Tuesday, November 24, 2020

೪೩ ಮೊಬೈಲ್ ಆಪ್‌ಗಳಿಗೆ ಕೇಂದ್ರ ನಿಷೇಧ

 ೪೩ ಮೊಬೈಲ್ ಆಪ್ಗಳಿಗೆ ಕೇಂದ್ರ ನಿಷೇಧ

ನವದೆಹಲಿ: "ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಕ್ಷಣೆ, ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ನಿರತವಾಗಿರುವುದಕ್ಕಾಗಿ ೪೩ ಮೊಬೈಲ್ ಅಪ್ಲಿಕೇಶನ್ಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 2020 ನವೆಂಬರ್  24ರ ಮಂಗಳವಾರ ನಿಷೇಧಿಸಿತು.

ಭಾರತದಲ್ಲಿ ಬಳಕೆದಾರರಿಗಾಗಿ ಬಹುತೇಕ ಚೀನಾಕ್ಕೆ ಸಂಬಂಧಿಸಿರುವ ಅಪ್ಲಿಕೇಶನ್ಗಳನ್ನು ನಿಷೇಧಿಸುವ ನಿರ್ಧಾರವನ್ನು ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಸಮಗ್ರ ವರದಿಗಳ ಬಳಿಕ ತೆಗೆದುಕೊಳ್ಳಲಾಗಿದೆ ಎಂದು ಐಟಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ವಿ ವರ್ಕ್ ಚೈನಾ, ಅಲಿ ಎಕ್ಸ್ಪ್ರೆಸ್, ಕ್ಯಾಮ್ ಕಾರ್ಡ್ ಮತ್ತು ಸ್ನ್ಯಾಕ್ ವಿಡಿಯೋ ಕೇಂದ್ರದಿಂದ ನಿಷೇಧಕ್ಕೆ ಒಳಗಾಗಿರುವ ಅಪ್ಲಿಕೇಶನ್ಗಳಲ್ಲಿ ಕೆಲವು.

ವರ್ಷದ ಆರಂಭದಲ್ಲಿ ಜೂನ್ ೨೯ ರಂದು ೫೯ ಮೊಬೈಲ್ ಆಪ್ಗಳನ್ನು ಮತ್ತು ಬಳಿಕ ಸೆಪ್ಟೆಂಬರ್ ೨ರಂದು  ೧೧೮ ಆಪ್ಗಳನ್ನು ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೯ ಅಡಿಯಲ್ಲಿ ನಿಷೇಧಿಸಿತ್ತು. ಹೆಚ್ಚಾಗಿ ಚೀನೀ ಆಪ್ಗಳನ್ನು ನಿಷೇಧಿಸಿರುವ ಕ್ರಮವನ್ನು, ಪೂರ್ವ ಲಡಾಕ್ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಮುಖಾಮುಖಿಯಾಗಿರುವ ನೆರೆಯ ರಾಷ್ಟ್ರದ ಮೇಲೆ ಭಾರತ ನಡೆಸಿರುವ ಡಿಜಿಟಲ್ ದಾಳಿ ಎಂದು ಬಣ್ಣಿಸಲಾಗಿದೆ.

ಹಿಂದೆಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿವೆ ಎಂಬ ಕಾರಣಕ್ಕಾಗಿ ಮೊಬೈಲ್ ಅಪ್ಲಿಕೇಶನ್ಗಳಾದ ಟಿಕ್ಟಾಕ್, ಯುಸಿ ಬ್ರೌಸರ್, ವೀಚಾಟ್ ಮತ್ತು ಲುಡೋ ಇವುಗಳನ್ನು ಸರ್ಕಾರ ನಿಷೇಧಿಸಿತ್ತು.

