My Blog List

Tuesday, November 3, 2020

ಜಂಗಲ್ ರಾಜ್ ತಿರಸ್ಕರಿಸಿ: ಪ್ರಧಾನಿ ಮೋದಿ

 ಜಂಗಲ್ ರಾಜ್ ತಿರಸ್ಕರಿಸಿ: ಪ್ರಧಾನಿ ಮೋದಿ

ಪಾಟ್ನಾ: ರಾಜ್ಯದ ಜನರುಭಾರತ್ ಮಾತಾ ಕಿ ಜೈಅಥವಾಜೈ ಶ್ರೀ ರಾಮ್ಎಂದು ಜಪಿಸುವುದನ್ನು ಬಿಹಾರದಲ್ಲಿಜಂಗಲ್ ರಾಜ್ತಂದವರು ಬಯಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 03ರ ಮಂಗಳವಾರ ಸಹರ್ಸಾದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ನವೆಂಬರ್ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತಕ್ಕಾಗಿ,  ದಿನದ ಎರಡನೇ ಭಾಷಣದಲ್ಲಿ, ಪ್ರತಿಪಕ್ಷಗಳು ತಂದಜಂಗಲ್ ರಾಜ್ಅಥವಾಅರಾಜಕತೆಯನ್ನು ತಿರಸ್ಕರಿಸುವಂತೆ ಪ್ರಧಾನಿ ಮತದಾರರನ್ನು ಒತ್ತಾಯಿಸಿದರು.

ನೀವು ಭಾರತ್ ಮಾತಾ ಕಿ ಜೈ ಅಥವಾ ಜೈ ಶ್ರೀ ರಾಮ್ ಎಂದು ಹೇಳಲು ಇಷ್ಟಪಡದ ಜನರ ಗುಂಪು ಇದೆ. ಅವರೆಲ್ಲರೂ ಈಗ ಒಗ್ಗೂಡಿ ಬಿಹಾರದ ಜನರಿಂದ ಮತಗಳನ್ನು ಕೇಳುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ  ಅಂತಹ ಜನರಿಗೆ ಸೂಕ್ತವಾದ ಉತ್ತರವನ್ನು ನೀಡುವ ಅವಶ್ಯಕತೆಯಿದೆಎಂದು ಪ್ರಧಾನಿ ಮೋದಿ ಸಹರ್ಸಾದಲ್ಲಿ ಹೇಳಿದರು.

ಪೂರ್ವ ರಾಜ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಬಿಹಾರ ಮತ್ತೆ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ (ಎನ್ಡಿಎ) ಮತ ಚಲಾಯಿಸಲಿದೆ ಎಂದು ಮೋದಿ ಪ್ರತಿಪಾದಿಸಿದರು. ರಾಜ್ಯದ ಅಭಿವೃದ್ಧಿ ಹಾಗೂ ಬಡವರಿಗಾಗಿ ಕೆಲಸ ಮಾಡಲು ಎನ್ಡಿಎ ಸರ್ಕಾರ ಬದ್ಧವಾಗಿದೆ ಎಂದು ಸಹರ್ಸಾದಲ್ಲಿ ಪ್ರಧಾನಿ ಹೇಳಿದರು.

ಭಾರತ್ ಮಾತಾ ಕಿ ಜೈ ಎಂದು ಜಪಿಸುವಂತೆ ಜನರನ್ನು ಒತ್ತಾಯಿಸುವ ಮೂಲಕ ಭಾಷಣವನ್ನು ಪ್ರಾರಂಭಿಸಿz ಪ್ರಧಾನಿ, "ಬಿಹಾರದ ಜನರು ಎನ್ಡಿಎ ಸರ್ಕಾರವನ್ನು ರಚಿಸಲು ನಿರ್ಧರಿಸಿದ್ದಾರೆಎಂದು ಹೇಳಿ, ಮೈಥಿಲಿಯಲ್ಲಿ ಕೆಲವು ಸಾಲುಗಳನ್ನು ಹೇಳಿದರು.

