My Blog List

Monday, November 9, 2020

ಭಾರತ: ಕೊರೋನಾ ಚೇತರಿಕೆ ಶೇ.೯೨.೫೬ಕ್ಕೆ ಏರಿಕೆ

 ಭಾರತ: ಕೊರೋನಾ ಚೇತರಿಕೆ ಶೇ.೯೨.೫೬ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಕೊರೋನಾ -೧೯ ಪ್ರಕರಣಗಳಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ ೯೨.೫೬ಕ್ಕೆ ಏರಿದೆ, ಒಟ್ಟು ಚೇತರಿಸಿದವರ ಸಂಖ್ಯೆ ೭೯ ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ನವೆಂಬರ್ 09ರ ಸೋಮವಾರ ತಿಳಿಸಿತು.

ಹೊಸದಾಗಿ ೪೫,೯೦೩ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ ೮೫,೫೩,೬೫೭ಕ್ಕೆ ಏರಿದೆ. ಹೊಸದಾಗಿ ೪೯೦ ಸಾವುಗಳು ದಾಖಲಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ ,೨೬,೬೧೧ ಕ್ಕೆ ಏರಿದೆ ಎಂದು ಬೆಳಿಗ್ಗೆ ಗಂಟೆಗೆ ನವೀಕರಿಸಿದ ಮಾಹಿತಿ ತಿಳಿಸಿತು.

ಕಾಯಿಲೆಯಿಂದ ಚೇತರಿಸಿಕೊಂಡ ಒಟ್ಟು ಜನರ ಸಂಖ್ಯೆ ೭೯,೧೭,೩೭೩ ಕ್ಕೆ ಏರಿದ್ದು, ರಾಷ್ಟ್ರೀಯ ಚೇತರಿಕೆ ಪ್ರಮಾಣ  ಶೇಕಡಾ ೯೨.೫೬ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇಕಡಾ .೪೮ ರಷ್ಟಿದೆ.

ಕೋವಿಡ್-೧೯ರ ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ ೧೧ ನೇ ದಿನಕ್ಕೆ ಲಕ್ಷಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕೊರೋನವೈರಸ್ ಸೋಂಕಿನ ,೦೯,೬೭೩ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ .೯೬ ರಷ್ಟಿದೆ ಎಂದು ಮಾಹಿತಿ ತಿಳಿಸಿದೆ.

ಭಾರತದ ಕೋವಿಡ್-೧೯ರ ಒಟ್ಟು ಪ್ರಕರಣಗಳು ಆಗಸ್ಟ್ ರಂದು ೨೦ ಲಕ್ಷ, ಆಗಸ್ಟ್ ೨೩ ರಂದು ೩೦ ಲಕ್ಷ ಮತ್ತು ಸೆಪ್ಟೆಂಬರ್ ರಂದು ೪೦ ಲಕ್ಷ ದಾಟಿತ್ತು.

ಇದು ಸೆಪ್ಟೆಂಬರ್ ೧೬ ರಂದು ೫೦ ಲಕ್ಷ, ಸೆಪ್ಟೆಂಬರ್ ೨೮ ರಂದು ೬೦ ಲಕ್ಷ, ಅಕ್ಟೋಬರ್ ೧೧ ರಂದು ೭೦ ಲಕ್ಷ ಮತ್ತು ಅಕ್ಟೋಬರ್ ೨೯ ರಂದು ೮೦ ಲಕ್ಷ ದಾಟಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ -ಐಸಿಎಂಆರ್) ಪ್ರಕಾರ, ಒಟ್ಟು ೧೧,೮೫,೭೨,೧೯೨ ಮಾದರಿಗಳನ್ನು ನವೆಂಬರ್ ರವರೆಗೆ ಪರೀಕ್ಷಿಸಲಾಗಿದ್ದು, ಭಾನುವಾರ ,೩೫,೪೦೧ ಪರೀಕ್ಷೆಗಳನ್ನು ನಡೆಸಲಾಗಿದೆ.

೪೯೦ ಹೊಸ ಸಾವುನೋವುಗಳಲ್ಲಿ ಮಹಾರಾಷ್ಟ್ರದಿಂದ ೧೨೫, ದೆಹಲಿಯಿಂದ ೭೭, ಪಶ್ಚಿಮ ಬಂಗಾಳದಿಂದ ೫೯, ಉತ್ತರಪ್ರದೇಶದಿಂದ ೨೬, ಕೇರಳದಿಂದ ೨೪, ಕರ್ನಾಟಕದಿಂದ ೨೨ ಮತ್ತು ತಮಿಳುನಾಡಿನಿಂದ ೨೦ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಿಂದ ೪೫,೨೪೦, ಕರ್ನಾಟಕದಿಂದ ೧೧,೩೯೧, ತಮಿಳುನಾಡಿನಿಂದ ೧೧,೩೪೪, ಪಶ್ಚಿಮ ಬಂಗಾಳದಿಂದ ,೨೯೪, ಉತ್ತರ ಪ್ರದೇಶದಿಂದ ,೨೦೬, ದೆಹಲಿಯಿಂದ ,೯೮೯, ಆಂಧ್ರಪ್ರದೇಶದಿಂದ ,೭೯೧ ಪಂಜಾಬ್‌ನಿಂದ ,೩೧೮ ಮತ್ತು ಗುಜರಾತ್‌ನಿಂದ ,೭೬೦ ಸೇರಿದಂತೆ ಒಟ್ಟು ,೨೬,೬೧೧ ಸಾವುಗಳು ವರದಿಯಾಗಿದೆ.

ಶೇಕಡಾ ೭೦ ಕ್ಕಿಂತ ಹೆಚ್ಚು ಸಾವುಗಳು ಸಹ ಆರೋಗ್ಯ ಸಮಸ್ಯೆಗಳ ಕಾರಣ ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಒತ್ತಿ ಹೇಳಿತು.

No comments:

Advertisement