ಅಧಿಕಾರಿಗಳ ಪ್ರಕಾರ, ಹಿಂದೆ ನಿಷೇಧಿಸಲಾದ ಅಪ್ಲಿಕೇಶನ್ಗಳು  ಭಾರತೀಯ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತಿವೆ ಎಂದು ವರದಿಯಾಗಿದೆ. "ಅವರ ದುಷ್ಕೃತ್ಯಗಳನ್ನು ತಜ್ಞರು ಪ್ರತ್ಯೇಕಿಸಿದ್ದಾರೆ. ಅವರು ಸ್ಥಳ ಮಾಹಿತಿಯನ್ನು ತೆಗೆದುಕೊಳ್ಳುತ್ತಾರೆ, ಚೀನಾದಲ್ಲಿನ ಸರ್ವರ್ಗಳಿಗೆ ಫೈಲ್ಗಳನ್ನು ವರ್ಗಾಯಿಸುತ್ತಾರೆ ಎಂದು ಹೇಳಲಾಗಿದೆ. ಇದಲ್ಲದೆ, ಬ್ಯೂಟಿ ಪ್ಲಸ್ ಮತ್ತು ಸೆಲ್ಫಿ ಕ್ಯಾಮೆರಾದಂತಹ ಬ್ಯೂಟಿ ಆಪ್ಗಳು ಅಶ್ಲೀಲ ವಿಷಯವನ್ನು ಒಳಗೊಂಡಿರುವುದರಿಂದ ಅಪಾಯಕಾರಿಯಾಗಿವೆ ಎಂದು ವರದಿಯಾಗಿದೆ ಎಂದು ಜೂನ್ ತಿಂಗಳಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

" ಅಪ್ಲಿಕೇಶನ್ಗಳಲ್ಲಿ ಹೆಚ್ಚಿನವು ಚೀನೀ ಮೂಲದವು ಅಥವಾ ಚೀನೀ ಕಂಪೆನಿಗಳಿಂದ ನಿಯಂತ್ರಿಸಲ್ಪಡುತ್ತವೆಯಾದರೂ, ಸಿಂಗಾಪುರ ಮತ್ತು ಹಾಂಗ್ ಕಾಂಗ್ ಮೂಲದ ಇತg ಅಪ್ಲಿಕೇಶನ್ಗಳೂ ಇವೆ ಎಂದು ಅಧಿಕಾರಿ ಹೇಳಿದರು.

ಕ್ರಮವು ಕೋಟ್ಯಂತರ ಭಾರತೀಯ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ನಿರ್ಧಾರವು ಭಾರತೀಯ ಸೈಬರ್ಪೇಸ್ ಸುರಕ್ಷತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದ ನಿರ್ಧಾರವಾಗಿದೆ ಎಂದು ಸೆಪ್ಟೆಂಬರಿನಲ್ಲಿ ಆಪ್ಗಳ ನಿಷೇಧದ ನಂತರ ಐಟಿ ಸಚಿವಾಲಯ ಹೇಳಿತ್ತು.

ನಿಷೇಧಿತ ೪೩ ಅಪ್ಲಿಕೇಶನ್ಗಳ ಪಟ್ಟಿ:

* ಅಲಿಸಪ್ಲಿಯರ್ಸ್ ಮೊಬೈಲ್ ಅಪ್ಲಿಕೇಶನ್

* ಅಲಿಬಾಬಾ ವರ್ಕ್ಬೆಂಚ್

* ಅಲಿಎಕ್ಸ್ ಪ್ರೆಸ್ - ಸ್ಮಾರ್ಟರ್ ಶಾಪಿಂಗ್, ಬೆಟ್ ಲಿವಿಂಗ್

* ಅಲಿಪೇ ಕ್ಯಾಷಿಯರ್

* ಲಾಲಮೋವ್ ಇಂಡಿಯಾ - ಡೆಲಿವರಿ ಅಪ್ಲಿಕೇಶನ್

* ಡ್ರೈವ್ ವಿತ್ ಲಾಲಮೋವ್ ಇಂಡಿಯಾ

* ಸ್ನ್ಯಾಕ್ ವಿಡಿಯೋ

* ಕ್ಯಾಮ್ಕಾರ್ಡ್ - ಬಿಸಿನೆಸ್ ಕಾರ್ಡ್ ರೀಡರ್

* ಕ್ಯಾಮ್ಕಾರ್ಡ್ - ಬಿಸಿಆರ್ (ವೆಸ್ಟರ್ನ್)