ಬಿಹಾರದ ಪ್ರತಿಯೊಬ್ಬ ನಾಗರಿಕನು ಬಿಹಾರದ ಸಾಮರ್ಥ್ಯಕ್ಕೆ ವಿರುದ್ಧವಾಗಿ ಜಂಗಲ್ ರಾಜ್ ಮಾಡಿದ ದ್ರೋಹವನ್ನು ಚೆನ್ನಾಗಿ ತಿಳಿದಿದ್ದಾನೆ. ಬಡವರ ಹೆಸರನ್ನು ಪದೇ ಪದೇ ಜಪಿಸುವವರು ಬಡವರನ್ನು ಚುನಾವಣೆಯಿಂದ ದೂರವಿಡುತ್ತಿದ್ದರು. ಬಿಹಾರದ ಬಡವರಿಗೆ ತಮ್ಮದೇ ಆದ ಸರ್ಕಾರ ರಚಿಸುವ ಹಕ್ಕು ಇರಲಿಲ್ಲಎಂದು ಅವರು ಹೇಳಿದರು.

ಬಿಹಾರದ ಜನರು, ಆತ್ಮ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಮತ್ತು ಆತ್ಮನಿರ್ಭರ ಬಿಹಾರಕ್ಕೆ ಬದ್ಧರಾಗಿದ್ದಾರೆ ಎಂದು ಪ್ರಧಾನಿ ಹೇಳಿದರು. "ವರ್ಷಗಳಲ್ಲಿ, ಬಿಹಾರದ ಅಡಿಪಾಯವನ್ನು ಹಾಕಲಾಗಿದೆ, ಇದು ಹೊಸ ಉದಯೋನ್ಮುಖ, ಸ್ವಾವಲಂಬಿ ಮತ್ತು ಅದ್ಭುತವಾದ ಭೂತಕಾಲದಿಂದ ಸ್ಫೂರ್ತಿ ಅದು ಪಡೆದಿದೆ. ಭದ್ರವಾದ ಅಡಿಪಾಯದಲ್ಲಿ ಭವ್ಯ ಮತ್ತು ಆಧುನಿಕ ಬಿಹಾರವನ್ನು ನಿರ್ಮಿಸುವ ಸಮಯ ಇದೀಗ ಬಂದಿದೆಎಂದು ಅವರು ನುಡಿದರು.

"ಕಳೆದ ಒಂದು ದಶಕದಲ್ಲಿ, ನಿತೀಶ್ ಜಿ  ನೇತೃತ್ವದಲ್ಲಿ ಎನ್ ಡಿಎ ಸರ್ಕಾರವು ಸ್ವಾವಲಂಬಿ ಬಿಹಾರಕ್ಕೆ ಬಲವಾದ ಅಡಿಪಾಯವನ್ನು ಹಾಕಿದೆ. ವಿದ್ಯುತ್, ನೀರು ಮತ್ತು ರಸ್ತೆಗಳಂತಹ ಮೂಲ ಸೌಲಭ್ಯಗಳು ಇಂದು ಬಿಹಾರದ ಹಳ್ಳಿ ಹಳ್ಳಿಗಳಿಗೂ ತಲುಪಿದೆ. ಇಂದು, ವಿದ್ಯುತ್ ಬಳಕೆ ಅತಿ ಹೆಚ್ಚು ಇರುವ ರಾಜ್ಯಗಳಲ್ಲಿ ಬಿಹಾರವೂ ಒಂದುಎಂದು ಅವರು ಹೇಳಿದರು.

