Monday, November 2, 2020

ನೀರವ್ ಮೋದಿ ಹಸ್ತಾಂತರ: ನವೆಂಬರ್ 03ಕ್ಕೆ ವಿಚಾರಣೆ

 ನೀರವ್ ಮೋದಿ ಹಸ್ತಾಂತರ:  ನವೆಂಬರ್ 03ಕ್ಕೆ ವಿಚಾರಣೆ

ಲಂಡನ್: ಬ್ಯಾಂಕ್ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದ ಆರೋಪಿ ವಜ್ರ ಉದ್ಯಮಿ ನೀರವ್ ಮೋದಿ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ನಿನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2020 ನವೆಂಬರ್ ೦೩ರ ಮಂಗಳವಾರ ಒಂದು ದಿನದ ವಿಚಾರಣೆ ನಡೆಸಲಿದೆ.

ಅಕ್ಟೋಬರ್ ೨೬ ರಂದು ಆರನೇ ಬಾರಿಗೆ ನ್ಯಾಯಾಲಯ ನೀರವ್ ಮೋದಿಗೆ ಜಾಮೀನು ನಿರಾಕರಿಸಿತ್ತು.

ಮಂಗಳವಾg ವಿಚಾರಣೆಯು ಮೋದಿಯ ವಿರುದ್ಧ ಭಾರತ ಸರ್ಕಾರ ಮಂಡಿಸಿದ ಸಾಕ್ಷ್ಯಗಳ ಸ್ವೀಕಾರಾರ್ಹತೆ ಬಗ್ಗೆ ಇರುತ್ತದೆ ಎನ್ನಲಾಗಿದೆ. ಮೋದಿ ಪರ ವಕೀಲರ ತಂಡವು ಹಿಂದೆ ಇಂಗ್ಲೆಂಡಿನ ನ್ಯಾಯಾಲಯಗಳಲ್ಲಿ ಸ್ವೀಕಾರಾರ್ಹತೆಯ ಮಾನದಂಡಗಳನ್ನು ಸಾಕ್ಷ್ಯಗಳು ಪೂರೈಸುವುದಿಲ್ಲ ಎಂದು ವಾದಿಸಿತ್ತು.

ಮೋದಿಯ ಪ್ರಮುಖ ವಕೀಲ ಕ್ಲೇರ್ ಮಾಂಟ್ಗೊಮೆರಿ ಅವರ ಪ್ರಕಾರ, ಭಾರತದ ವಿರುದ್ಧದ ಪ್ರಮುಖ ಹಣಕಾಸಿನ ಅಕ್ರಮಗಳ ಆರೋಪಗಳು ಬಹಳ ಸುದೀರ್ಘವಾಗಿವೆ. ಆದರೆ ಪುರಾವೆಗಳು ಇರುವುದು ಬಹಳ ಕಡಿಮೆ ಎಂದು ಹೇಳಿದ್ದರು.

ಸೆಪ್ಟೆಂಬರಿ ಐದು ದಿನಗಳಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅಭಯ್ ತಿಪ್ಸೆ ಅವರು ಮೋದಿಯವರ ಪರವಾಗಿ ಭಾರತದಿಂದ ವಿಡಿಯೋ ಲಿಂಕ್ ಮೂಲಕ ಸಾಕ್ಷ್ಯ ನೀಡಿದ್ದಾಗ  ಪ್ರಕರಣದ ವಿಚಾರಣೆ ನಡೆಯಿತು.

ಭಾರತದ ಪರವಾಗಿ ಕ್ರೌನ್ ಪ್ರಾಸಿಕ್ಯೂಷನ್ ಸೇವೆ ಮತ್ತು ಮೋದಿ ತಂಡವು ಮುಕ್ತಾಯದ ಹೇಳಿಕೆಗಳನ್ನು ನೀಡುವ ನಿರೀಕ್ಷೆಯಿರುವಾಗ ಡಿಸೆಂಬರ್ ಆರಂಭದಲ್ಲಿ ಮತ್ತೊಂದು ವಿಚಾರಣೆಯನ್ನು ನಿಗದಿಪಡಿಸಲಾಗಿದೆ.

ಮೋದಿಯನ್ನು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಹಸ್ತಾಂತರಿಸುವಂತೆ ಶಿಫಾರಸು ಮಾಡುವ ನ್ಯಾಯಾಲಯದ ತೀರ್ಪು ೨೦೨೧ ಆರಂಭದಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಮೋದಿ ಹಸ್ತಾಂತgವು  ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಮನವಿಗಳನ್ನು ಆಧರಿಸಿದೆ.

ಮೋದಿ ವಿರುದ್ಧದ ಆರೋಪಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮುಂಬೈ ಶಾಖೆಗೆ ಸಂಬಂಧಿಸಿದೆ. ಅದು ತನ್ನ ಕಂಪೆನಿಗಳ ೧೧,೩೦೦ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡದೆ ವಂಚಿಸಿದ್ದಕ್ಕೆ ಸಂಬಂಧಿಸಿದೆ. ಸಿಬಿಐ ವಂಚನೆ ಬಗ್ಗೆ ತನಿಖೆ ನಡೆಸಿದ್ದರೆ, ವಂಚಿಸಿದ ಹಣವನ್ನು ವರ್ಗಾಯಿಸಿದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೊಂಡಿದೆ.

ಸಿಬಿಐ ಪ್ರಕರಣದ ಭಾಗವಾಗಿ ಎರಡು ಹೆಚ್ಚುವರಿ ಅಪರಾಧಗಳ ಆಧಾರದ ಮೇಲೆ ಎರಡನೇ ಹಸ್ತಾಂತರದ ವಿನಂತಿಯನ್ನು ಮಾಡಲಾಗಿದೆ, "ಸಾಕ್ಷಿಗಳ ಕಣ್ಮರೆಗೆ ಕಾರಣವಾಗುವ" ಮತ್ತು ಸಾಕ್ಷಿಗಳನ್ನು ಬೆದರಿಸುವ ಮೂಲಕ ("ಸಾವಿಗೆ ಕಾರಣವಾಗುವ ಕ್ರಿಮಿನಲ್ ಬೆದರಿಕೆ") ಮೋದಿ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪಗಳಿಗೆ ಇದು ಸಂಬಂಧಿಸಿದೆ.

No comments:

Advertisement