My Blog List

Monday, November 9, 2020

ಬಿಡೆನ್ ಅಜೆಂಡಾಕ್ಕೆ ಜಾರ್ಜಿಯಾದಲ್ಲಿ ಟ್ರಂಪ್ ತಡೆ

 ಬಿಡೆನ್ ಅಜೆಂಡಾಕ್ಕೆ ಜಾರ್ಜಿಯಾದಲ್ಲಿ ಟ್ರಂಪ್ ತಡೆ

ವಾಷಿಂಗ್ಟನ್: ಆರೋಗ್ಯ ಕಾಳಜಿ (ಹೆಲ್ತ ಕೇರ್) ಕಾರ್‍ಯಕ್ರಮದ ವ್ಯಾಪ್ತಿ ವಿಸ್ತರಣೆ, ಹವಾಮಾನ ವೈಪರೀತ್ಯದ ವಿರುದ್ಧ ಹೋರಾಟ ಮತ್ತು ಕೊರೋನವೈರಸ್ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ನೆರವು ನೀಡುವಂತಹ ಪ್ರಮುಖ ಡೆಮಾಕ್ರಟಿಕ್ ಆದ್ಯತೆಗಳನ್ನು ಜಾರಿಗೆ ತರುವ ಅಧ್ಯಕ್ಷ-(ಚುನಾಯಿತ) ಜೋ ಬಿಡೆನ್ ಅವರ ಯೋಜನೆಗಳಿಗೆ ಜನವರಿಯಲ್ಲಿ ಜಾರ್ಜಿಯಾದಲ್ಲಿ ತಡೆ ಬೀಳುವ ಸಾಧ್ಯತೆಗಳಿವೆ ಎಂದು ವರದಿಗಳು  2020 ನವೆಂಬರ್ 09ರ ಸೋಮವಾರ ಹೇಳಿವೆ.

ಸೆನೆಟಿನಲ್ಲಿ ಬಹುಮತವನ್ನು ಸಾಧಿಸುವ ಕಾರ್ಯದಲ್ಲಿ ಡೆಮಾಕ್ರ್ರಟಿಕ್ ಪಕ್ಷ ಹಿಂದೆ ಬಿದ್ದಿದ್ದು, ಹೌಸ್ ಆಫ್ ರೆಪ್ರಸೆಂಟೇಟಿವ್‌ನಲ್ಲಿ ಮೊದಲಿದ್ದ ಸ್ಥಾನಗಳನ್ನೂ ಕಳೆದುಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷವು ಉತ್ತಮ ಫಲಿತಾಂಶದೊಂದಿಗೆ ಜೋ ಬಿಡೆನ್ ಅವರ ಶಾಸಕಾಂಗ ಉಪಕ್ರಮಗಳಿಗೆ ಅಂಕುಶ ಹಾಕುವ ಸಾಮರ್ಥ ಪಡೆದುಕೊಂಡಿದೆ.

ಸಾಂಪ್ರದಾಯಿಕವಾಗಿ ರಿಪಬ್ಲಿಕನ್-ಒಲವು ಹೊಂದಿರುವ ರಾಜ್ಯದಲ್ಲಿ ಈಗಿರುವ ಇಬ್ಬರು ರಿಪಬ್ಲಿಕನ್ ಸೆನೆಟರ್‌ಗಳನ್ನು ಪದಚ್ಯುತಗೊಳಿಸುವ ಶತಪ್ರಯತ್ನವನ್ನು ಬಿಡೆನ್ ಅವರ ಪಕ್ಷವು ನಡೆಸುತ್ತಿದೆ. ಅಲ್ಲಿ ಮತ ಎಣಿಕೆ ಮುಂದುವರೆದಂತೆ ಬಿಡೆನ್ ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ ಅತ್ಯಂತ ಕಡಿಮೆ ಅಂತರದ ಮುನ್ನಡೆಯಲ್ಲಿದ್ದಾರೆ.