ಎನ್ಡಿಎಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಲು ಪ್ರಧಾನಿ ಜನ್ ಧನ್ ಯೋಜನೆ ಮತ್ತು ಮುದ್ರಾ ಯೋಜನೆ ಸೇರಿದಂತೆ ತಮ್ಮ ಸರ್ಕಾರ ಪ್ರಾರಂಭಿಸಿದ ವಿವಿಧ ಯೋಜನೆಗಳ ಪಟ್ಟಿ ಮಾಡಿದರು. "ಜನ ಧನ್ ಯೋಜನೆಯಿಂದಾಗಿ, ಕೊರೋನಾದಲ್ಲಿನ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ನೇರವಾಗಿ ಬಿಹಾರದ ಲಕ್ಷಾಂತರ ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಇದೇ ಜನ ಧನ್ ಯೋಜನೆ ಮೂಲಕ ಸಾಂಕ್ರಾಮಿಕದ ಅವಧಿಯಲ್ಲಿ ಲಕ್ಷಾಂತರ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರದ ನೇರ ಸಹಾಯ ತಲುಪಿದೆಎಂದು ಅವರು ವಿವರಿಸಿದರು.

ಹಿಂದಿನ ದಿನ, ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ) ಕಳೆದ ಒಂದು ದಶಕವನ್ನು ಜನರ ಅಗತ್ಯಗಳನ್ನು ಪೂರೈಸಲು ವ್ಯಯಿಸಿದೆ ಮತ್ತು ಈಗ ಅವರ ಆಕಾಂಕ್ಷೆಗಳನ್ನು ನೋಡಿಕೊಳ್ಳುವತ್ತ ಗಮನ ಹರಿಸಿದೆ ಎಂದು ಹೇಳಿದರು.

ಅರಾರಿಯಾ ಜಿಲ್ಲೆಯ ಉತ್ತರ ಬಿಹಾರ ಪಟ್ಟಣವಾದ ಫೋರ್ಬೆಸ್ಗಂಜ್ನಲ್ಲಿ ನಡೆದ ಸಭೆಯಲ್ಲಿ ಭಾಷಣ ಮಾಡುವಾಗ ಅವರು ಬಿಹಾರದ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ ಎಂಬುದನ್ನು ತಳ್ಳಿಹಾಕಿದರು.

"ಕಳೆದ ದಶಕವನ್ನು ಅವಶ್ಯಕ್ತಾಯೇಂ (ಅಗತ್ಯಗಳು) ಪೂರೈಸುವಲ್ಲಿ ಕಳೆದೆವು. ಮುಂದಿನ ದಶಕವನ್ನು ಆಕಾಂಕ್ಷೆಗಳ ಈಡೇರಿಕೆಗಾಗಿ ಮೀಡಲಿಡಬೇಕು.  ನಾವು ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ಗಳನ್ನು ತರುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ನಾವು ಅನಿಲ ಪೈಪ್ಲೈನ್ಗಳಿಗೆ ಬಡ್ತಿ ಪಡೆಯುತ್ತೇವೆ. ಕಳೆದ ದಶಕದಲ್ಲಿ, ನಾವು ರಸ್ತೆಗಳನ್ನು ನಿರ್ಮಿಸಿದ್ದೇವೆ, ಈಗ ನಾವು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಅಸ್ತಿತ್ವದಲ್ಲಿರುವ ವಿಮಾನಗಳಿಗೆ ಫೇಸ್ ಲಿಫ್ಟ್ ನೀಡುತ್ತಿದ್ದೇವೆಎಂದು ಅವರು ಹೇಳಿದರು.

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರವೃತ್ತಿಗಳು ಮತ್ತು ನಡೆಯುತ್ತಿರುವ ಎರಡನೆಯ ಹಂತದಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಜನತಾದಳ ನಾಯಕ ತೇಜಸ್ವಿ ಯಾದವ್ ಇಬ್ಬರುಡಬಲ್ ಯುವರಾಜ್ರನ್ನು ತಿರಸ್ಕರಿಸಿದ್ದಾರೆ ಎಂದು ಮೋದಿ ಪ್ರತಿಪಾದಿಸಿದರು.