* ಸೋಲ್ -ಫಾಲೋ ದಿ ಸೋಲ್ ಟು ಫೈಂಡ್ ಯು

* ಚೈನೀಸ್ ಸೋಷಿಯಲ್ - ಫ್ರೀ ಆನ್ಲೈನ್ ಡೇಟಿಂಗ್ ವೀಡಿಯೊ ಅಪ್ಲಿಕೇಶನ್ ಅಂಡ್ ಚಾಟ್

* ಡೇಟ್ ಇನ್ ಏಷ್ಯಾ - ಡೇಟಿಂಗ್ ಅಂಡ್ ಚಾಟ್ ಫಾರ್ ಏಷ್ಯನ್ ಸಿಂಗಲ್ಸ್

* ವೀಡೇಟ್-ಡೇಟಿಂಗ್ ಅಪ್ಲಿಕೇಶನ್

* ಫ್ರೀ ಡೇಟಿಂಗ್ ಆಪ್ -ಸಿಂಗೋಲ್, ಸ್ಟಾರ್ಟ್ ಯುವರ್ ಡೇಟ್

* ಅಡೋರ್ ಅಪ್ಲಿಕೇಶನ್

* ಟ್ರೂಲಿ ಚೈನೀಸ್ - ಚೈನೀಸ್ ಡೇಟಿಂಗ್ ಅಪ್ಲಿಕೇಶನ್

* ಟ್ರೂಲಿ ಏಷ್ಯನ್ - ಏಷ್ಯನ್ ಡೇಟಿಂಗ್ ಅಪ್ಲಿಕೇಶನ್

* ಚೈನ್ಲೋವ್: ಡೇಟಿಂಗ್ ಅಪ್ಲಿಕೇಶನ್ ಫಾರ್ ಚೈನೀಸ್ ಸಿಂಗಲ್ಸ್

* ಡೇಟ್ಮೈ ಏಜ್: ಚಾಟ್, ಮೀಟ್, ಡೇಟ್ ಮೆಚೂರ್ ಸಿಂಗಲ್ಸ್ ಆನ್ಲೈನ್

* ಏಷ್ಯನ್ ಡೇಟ್: ಫೈಂಡ್ ಏಷ್ಯನ್ ಸಿಂಗಲ್ಸ್

* ಫ್ಲರ್ಟ್ವಿಶ್: ಚಾಟ್ ವಿದ್ ಸಿಂಗಲ್ಸ್

* ಗೈಸ್ ಓನ್ಲಿ ಡೇಟಿಂಗ್: ಗೇ ಚಾಟ್

* ಟ್ಯೂಬಿಟ್: ಲೈವ್ ಸ್ಟ್ರೀಮ್ಸ್

* ವಿ ವರ್ಕ್ ಚೈನಾ

* ಫಸ್ಟ್ ಲವ್ ಲೈವ್- ಸೂಪರ್ ಹಾಟ್ ಲೈವ್ ಬ್ಯೂಟೀಸ್ ಲೈವ್ ಆನ್ಲೈನ್

* ರೆಲಾ - ಲೆಸ್ಬಿಯನ್ ಸೋಷಿಯಲ್ ನೆಟ್ವರ್ಕ್

* ಕ್ಯಾಷಿಯರ್ ವಾಲೆಟ್

* ಮ್ಯಾಂಗೋ ಟಿವಿ

* ಎಂಜಿಟಿವಿ-ಹುನಾನ್ಟಿವಿ ಅಪೀಷಿಯಲ್ ಟಿವಿ ಆಪ್

* ವೀಟಿವಿ - ಟಿವಿ ವರ್ಷನ್

* ವೀಟಿವಿ - ಸಿಡ್ರಾಮಾ, ಕೆಡ್ರಾಮಾ ಅಂಡ್ ಮೋರ್

* ವೀಟಿವಿ ಲೈಟ್

* ಲಕ್ಕಿ ಲೈವ್-ಲೈವ್ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್

* ಟಾವೊಬಾವೊ ಲೈವ್

* ಡಿಂಗ್ಟಾಕ್

* ಐಡೆಂಟಿಟಿ ವಿ

* ಐಸೊಲ್ಯಾಂಡ್ : ಆಶಸ್ ಆಫ್ ಟೈಮ್

* ಬಾಕ್ಸ್ಸ್ಟಾರ್ (ಅರ್ಲಿ ಆಕ್ಸೆಸ್)

* ಹೀರೋಸ್ ಇವಾಲ್ವ್ಡ್

* ಹ್ಯಾಪಿ ಫಿಶ್

* ಜೆಲ್ಲಿಪಾಪ್ ಮ್ಯಾಚ್- ಡೆಕೋರೇಟ್ ಯುವರ್ ಡ್ರೀಮ್ ಐಲ್ಯಾಂಡ್

* ಮಂಚ್ಕಿನ್ ಮ್ಯಾಚ್: ಮ್ಯಾಜಿಕ್ ಹೋಮ್ ಬಿಲ್ಡಿಂಗ್

* ಕಾಂಕ್ವಿಸ್ಟಾ ಆನ್ಲೈನ್

No comments:

Advertisement