ದಂತಕಥೆ ಬಂಗಾಳಿ ನಟ ಸೌಮಿತ್ರ ಚಟರ್ಜಿ ಇನ್ನಿಲ್ಲ
ಕೋಲ್ಕತ: ಸುದೀರ್ಘ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಖ್ಯಾತ ಬಂಗಾಳಿ ನಟ ಸೌಮಿತ್ರ ಚಟರ್ಜಿ(೮೫) ಅವರು 2020 ನವೆಂಬರ್ 15ರ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.
ಚಟರ್ಜಿ
ಅವರಿಗೆ ಕೋವಿಡ್-19 ಸೋಂಕು ತಗುಲಿದ್ದು
ದೃಢಪಟ್ಟಿತ್ತು. ಬಳಿಕ ಅಕ್ಟೋಬರ್ 6ರಂದು ಅವರನ್ನು
ಆಸ್ಪತ್ರೆಗೆ ಸೇರಿಸಲಾಗಿತ್ತು. ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು.
ಆದರೆ, ಹಲವು ಕಾಯಿಲೆಗಳಿದ್ದರಿಂದ ಬಳಲುತ್ತಿದ್ದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ.
ಸೌಮಿತ್ರ
ಚಟರ್ಜಿ ಅವರು ಈದಿನ ಮಧ್ಯಾಹ್ನ ೧೨.೧೫ಕ್ಕೆ ಬಿಲೆ
ವ್ಯೂವ್ ಕ್ಲಿನಿಕ್ಕಿನಲ್ಲಿ ನಿಧನರಾದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿತು.
ಸತ್ಯಜಿತ್
ರೇ ನಿರ್ದೇಶನದ ಅಪೂರ್ ಸಂಸಾರಂನಲ್ಲಿ ವಯಸ್ಕ ಅಪುವಿನ
ಪಾತ್ರ ನೋಡಿದವರಿಗೆ ಸೌಮಿತ್ರ ಚಟರ್ಜಿಯ ಪ್ರತಿಭೆ ಕಣ್ಣಮುಂದೆ ಬರುತ್ತದೆ. ಅಪುವಿನ ಕಥೆ ಮುಂದುವರಿದ ಮೂರನೇ ಭಾಗವಿದು. ರೇ ಅವರ ೧೪
ಚಿತ್ರಗಳಲ್ಲಿ ಚಟರ್ಜಿ ಅವರು ನಟಿಸಿದ್ದಾರೆ.
‘ಅಭಿಜಾನ್’ (೧೯೬೨),
‘ಚಾರುಲತಾ’ (೧೯೬೪),
‘ಅರಣ್ಯೆರ್ ದಿನ್ ರಾತ್ರಿ’
(೧೯೬೪), ‘ಆಶಾನಿ ಸಂಕೇತ್’
(೧೯೭೨), ‘ಸೋನರ್ ಕೆಲ್ಲಾ’
(೧೯೭೪) ‘ಜೋಯ್ ಬಾಬಾ ಫೇಲುನಾಥ್’
(೧೯೭೮) ಸೇರಿದಂತೆ ಬಂಗಾಳಿ, ಹಿಂದಿಯ ಒಟ್ಟು ೧೦೫ ಚಿತ್ರಗಳಲ್ಲಿ ಚಟರ್ಜಿ ನಟಿಸಿದ್ದರು. ‘ಸ್ತ್ರೀ ಕಾ ಪಾತ್ರ’ ಅವರು ನಿರ್ದೇಶಿಸಿದ ಚಿತ್ರ. ಹೀಗೆ ಸೌಮಿತ್ರ ಚಟರ್ಜಿ (ಸೌಮಿತ್ರ ಚಟ್ಟೋಪಾಧ್ಯಾಯ) ಭಾರತೀಯ ಚಿತ್ರರಂಗದಲ್ಲಿ ಸಾಧನೆ ಮತ್ತು ಕೀರ್ತಿಯ ಶಿಖರವೇರಿದ ನಟ.
ಸಾಧನೆಗೆ
ತಕ್ಕಂತೆ ಪ್ರಶಸ್ತಿ, ಪುರಸ್ಕಾರಗಳೂ ಅವರನ್ನು ಹುಡುಕಿಕೊಂಡು ಬಂದಿದ್ದವು. ೧೯೯೯ರಲ್ಲಿ ಫ್ರಾನ್ಸ್ ಸರ್ಕಾರದಿಂದ ಆರ್ಡ್ರೆ ಡೆಸ್ ಆರ್ಟ್ಸ್ ಅಟ್ ಡೆಸ್ ಲೆಟ್ರೆಸ್ (೧೯೯೯), ಪದ್ಮಭೂಷಣ (೨೦೦೪), ಸಂಗೀತ ನಾಟಕ ಅಕಾಡೆಮಿಯಿಂದ ಟಾಗೋರ್ ರತ್ನ (೨೦೧೨), ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (೨೦೧೨), ಫ್ರಾನ್ಸ್ ಸರ್ಕಾರದಿಂದ ‘ಲೀಜನ್ ದ ಹಾನರ್’ (೨೦೧೮) ಪುರಸ್ಕಾರಗಳು ಅವರಿಗೆ ಸಂದಿದ್ದವು. ಇವುಗಳಲ್ಲದೇ ಮೂರು ರಾಷ್ಟ್ರಪ್ರಶಸ್ತಿ, ಬಂಗಾಳಿ ಚಲನಚಿತ್ರ ಪತ್ರಕರ್ತರ ಸಂಘದಿಂದ ೮ ಪ್ರಶಸ್ತಿಗಳು ಅವರ
ಮುಡಿಗೇರಿತ್ತು. ಅವರು ಪತ್ನಿ ದೀಪಾ ಚಟರ್ಜಿ, ಇಬ್ಬರು ಮಕ್ಕಳನ್ನು ಅಗಲಿದರು.
ಅವರು
ಈ ವರ್ಷ ನಟಿಸಿದ ಕೊನೆಯ ಚಿತ್ರ ಸ್ರೋಬ್ನೇರ್ ಧಾರಾ. ಅದರಲ್ಲಿ ಅಮಿತವ ಸರ್ಕಾರ್ ಪಾತ್ರ ನಿರ್ವಹಿಸಿದ ಚಟರ್ಜಿ ಸಾಧನೆಯ ನೆನಪುಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.
No comments:
Post a Comment