"ಬಿಹಾರದಲ್ಲಿ, ರಂಗ್ಬಾಜಿ (ರೌಡಿವಾದ) ಮತ್ತು ರಂಗ್ಡಾರಿ (ಸುಲಿಗೆ) ಅಸ್ತಿತ್ವ ಕಳೆದುಕೊಳ್ಳುತ್ತಿದೆ ಮತ್ತು ವಿಕಾಸ್ (ಅಭಿವೃದ್ಧಿ) ಮತ್ತು ಕಾನೂನ್ ಕಾ ರಾಜ್ (ಕಾನೂನಿನ ಆಡಳಿತ) ಗೆಲ್ಲುತ್ತಿದೆ, ಪರಿವಾರ ವಾದವನ್ನು (ಕುಟುಂಬ ಆಡಳಿತ) ಜನತಂತ್ರ ಸೋಲಿಸುತ್ತಿದೆಎಂದು ಅವರು ಹೇಳಿದರು.

ಕಾಂಗ್ರೆಸ್ನತ್ತ ತಮ್ಮ ಬಂದೂಕು ತಿರುಗಿಸಿದ ಮೋದಿ, ವಿರೋಧ ಪಕ್ಷವು ಯಾವಾಗಲೂ ಬಡತನ ನಿರ್ಮೂಲನೆ, ಕೃಷಿ ಸಾಲ ಮನ್ನಾ ಮತ್ತು ನಿವೃತ್ತ ಸೈನಿಕರಿಗೆ ಒಂದು ಶ್ರೇಣಿ-ಒಂದು ಪಿಂಚಣಿ ನೀಡುವ ಸುಳ್ಳು ಭರವಸೆಗಳನ್ನು ನೀಡಿದೆ ಎಂದು ಆರೋಪಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಪಕ್ಷವು ಈಗ ೧೦೦ ಕ್ಕಿಂತ ಕಡಿಮೆ ಸಂಸದರನ್ನು ಹೊಂದಲು ಇದು ಕಾರಣವಾಗಿದೆ. ಯುಪಿ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಅವರನ್ನು ಮೂರನೇ, ನಾಲ್ಕನೇ ಅಥವಾ ಐದನೇ ಸ್ಥಾನಕ್ಕೆ ಕೆಳಗಿಳಿಸಲಾಗಿದೆ ಮತ್ತು ಉಳಿವಿಗಾಗಿ ಇತರ ಪಕ್ಷಗಳನ್ನು ಅವಲಂಬಿಸಿದ್ದಾರೆಎಂದು ಪ್ರಧಾನಿ ಹೇಳಿದರು.

ಕೊರೋನವೈರಸ್ ಸಾಂಕ್ರಾಮಿಕ ರೋಗದ ಹೊರತಾಗಿಯೂ ನಡೆದ ಮೊದಲ ಹಂತದ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಮತದಾರರರನ್ನು ಪ್ರಧಾನಿ ಶ್ಲಾಘಿಸಿದರು.

"ಇದು ಭಾರತದಲ್ಲಿ ಪ್ರಜಾಪ್ರಭುತ್ವದ ಆಳವಾದ ಬೇರುಗಳನ್ನು ಗಮನಿಸಲು ಮತ್ತು ಅರ್ಥಮಾಡಿಕೊಳ್ಳಲು ಜಗತ್ತಿಗೆ, ಪ್ರಪಂಚದಾದ್ಯಂತದ ಎಲ್ಲಾ ಥಿಂಕ್ ಟ್ಯಾಂಕ್ಗಳಿಗೆ ಒಂದು ಸಂದರ್ಭವಾಗಿದೆಎಂದು ನುಡಿದ ಅವರು ಇದಕ್ಕಾಗಿ ಚುನಾವಣಾ ಆಯೋಗವನ್ನು ಶ್ಲಾಘಿಸಿದರು.

No comments:

Advertisement