 "ನಾವು ಜಾರ್ಜಿಯಾವನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ, ನಂತರ ನಾವು ಜಗತ್ತನ್ನು ಬದಲಾಯಿಸುತ್ತೇವೆ ಎಂದು ಸೆನೆಟ್ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ನ್ಯೂಯಾರ್ಕಿನಲ್ಲಿ ಶನಿವಾರ ಘೋಷಿಸಿದರು. ಆದರೆ ಜಾರ್ಜಿಯಾದ ರಿಪಬ್ಲಿಕನ್ ಗವರ್ನರ್ ಬ್ರಿಯಾನ್ ಕೆಂಪ್ ಅವರು ಜನವರಿಯಲ್ಲಿ ಹೆಚ್ಚಿನ ಮತ ಎಣಿಕೆಯನ್ನು ಪ್ರತಿಪಾದಿಸಿದರು. ರಿಪಬ್ಲಿಕನ್ನರಿಗೆ ಒಗ್ಗೂಡುವಂತೆ ಕರೆ ನೀಡಿದ ಅವರು "ಹೋರಾಟವು ಮುಗಿದಿಲ್ಲ ಎಂದು ಘೋಷಿಸಿದರು.

ರಿಪಬ್ಲಿಕನ್ನರು ಮುಂದಿನ ವರ್ಷ ಸೆನೆಟಿನ ೧೦೦ ಸ್ಥಾನಗಳಲ್ಲಿ ಕನಿಷ್ಠ ೫೦ ಸ್ಥಾನಗಳನ್ನು ಹೊಂದಲು ಮುಂದಾಗಿದ್ದಾರೆ, ಇದು ಉತ್ತರ ಕೆರೊಲಿನಾ ಮತ್ತು ಅಲಾಸ್ಕಾದ ಹಿಡಿತದಲ್ಲಿ ಮುನ್ನಡೆಯನ್ನು ನೀಡುತ್ತದೆ. ಡೆಮೋಕ್ರಾಟ್‌ಗಳಿಗೆ ಸೆನೆಟ್ ಮೇಲೆ ನಿಯಂತ್ರಣ ಸಾಧಿಸಲು ಜಾರ್ಜಿಯಾದ ಎರಡು ಹೋರಾಟಗಳಲ್ಲಿ ಪಡೆಯುವ ಗೆಲುವು ನಿರ್ಣಾಯಕವಾಗಿದೆ. ಸೆನೆಟಿನಲ್ಲಿ ಉಪಾಧ್ಯಕ್ಷ (ಚುನಾಯಿv) ಕಮಲಾ ಹ್ಯಾರಿಸ್ ಸೆನೆಟಿನಲ್ಲಿ ಟೈ ಬ್ರೇಕಿಂಗ್ ಮತ ಚಲಾಯಿಸಲು ಸಾಧ್ಯವಾಗುತ್ತದೆ.

ಎರಡನೇ ಅವಧಿಗೆ ಪ್ರಯತ್ನಿಸುತ್ತಿರುವ ಜಾರ್ಜಿಯಾ ರಿಪಬ್ಲಿಕನ್ ಸೆನೆಟರ್ ಡೇವಿಡ್ ಪರ್ಡ್ಯೂ ಶೇಕಡಾ ೪೯. ಮತಗಳನ್ನು ಪಡೆದಿದ್ದಾರೆ, ಡೆಮೋಕ್ರಾಟ್ ಜಾನ್ ಒಸಾಫ್‌ಗೆ ಈವರೆಗೆ ಬಂದಿರುವುದು ಶೇ, ೪೭. ಮಾತ್ರ. ಇತರ ಸ್ಪರ್ಧೆಯಲ್ಲಿ, ಬ್ಲ್ಯಾಕ್ ಡೆಮೋಕ್ರಾಟ್ ರೆವರೆಂಡ್ ರಾಫೆಲ್ ವಾರ್ನಾಕ್ ಅವರು ೩೨. ಮತ  ಪಡೆದಿದ್ದರೆ, ರಿಪಬ್ಲಿಕನ್ ಸೆನೆಟರ್ ಕೆಲ್ಲಿ ಲೋಫ್ಲರ್ ಶೇ. ೨೫. ಮತ ಪಡೆದಿದ್ದಾರೆ. ಮೂರನೆಯ ರಿಪಬ್ಲಿಕನ್, ಪ್ರತಿನಿಧಿ ಡೌಗ್ ಕಾಲಿನ್ಸ್, ಶೇ.೨೦ ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಬಂದಿದ್ದಾರೆ.

