಕಾರ್ಯಕಾರಿ ಮುಖ್ಯಸ್ಥ ಅಫ್ತಾಬ್ ಹಸನ್ ಖಾನ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರೆಸಿತು.

ಭಾರತ ನಡೆಸಿದ್ದ ಪ್ರತಿ ದಾಳಿಯಲ್ಲಿ ಕನಿಷ್ಠ ಎಂಟು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದರು ಮತ್ತು ಒಂದು ಡಜನ್ ಮಂದಿ ಗಾಯಗೊಂಡಿದ್ದರು.

ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಅನೇಕ ವಲಯಗಳಲ್ಲಿ ಪಾಕಿಸ್ತಾನೀ ಪಡೆಗಳು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿದ್ದರ ಕುರಿತು ಪಾಕಿಸ್ತಾನದ ರಾಜತಾಂತ್ರಿಕರಿಗೆ  ತೀವ್ರ ಪ್ರತಿಭಟನೆ ಸಲ್ಲಿಸಲಾಯಿತು.

ಅಪ್ರಚೋದಿತ ಶೆಲ್ ದಾಳಿಯ ನಾಲ್ವರು ಮುಗ್ಧ ನಾಗರಿಕರು ಸಾವನ್ನಪ್ಪಿದರು ಮತ್ತು ೧೯ ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

"ಪಾಕಿಸ್ತಾನದ ಪಡೆಗಳು ಮುಗ್ಧ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ಭಾರತವು ಖಂಡಿಸುತ್ತದೆ" ಎಂದು ಹೇಳಿಕೆ ತಿಳಿಸಿದೆ.

"ಭಾರತೀಯ ನಾಗರಿಕರ ಮೇಲೆ ಫಿರಂಗಿ ದಾಳಿ ಸಹಿತವಾಗಿ ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸಿ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಸಲಾದ ಸಂಘಟಿತ ಗುಂಡಿನ ದಾಳಿಯ ಮೂಲಕ ಶಾಂತಿ ಭಂಗಗೊಳಿಸಲು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಪಾಕಿಸ್ತಾನವು ಭಾರತದ ಹಬ್ಬದ ಸಂದರ್ಭವನ್ನು ಆರಿಸಿಕೊಂಡಿರುವುದು ಅತ್ಯಂತ ಶೋಚನೀಯವಾಗಿದೆ ಎಂದು ಹೇಳಿಕೆ ದೀಪಾವಳಿ ಹಬ್ಬವನ್ನು ಉಲ್ಲೇಖಿಸಿದೆ.

"ಪಾಕಿಸ್ತಾನ ಪಡೆಗಳು ನಡೆಸಿದ ಕದನವಿರಾಮ ಉಲ್ಲಂಘನೆ ಹಾಗೂ ಗಡಿಯಾಚೆಗಿನ ಭಯೋತ್ಪಾದಕ ಒಳನುಸುಳುವಿಕೆಗೆ ಪಾಕಿಸ್ತಾ ನೀಡುತ್ತಿರುವ ನಿರಂತರ ಬೆಂಬಲವನ್ನು ಭಾರತ ತೀವ್ರವಾಗಿ ಪ್ರತಿಭಟಿಸಿತು ಎಂದು ಹೇಳಿಕೆ ತಿಳಿಸಿದೆ.

ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ಬಳಸಲು ಅನುಮತಿ ನೀಡದೇ ಇರುವ ದ್ವಿಪಕ್ಷೀಯ ಬದ್ಧತೆಯನ್ನು ಭಾರತವು ನೆನಪಿಸಿತು.

ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಉಭಯ ಕಡೆಯಿಂದ ಭಾರೀ ಕದನ  ನಡೆಸಿದ ನಂತರ ಶನಿವಾರ, ಉರಿ ಮತ್ತು ಗುರೆಜ್ ವಲಯಗಳಲ್ಲಿನ ನಿಯಂತ್ರಣ ರೇಖೆಯಲ್ಲಿ ಆತಂP ಭರಿತ ಶಾಂತಿ ನೆಲೆಸಿತ್ತು.

ಪಾಕಿಸ್ತಾನದ ಪಡೆಗಳ ಅಪ್ರಚೋದಿತ ಗುಂಡಿನ ದಾಳಿಯ ನಂತರ, ಭಾರತೀಯ ಸೇನೆಯು ಫಿರಂಗಿ ಬಂದೂಕುಗಳು ಮತ್ತು ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳನ್ನು ಬಳಸಿ ಸೇಡು ತೀರಿಸಿಕೊಂಡಿತ್ತು.

ಪಾಕಿಸ್ತಾನದ ಮದ್ದುಗುಂಡು ಮತ್ತು ಇಂಧನ ಸಂಗ್ರಹಾಗಾರಗಳು ಮತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳು ಭಾರತದ ಶೆಲ್ ದಾಳಿಯಿಂದ ನಾಶವಾದ ಗುರಿಗಳಲ್ಲಿ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತೀಯ ಮತ್ತು ಚೀನಾದ ಪಡೆಗಳೊಂದಿಗೆ ಮುಖಾಮುಖಿಯಾಗಿರುವ ಸಮಯದಲ್ಲಿ ದೀಪಾವಳಿಯ ಮುನ್ನಾದಿನದಂದು ಭಾರೀ ಪ್ರಮಾಣದ ಗುಂಡಿನ ವಿನಿಮಯವು ನಿಯಂತ್ರಣ ರೇಖೆಯ ಮೇಲೆ ನಡೆದಿತ್ತು.

No comments:

Advertisement