My Blog List

Monday, November 16, 2020

ಟ್ರಂಪ್, ಬಿಡೆನ್ ಬೆಂಬಲಿಗರು ಮುಖಾಮುಖಿ; ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

 ಟ್ರಂಪ್, ಬಿಡೆನ್ ಬೆಂಬಲಿಗರು ಮುಖಾಮುಖಿ; ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾದವನ್ನು ಬೆಂಬಲಿಸಿ ಅವರ ಬೆಂಬಲಿಗರು 2020 ನವೆಂಬರ್ 14ರ ಶನಿವಾರ ಹಲವೆಡೆ ಪ್ರದರ್ಶನ ನಡೆಸಿದ್ದು, ವೇಳೆ ಹಿಂಸಾಚಾರ ಭುಗಿಲೆದ್ದಿತು.

ಒಂದೆಡೆ ಟ್ರಂಪ್ ಬೆಂಬಲಿಗರು ಚುನಾವಣಾ ಫಲಿತಾಂಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದಡೆ ಜೋ ಬಿಡೆನ್ ಗೆಲುವನ್ನು ಸಂಭ್ರಮಿಸಿ ಅವರ ಬೆಂಬಲಿಗರು ಮೆರವಣಿಗೆ ನಡೆಸಿದರು. ಆದರೆ  ಶ್ವೇತಭವನದಿಂದ ಸ್ವಲ್ಪ ದೂರದಲ್ಲಿ ಎರಡು ಬಣಗಳು ಮುಖಾಮುಖಿಯಾಗಿ,  ಶಾಂತಿಯುತ ಪ್ರದರ್ಶನ ಹಿಂಸಾಚಾರಕ್ಕೆ ತಿರುಗಿತು.

ವೇಳೆಬ್ಲ್ಯಾಕ್ ಲೈಫ್ ಮ್ಯಾಟರ್ಪ್ರತಿಭಟನಕಾರೊಬ್ಬರು ಚಾಕು ಇರಿತಗೊಳಗಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ ಎಂದು ವರದಿಯೊಂದು ಹೇಳಿದೆ.

ಟ್ರಂಪ್ ವಿರೋಧಿ ಪ್ರತಿಭನಕಾರರು ಟ್ರಂಪ್ ಬೆಂಬಲಿಗರ ಮೇಲೆ ಮೊಟ್ಟೆ ಎಸೆದಿದ್ದಾರೆ. ಬ್ಯಾನರ್,ಟೋಪಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿ ತಿಳಿಸಿತು.

ಗಲಭೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೊದಲ್ಲಿ ಎರಡು ಬಣದ ಬೆಂಬಲಿಗರು ಪರಸ್ಪರ ಹೊಡೆದಾಡುತ್ತಿರುವುದು ಕಂಡುಬಂದಿತು.

ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್,‘ ನ್ಯೂಸ್ ಚಾನೆಲ್ ಗಳು ಜೋ ಬಿಡೆನ್ ಬೆಂಬಲಿಗರು ನಡೆಸಿದ ಮೆರವಣಿಗೆಯನ್ನು ಪ್ರಸಾರ ಮಾಡುತ್ತಿಲ್ಲ. ಕೇವಲ ನನ್ನ ಬೆಂಬಲಿಗರ ಪೋಟೊಗಳನ್ನು ತೋರಿಸುತ್ತಿದ್ದಾರೆ. ನಮ್ಮನ್ನು ಮಾಧ್ಯಮದವರೂ ಕೂಡ ತಡೆಯುತ್ತಿದ್ದಾರೆಎಂದು ದೂರಿದರು.

No comments:

Advertisement