ಡೆಮೋಕ್ರಾಟ್‌ಗಳಿಗೆ ಅವಕಾಶವಿದೆ

ಜಾರ್ಜಿಯಾ ಎರಡು ದಶಕಗಳಿಂದ ಡೆಮಾಕ್ರಟಿಕ್ ಸೆನೆಟರ್‌ನ್ನು ಆಯ್ಕೆ ಮಾಡಿಲ್ಲ, ಆದರೆ ಜನಸಂಖ್ಯೆ ಬದಲಾವಣೆ ಮತ್ತು ಇತ್ತೀಚಿನ ಸ್ಪರ್ಧೆಗಳಲ್ಲಿ ಕ್ರಮೇಣ ಸುಧಾರಣೆ ಕಂಡಿರುವ ಡೆಮಾಕ್ರಟಿಕ್ ಪ್ರದರ್ಶನಗಳು ಪಕ್ಷಕ್ಕೆ ಜನವರಿ ರನ್‌ಆಫ್‌ಗಳನ್ನು ಗೆಲ್ಲುವ ಅವಕಾಶವಿರುವುದನ್ನು ತೋರಿಸುತ್ತವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಆದರೆ ಇದು ಹೆಚ್ಚಾಗಿ ಮತದಾರರನ್ನು ತೊಡಗಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಎಮೋರಿ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಆಂಡ್ರಾ ಗಿಲ್ಲೆಸ್ಪಿ ಹೇಳಿದರು.

"ಯಾವ ಪಕ್ಷವು ಉತ್ತಮ ಮತದಾನದ ಕಾರ್ಯಾಚರಣೆಯನ್ನು ಹೊಂದಿದೆಯೋ ಅದು ಗೆಲ್ಲುತ್ತದೆ ಎಂದು ಗಿಲ್ಲೆಸ್ಪಿ ಹೇಳಿದರು.

ಪರ್ಡ್ಯೂ ಮತ್ತು ಲೋಫ್ಲರ್ ಇಬ್ಬರೂ ಟ್ರಂಪ್ ಮಿತ್ರರು. ಆದರೆ ಸಹವರ್ತಿ ರಿಪಬ್ಲಿಕನ್ ಕಾಲಿನ್ಸ್ ಅವರನ್ನು ಸೋಲಿಸಲು ಲೋಫ್ಲರ್ ವರ್ಷ ಪ್ರಬಲ ಅಭಿಯಾನ ನಡೆಸಿದರು.

ಬಿಡೆನ್ ಗುರಿಗಳು

ರಿಪಬ್ಲಿಕನ್ನರು ಸೆನೆಟ್ ಬಹುಮತವನ್ನು ಕಾಯ್ದುಕೊಂಡರೆ ಬಿಡೆನ್ ಅವರ ಕ್ಯಾಬಿನೆಟ್ ಪಿಕ್ಸ್ ಮತ್ತು ನೀತಿ ಪ್ರಸ್ತಾಪಗಳು ಕಿರಿಕಿರಿ ಎದುರಿಸಬೇಕಾಗುತ್ತದೆ. ಒಬಾಮಕೇರ್ ಆರೋಗ್ಯ ಕಾರ್ಯಕ್ರಮವನ್ನು ಬಲಪಡಿಸಲು ಮತ್ತು ವಿಸ್ತರಿಸಲು ಡೆಮಾಕ್ರಟಿಕ್ ಪಕ್ಷ ಪ್ರತಿಜ್ಞೆ ಮಾಡಿತ್ತು. ಇಂಗಾಲದ ಹೊರಸೂಸುವಿಕೆಯನ್ನು ನಿಗ್ರಹಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಬಹು-ಟ್ರಿಲಿಯನ್ ಡಾಲರ್ ಯೋಜನೆಯ ಬಗ್ಗೆ ಅವರು ಪ್ರಚಾರ ಮಾಡಿದರು ಮತ್ತು ಅವರು ನಿಗಮಗಳು ಮತ್ತು ಶ್ರೀಮಂತ ವ್ಯಕ್ತಿಗಳ ಮೇಲೆ ತೆರಿಗೆ ಹೆಚ್ಚಿಸಲು ಒಲವು ತೋರಿದ್ದರು.

ಆದರೆ ಗುರಿಗಳು ಸೆನೆಟ್ ಉಸ್ತುವಾರಿ ರಿಪಬ್ಲಿಕನ್ನರೊಂದಿಗೆ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ. ರಿಪಬ್ಲಿಕನ್ನರು ವಿರೋಧಿಸುವ ಯಾವುದೇ ಹೆಚ್ಚುವರಿ ಕೊರೊನಾವೈರಸ್ ನೆರವಿನ ಬಗೆಗೂ ಕಠಿಣ ಚೌಕಾಶಿ ನಡೆಯುವ ಸಾಧ್ಯತೆ ಇದೆ.

No comments:

Advertisement